ಕೊಚ್ಚಿಯಲ್ಲಿ ರಾಷ್ಟ್ರೀಯ ಬೊಂಬೆಯಾಟ ಉತ್ಸವ
ಕೆ.ವಿ.ರಮೇಶ್ ತಂಡಕ್ಕೆ ಅಧಿಕೃತ ಆಹ್ವಾನ
ಕಾಸರಗೋಡು: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವತಿಯಿಂದ ಜನವರಿ 9 ರಿಂದ 12 ರ ವರೆಗೆ ಕೊಚ್ಚಿಯಲ್ಲಿ ನಡೆಯುವ ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಪ್ರದರ್ಶನ ನೀಡಲು ಕಾಸರಗೋಡಿನ ಕೆ.ವಿ.ರಮೇಶ್ ನೇತೃತ್ವದ ತಂಡಕ್ಕೆ ಅಧಿಕೃತ ಆಹ್ವಾನ ಲಭಿಸಿದೆ. ಕೇರಳ ಫೈನ್ ಆಟ್ಸರ್್ ಸೊಸೈಟಿ ಸಹಯೋಗದಲ್ಲಿ ರಾಷ್ಟ್ರೀಯ ಬೊಂಬೆಯಾಟ ಉತ್ಸವವನ್ನು ಆಯೋಜಿಸಲಾಗಿದೆ.
ಕರಾವಳಿ ಕನರ್ಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದಶರ್ಿಸುತ್ತಿರುವ ಕೆ.ವಿ.ರಮೇಶ್ ನಿದರ್ೇಶನದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ದೇಶ ವಿದೇಶಗಳಲ್ಲಿ ಬೊಂಬೆಯಾಟ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಿ ಅಳಿವಿನ ಅಂಚಿನಲ್ಲಿರುವ ಪರಂಪರಾಗತ ಕಲೆಗೆ ಪುನರ್ಜನ್ಮ ನೀಡುತ್ತಿದೆ. ಹಲವಾರು ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿದೆ. ದೆಹಲಿ, ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ ಮೊದಲಾದೆಡೆಗಳಲ್ಲಿ ನಡೆದ ರಾಷ್ಟ್ರೀಯ ಬೊಂಬೆಯಾಟ ಉತ್ಸವಗಳಲ್ಲಿ ತಂಡ ಭಾಗವಹಿಸಿದ್ದು ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ನಿರಂತರ ಆಹ್ವಾನ ಲಭಿಸುವ ಪಟ್ಟಿಯಲ್ಲಿ ಸೇರಿಕೊಂಡಿದೆ.
ಕೊಚ್ಚಿಯಲ್ಲಿ ನಡೆಯುವ ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಪಾಲ್ಗೊಳ್ಳುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪ್ರಧಾನ ಸೂತ್ರಧಾರರಾಗಿರುವ ಕೆ.ವಿ.ರಮೇಶ ಜೊತೆಗೆ ಸೂತ್ರಧಾರರಾದ ಡಾ.ಓಂ ಪ್ರಕಾಶ್ ಕೆ.ವಿ, ಶ್ರೀವತ್ಸ ಕೆ.ವಿ, ತಿರುಮಲೇಶ್ ಕೆ.ವಿ, ಸುದರ್ಶನ ಕೆ.ವಿ, ಅನೀಶ್ ಪಿ, ಗೀತಾ ಕೆ, ದೀಕ್ಷಾ ಭಾಗವಹಿಸುವರು. ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ವಿವಿಧ ರಾಜ್ಯಗಳ ವೈವಿಧ್ಯಮಯ ಶೈಲಿಯ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ.