HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕನ್ನಡ ವಿದ್ಯಾಥರ್ಿಗಳ ಬಗ್ಗೆ ಕೇರಳ ಶಿಕ್ಷಣ ಇಲಾಖೆಯ ಮಲತಾಯಿ ಧೋರಣೆ
    ಕಲೆ, ವೃತ್ತಿಶಿಕ್ಷಣ, ದೈಹಿಕಶಿಕ್ಷಣ ವಿಷಯಗಳಿಗೆ ಕನ್ನಡ ಪಠ್ಯಪುಸ್ತಕಗಳಿಲ್ಲ- ಕನ್ನಡದಲ್ಲಿ ಕಲಿಸುವ ಶಿಕ್ಷಕರೂ ಇಲ್ಲ
           ಕಾಟಾಚಾರದ ಪರೀಕ್ಷೆ, ಎಲ್ಲರೂ ಪಾಸ್, ಸರಕಾರದ ಸಂಬಳ ಫೋಲು
   ಕಾಸರಗೋಡು: ಬಹುಭಾಷಾ ಸಂಗಮಭೂಮಿಯಾಗಿದ್ದರೂ ಕಾಸರಗೋಡು ಜಿಲ್ಲೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ ಎಂಬುದನ್ನು ರಾಜಕಾರಣಿಗಳು ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಆಯೋಗಗಳನ್ನು ರಚಿಸುತ್ತಾರೆ. ಆದರೆ ಆಯೋಗದ ಮೇಲೆ ಆಯೋಗಗಳನ್ನು ರಚಿಸಿದರೂ ಇಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇದಕ್ಕೆ ಕಾರಣ ಮೂಲ ಸಮಸ್ಯೆಗಳನ್ನು ಬಗೆಹರಿಸುವ ಆಸಕ್ತಿಯಿಲ್ಲದೆ ಒಳ್ಳೆಯ ಯೋಜನೆಗಳಲ್ಲೂ ಭ್ರಷ್ಟಾಚಾರ, ಅದಕ್ಷತೆ, ಸ್ವಜನಪಕ್ಷಪಾತ ನಡೆಸುವುದು. ಇದರಿಂದ ಸರಕಾರಿ ಯೋಜನೆಗಳ ಫಲ ಜನಸಾಮಾನ್ಯನಿಗೆ ದೊರೆಯುವುದಿಲ್ಲ. ಈ ರೋಗ ಶಿಕ್ಷಣರಂಗವನ್ನು ಕೂಡ  ಬಾಧಿಸುತ್ತಿರುವುದು ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡಿದೆ.
    ಕಾಸರಗೋಡಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಹಿಂದಿನ ಉಮ್ಮನ್ ಚಾಂಡಿ ಸರಕಾರ ಡಾ.ಪ್ರಭಾಕರನ್ ಆಯೋಗವನ್ನು ರಚಿಸಿತ್ತು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದರೆ ಕಾಸರಗೋಡಿನ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಆಯೋಗ ಸ್ಪಷ್ಟಪಡಿಸಿದ್ದು ಭಾಷಾ ಅಲ್ಪಸಂಖ್ಯಾಕರ ಶ್ರೇಯೋಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ಶಿಫಾರಸ್ಸು ಮಾಡಿತ್ತು. ಆದರೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪನೆಯನ್ನು ಹೊರತುಪಡಿಸಿದರೆ ಭಾಷಾ ಅಲ್ಪಸಂಖ್ಯಾಕರ ಪರವಾದ ಉಳಿದ ಯಾವುದೇ ಶಿಫಾರಸ್ಸುಗಳೂ ಜ್ಯಾರಿಯಾಗಲಿಲ್ಲ. ಈಗಿನ ಸರಕಾರದ ಮುಂದೆ ಕೂಡ ಹಲವು ಪ್ರಸ್ತಾಪಗಳಿದ್ದು ಅವುಗಳನ್ನು ಅನುಷ್ಠಾನಗೊಳಿಸುವ ಕಾಳಜಿ ಕಾಣಿಸುವುದಿಲ್ಲ. ಜಿಲ್ಲಾ ಮುದ್ರಣಾಲಯ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುವಾದ ವಿಭಾಗ, ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮಾಯಿಪ್ಪಾಡಿಯಲ್ಲಿ ಕನ್ನಡಮಾಧ್ಯಮ ಪೂರ್ವಪ್ರಾಥಮಿಕ ಶಿಕ್ಷಕತರಬೇತಿ ಕೇಂದ್ರ, ಪಾತರ್ಿಸುಬ್ಬ ಯಕ್ಷಗಾನಕೇಂದ್ರಕ್ಕೆ ಕಾಯಕಲ್ಪ ಹೀಗೆ ಹಲವಾರು ಪ್ರಸ್ತಾಪಗಳು ನೆನೆಗುದಿಗೆ ಬಿದ್ದಿವೆ. ಮುಂದಿನ ತಿಂಗಳು ರಾಜ್ಯಸರಕಾರ ಮಂಡಿಸಲಿರುವ ಮುಂಗಡಪತ್ರದಲ್ಲಿ ಭಾಷಾ ಅಲ್ಪಸಂಖ್ಯಾಕರಿಗಾಗಿ ಯಾವುದಾದರೂ ಕಲ್ಯಾಣಯೋಜನೆಗಳಿವೆ ಎಂದು ನಿರೀಕ್ಷಿಸುತ್ತಿರುವ ಮುಗ್ಧಜನರು ಎಂದಿನಂತೆ ಆಶಾವಾದಿಗಳಾಗಿದ್ದಾರೆ.
       ಯೋಜನೆಗಳಲ್ಲಿ ಭಾಷಾ ಅಲ್ಪಸಂಖ್ಯಾಕರ ನಿರ್ಲಕ್ಷ್ಯ:
   ಸರಕಾರಿ ಯೋಜನೆಗಳನ್ನು ರೂಪಿಸುವಾಗ ಭಾಷಾ ಅಲ್ಪಸಂಖ್ಯಾಕರನ್ನು  ನಿರ್ಲಕ್ಷಿಸಲಾಗುತ್ತದೆ ಹಾಗೂ ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದರೂ ಕಡೆಗಣಿಸಲಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಕೇರಳದ ಶಾಲೆಗಳಲ್ಲಿ ಕಲೆ, ವೃತ್ತಿಶಿಕ್ಷಣ, ದೈಹಿಕ ಮತ್ತು ಆರೋಗ್ಯಶಿಕ್ಷಣವನ್ನು ಬೋಧಿಸುವ ಉತ್ತಮ ಯೋಜನೆಯೊಂದನ್ನು ಸರಕಾರ ರೂಪಿಸಿತ್ತು. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ದೈನಂದಿನ ವೇತನದ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೆ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಾಗ ಅವರಿಗೆ ಕನ್ನಡಭಾಷೆ ತಿಳಿದಿರಬೇಕು ಎಂಬ ಪ್ರಾಥಮಿಕ ಅಂಶವನ್ನು ಕೂಡ ನಿರ್ಲಕ್ಷಿಸಲಾಯಿತು. ಲೋಕಸೇವಾ ಆಯೋಗದ ಬದಲು ಇಲಾಖೆಯ ಕೈಕೆಳಗೆ ಜಿಲ್ಲಾಮಟ್ಟದಲ್ಲಿ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ, ರಾಜಕೀಯ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಏನೇ ರಾಜಕೀಯ ಪ್ರಭಾವವಿದ್ದರೂ ಕನ್ನಡಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಕನಿಷ್ಠಪಕ್ಷ ಎಸ್.ಎಸ್.ಎಲ್.ಸಿ ತನಕದ ಕನ್ನಡಭಾಷಾ ಜ್ಞಾನವಿರಬೇಕೆಂಬ ಕನಿಷ್ಠ ವಿದ್ಯಾರ್ಹತೆಯನ್ನು ಕಡೆಗಣಿಸಬಾರದಿತ್ತು. ಆದರೆ ಕನ್ನಡ ವಿದ್ಯಾಥರ್ಿಗಳಿಗೆ ಕನ್ನಡಬಾರದ ಶಿಕ್ಷಕರನ್ನು ನೇಮಿಸಿದ್ದರಿಂದ ಈ ಶಿಕ್ಷಕರು ವಿದ್ಯಾಥರ್ಿಗಳಿಗೆ ಪಾಠಮಾಡದೆ ಕಾಟಾಚಾರಕ್ಕೆ ಶಾಲೆಗಳಿಗೆ ಬಂದು ಸಂಬಳ ಪಡೆದುಕೊಂಡು ಹೋಗುತ್ತಿದ್ದಾರೆ. ವಷರ್ಾಂತ್ಯದಲ್ಲಿ ನೆಪಮಾತ್ರಕ್ಕೆ ಪರೀಕ್ಷೆ ನಡೆಸಿ ಎಲ್ಲ ವಿದ್ಯಾಥರ್ಿಗಳನ್ನೂ ತೇರ್ಗಡೆಗೊಳಿಸಲಾಗುತ್ತದೆ. ಇದರಿಂದ ಪಾಠ ಓದುವ ಶ್ರಮವಿಲ್ಲದ, ನಾಪಾಸಾಗುವ ಭಯವಿಲ್ಲದ ವಿದ್ಯಾಥರ್ಿಗಳೂ ಖುಷ್. ಕೆಲಸಮಾಡದೆ ಸಂಬಳ ತೆಗೆದುಕೊಳ್ಳುವ ಅಧ್ಯಾಪಕರೂ ಖುಷ್. ಸರಕಾರದ ಖಜಾನೆ ಲೂಟಿಯಾಗುತ್ತಿದೆಯಲ್ಲದೆ ಇದರಿಂದ ಸಮಾಜಕ್ಕೆ ಏನು ಲಾಭವಾಯಿತು ಎಂಬುದನ್ನು ಸರಕಾರವೇ ಹೇಳಬೇಕು. ಸರಕಾರದ ಒಳ್ಳೆಯ ಯೋಜನೆಗಳು ಹೊಳೆಯಲ್ಲಿ ತೊಳೆದ ಹುಣಸೆಹಣ್ಣಿನಂತೆ ಹೇಗೆ ವ್ಯರ್ಥವಾಗಿ  ಹೋಗುತ್ತವೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ.
    ಕನ್ನಡ ಪಠ್ಯಪುಸ್ತಕಗಳೂ ಇಲ್ಲ:
   ದಾಖಲೆ ಪ್ರಕಾರ ಕಲೆ, ವೃತ್ತಿಶಿಕ್ಷಣ, ಆರೋಗ್ಯ-ದೈಹಿಕ ಶಿಕ್ಷಣಗಳನ್ನು ಐದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕಲಿಸಲಾಗುತ್ತದೆ. ಆದರೆ ಕನ್ನಡ ಮಾಧ್ಯಮದ ವಿದ್ಯಾಥರ್ಿಗಳಿಗೆ ಕಲಿಸಲು ಈ ವಿಷಯಗಳಿಗೆ ಕನ್ನಡ ಪಠ್ಯಪುಸ್ತಕಗಳೇ ಇನ್ನೂ ತಯಾರಾಗಿಲ್ಲ. ಮೂರು ವರ್ಷಗಳು ಇದೇ ರೀತಿ ಕಳೆದುಹೋಗಿವೆ. ಇನ್ನು ಪಠ್ಯಪುಸ್ತಕಗಳು ತಯಾರಾದರೂ ಮಕ್ಕಳ ಕೈ ಸೇರಲು ಎಷ್ಟು ವರ್ಷಗಳು ಬೇಕಾಗಬಹುದೋ ತಿಳಿದಿಲ್ಲ. ಅಷ್ಟರಲ್ಲಿ ಈ ಸರಕಾರ ಕೆಳಗಿಳಿದಿರುತ್ತದೆ. ಮುಂದಿನ ಸರಕಾರ ಈ ಯೋಜನೆಯನ್ನು ರದ್ದುಮಾಡಿ ಇನ್ನೊಂದು ಯೋಜನೆಯನ್ನು ರೂಪಿಸುತ್ತದೆ. ಇದರ ನಡುವೆ ಸರಕಾರದ ಹಣ ಯಾರದೋ ಕೈಸೇರುತ್ತದೆ. ಒಟ್ಟಿನಲ್ಲಿ ಶಿಕ್ಷಣರಂಗಕ್ಕಾಗಲೀ ಕನ್ನಡ ವಿದ್ಯಾಥರ್ಿಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಈ ಹಗಲು ದರೋಡೆ ವಿರುದ್ಧ ಪ್ರತಿಭಟಿಸುವವರು ಯಾರೂ ಇಲ್ಲ.
   ಕಾಸರಗೋಡಿನ ಕನ್ನಡ ಪ್ರದೇಶದ ಅಂಗನವಾಡಿಗಳಿಗೆ ಮಲೆಯಾಳ ಪಠ್ಯಪುಸ್ತಕಗಳನ್ನು ಮಾತ್ರ ವಿತರಿಸಲಾಗುತ್ತಿತ್ತು. ಮಲೆಯಾಳದಲ್ಲಿಯೇ ಪಾಠಮಾಡುವಂತೆ ಮೇಲ್ವಿಚಾರಕರು ಅಂಗನವಾಡಿ ಶಿಕ್ಷಕಿಯರನ್ನು ಬೆದರಿಸುತ್ತಿದ್ದಾರೆಂದೂ ಅನಿವಾರ್ಯವಾಗಿ ಮಲೆಯಾಳ ಕಲಿಯುವ ಮಕ್ಕಳನ್ನು ಮುಂದೆ ಮಲೆಯಾಳ ಶಾಲೆಗಳಿಗೆ ಸೇರಲು ಪ್ರೇರೇಪಿಸಲಾಗುತ್ತದೆ ಎಂಬ ಆರೋಪವೂ ಇದೆ. ಕನ್ನಡ ಸಂಘಟನೆಗಳ ಹೋರಾಟದ ಫಲವಾಗಿ ಸಂವಿಧಾನದ 350 ಎ ವಿಧಿಯಂತೆ ಭಾಷಾ ಅಲ್ಪಸಂಖ್ಯಾಕರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಕೇಂದ್ರ ಭಾಷಾ ಅಲ್ಪಸಂಖ್ಯಾಕ ಆಯೋಗವೂ ರಾಜ್ಯಸರಕಾರಕ್ಕೆ ಸೂಚಿಸಿತ್ತು. ಇದರ ಫಲವಾಗಿ ಅಂಗನವಾಡಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಹಾಗೂ ಕೈಪಿಡಿಗಳನ್ನು ತಯಾರಿಸುವ ಸಿದ್ಧತೆಗಳು ನಡೆಯುತ್ತವೆ. ಇದೇ ರೀತಿ ಜನಜಾಗೃತಿ ಹೋರಾಟ ನಡೆದರೆ ಮಾತ್ರ ವೃತ್ತಿಶಿಕ್ಷಣ ಮೊದಲಾದ ವಿಷಯಗಳಿಗೂ ಕನ್ನಡ ಪಠ್ಯಪುಸ್ತಕಗಳು ದೊರೆಯಲು ಸಾಧ್ಯ. ಇದೇ ರೀತಿ ಕನ್ನಡ ವಿದ್ಯಾಥರ್ಿಗಳಿಗೆ ಈ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಕನ್ನಡ ಭಾಷಾಜ್ಞಾನವಿರಬೇಕೆಂಬ ನಿಯಮವನ್ನು ರೂಪಿಸುವುದೂ ಅಗತ್ಯ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries