ಮರಳಿ ಕಾಡಾನೆಗಳ ಧಾಳಿ
ಮುಳ್ಳೇರಿಯ: ಅಡೂರು ಸಮೀಪದ ಕುಗ್ರಾಮ ಪಾಂಡಿ ಪರಿಸರದಲ್ಲಿ ಮಿತಿಮೀರಿದ ಕಾಡಾನೆಗಳ ಧಾಳಿ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಬುಧವಾರ ರಾತ್ರಿ ಪಾಂಡಿ, ಮುತುವತ್ತುಮೂಲೆ ಪರಿಸರಗಳಲ್ಲಿ ತೀವ್ರ ಧಾಳಿ ನಡೆಸಿರುವ ಕಾಡಾನೆಗಳ ಹಿಂಡು ತೆಂಗು ಹಾಗೂ ಬಾಳೆ ಕೃಷಿಗಳಿಗೆ ವ್ಯಾಪಕ ಹಾನಿಯೆಸಗಿರುವುದು ಕಂಡುಬಂದಿದೆ. ಧಾಳಿ ನಡೆಸಿರುವ ಕಾಡಾನೆಗಳ ಹಿಂಡಿನಲ್ಲಿ ಕನಿಷ್ಠ ಐದು ಆನೆಗಳಿದ್ದವೆಂದು ಸ್ಥಳೀಯರು ತಿಳಿಸಿದ್ದಾರೆ.
ಗುರುವಾರ ಮುಮಜಾನೆಯ ತನಕ ವ್ಯಾಪಕ ಪುಮಡಾಟಿಕೆ ತೋರಿಸಿರುವ ಕಡಾನೆಗಳ ಹಿಂಡು ಬಳಿಕ ಘೀಳಿಡುತ್ತ ಕಾಡೊಳಗೆ ಸೇರಿಕೊಮಡಿವೆಯೆಂದು ನಾಗರಿಕರು ತಿಳಿಸಿದ್ದಾರೆ. ಕಾಡಾನೆಗಳ ವ್ಯಾಪಕ ಧಾಳಿಯಿಂದ ಕಂಗೆಟ್ಟಿರುವ ಪಾಂಡಿ ಪರಿಸರದ ಜನರು ಗುರುವಾರ ಮಕ್ಕಳನ್ನು ಶಾಲೆಗೆ ಕಳಿಸಲು ಹಿಮದೇಟು ಹಾಕಿದ್ದು, ಮಕ್ಕಳು ಮನೆಯಲ್ಲೇ ಉಳಿಯಬೇಕಾಯಿತು. ಜನಸಾಮಾನ್ಯರೂ ಗುರುವಾರ ಭೀತಿಯಿಂದಿರುವುದು ಕಂಡುಬಂತು.