HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ಜಾಸ್ತಿ ಇಟ್ಟುಕೊಳ್ಳುವಂತಿಲ್ಲ-  ಭೂಮಿಯ ನ್ಯಾಯಬೆಲೆಯಲ್ಲಿ  ಶೇ.20ರ ತನಕ ಹೆಚ್ಚಳಕ್ಕೆ ಸರಕಾರ ಚಿಂತನೆ
    ಕಾಸರಗೋಡು: ಕೇರಳದ ಜಮೀನಿನ ನ್ಯಾಯಬೆಲೆಯಲ್ಲಿ  ಶೇ.10ರಿಂದ 20ರ ವರೆಗೆ ಹೆಚ್ಚಳಗೊಳಿಸಲು ರಾಜ್ಯ ಸರಕಾರವು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಅದರಂತೆ ಭೂಮಿಯ  ನ್ಯಾಯಬೆಲೆಯನ್ನು  ಹೆಚ್ಚಿಸುವ ಕುರಿತು ಫೆಬ್ರವರಿ 2ರಂದು ಹಣಕಾಸು ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ವಿಧಾನಸಭೆಯಲ್ಲಿ  ಮಂಡಿಸುವ ಬಜೆಟ್ನಲ್ಲಿ  ಅಧಿಕೃತ ಘೋಷಣೆಯನ್ನು  ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
   ಕಳೆದ ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ  ಭೂಮಿಯ ನ್ಯಾಯಬಲೆ ಹೆಚ್ಚಿಸಲಾಗಿತ್ತು. ಕೇರಳವು ಈಗ ಆಥರ್ಿಕ ಬಿಕ್ಕಟ್ಟು  ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಆದಾಯ ಹೆಚ್ಚಿಸಲು ಸರಕಾರವು ಹಲವು ಹೊಸ ಮಾರ್ಗಗಳನ್ನು  ಹುಡುಕತೊಡಗಿದೆ. ಅದರಲ್ಲಿ  ಭೂಮಿಯ ನ್ಯಾಯಬೆಲೆ ಹೆಚ್ಚಿಸುವುದು ಸೇರಿದೆ. ಭೂಮಿಯ ನ್ಯಾಯಬೆಲೆ ಏರಿಸಿದಲ್ಲಿ  ಸ್ಟಾಂಪ್ ಡ್ಯೂಟಿ ಮತ್ತು  ನೋಂದಾವಣೆ ಶುಲ್ಕ ಮೂಲಕ ಸರಕಾರಕ್ಕೆ ಹೆಚ್ಚು  ವರಮಾನ ದೊರಕಲಿದೆ.
ಜಮೀನಿನ ನ್ಯಾಯಬೆಲೆಯನ್ನು  ನಿಗದಿಪಡಿಸುವ ತೀಮರ್ಾನವನ್ನು  2010ರಲ್ಲಿ  ಕೇರಳ ಸರಕಾರವು ಮೊತ್ತ ಮೊದಲಾಗಿ ಕೈಗೊಂಡಿತ್ತು. ಆ ಬಳಿಕ 2014ರಲ್ಲಿ  ನ್ಯಾಯಬೆಲೆಯಲ್ಲಿ  ಶೇಕಡಾ 50ರಷ್ಟು  ಹೆಚ್ಚಳಗೊಳಿಸಲಾಗಿತ್ತು. ಆದರೂ ನ್ಯಾಯಬೆಲೆಗಿಂತಲೂ ಕಡಿಮೆ ದರದಲ್ಲೇ ರಾಜ್ಯದ ಹೆಚ್ಚಿನೆಡೆಗಳಲ್ಲಿ  ಈಗ ಭೂವ್ಯವಹಾರ ನಡೆಯುತ್ತಿದೆ. ಸೆಂಟ್ಸ್ಗೆ ನಾಲ್ಕು ಲಕ್ಷ  ರೂಪಾಯಿ ವರೆಗೆ ಇರುವ ಭೂಮಿಗೆ ಹಲವೆಡೆಗಳಲ್ಲಿ  7500ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ  ನೋಂದಾವಣೆ ಮಾಡಲಾಗುತ್ತಿದೆ ಎಂದು ಸರಕಾರವು ಈ ಹಿಂದೆ ಪತ್ತೆಮಾಡಿತ್ತು.
  ಭೂಮಿ ನೋಂದಾವಣೆ ಮತ್ತು  ಸ್ಟಾಂಪ್ ಡ್ಯೂಟಿ ಮೂಲಕ ಸರಕಾರಕ್ಕೆ ಪ್ರತಿ ವರ್ಷ 3000 ಕೋಟಿ ರೂ. ಆದಾಯ ಲಭಿಸುತ್ತಿದೆ. ಭೂಮಿಯ ನ್ಯಾಯಬೆಲೆ ಹೆಚ್ಚಿಸಿದಲ್ಲಿ  ಒಟ್ಟು  ಆದಾಯದಲ್ಲಿ  100 ಕೋಟಿ ರೂ. ಅಕ ವರಮಾನ ಲಭಿಸುವ ನಿರೀಕ್ಷೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries