ಜ.5-10 : ಸಿಪಿಸಿಆರ್ಐ ಸ್ಥಾಪನಾ ದಿನ, ಕೃಷಿಕರ ಮೇಳ
ಕಾಸರಗೋಡು: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ) ಕಾಸರಗೋಡು ಇದರ ಸ್ಥಾಪನಾ ದಿನ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಾಸರಗೋಡು ಇದರ ಬೆಳ್ಳಿ ಹಬ್ಬದ ಸಮಾರಂಭ ಹಾಗೂ ಆತ್ಮ ತಂತ್ರಜ್ಞಾನ ಸಂಗಮದ ಪ್ರಯುಕ್ತ ಕೃಷಿಕರ ಸಮಾವೇಶ ಜ.5 ರಿಂದ 10 ರ ವರೆಗೆ ನಡೆಯಲಿದೆ.
ಜ.8 ರಂದು ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಪೂವರ್ಾಹ್ನ 10 ರಿಂದ ಆರಂಭಗೊಂಡು ಸಂಜೆ 7 ಗಂಟೆಯ ವರೆಗೆ ಕಾರ್ಯಕ್ರಮ ಜರಗಲಿದೆ. ಜ.5 ರಂದು ಪೂವರ್ಾಹ್ನ 10 ರಿಂದ ನೆಲ-ಜಲ ಸಂರಕ್ಷಣಾ ತಂತ್ರಜ್ಞಾನಗಳು ವಿಚಾರಗೋಷ್ಠಿ, ಮಧ್ಯಾಹ್ನ 2 ಗಂಟೆಗೆ ಉತ್ತಮ ಮೌಲ್ಯದ ಹಾಗೂ ಕಡಿಮೆ ಬಳಕೆಯಲ್ಲಿರುವ ಹಣ್ಣುಗಳ ಕೃಷಿ ಕುರಿತು ವಿಚಾರಗೋಷ್ಠಿ ನಡೆಯುವುದು. ಜ.6 ರಂದು ಬೆಳಗ್ಗೆ ಕೊಕ್ಕೋ ಉತ್ಪಾದನೆ ಮತ್ತು ಸಂಸ್ಕರಣೆ, ಮಧ್ಯಾಹ್ನ 2 ರಿಂದ ಮೀನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಮತ್ತು ಆಡು ಸಾಕಣೆ, 7 ರಂದು ಬೆಳಗ್ಗೆ ಹಸಿರು ಉದ್ಯಮಕ್ಕೆ ಚಾಲನೆ-ಕೃಷಿ ಕೈಗಾರಿಕಾ ಸಬಲೀಕರಣ, 8 ರಂದು ಮಧ್ಯಾಹ್ನ ಕೃಷಿಕರು, ವಿಜ್ಞಾನಿಗಳು ವಿಚಾರ ವಿನಿಮಯ ನಡೆಯುವುದು.
ಜ.9 ರಂದು ಬೆಳಗ್ಗೆ ಜೇನು ಸಾಕಣೆ, 10 ರಂದು ಬೆಳಗ್ಗೆ ನಗರ ಹಾಗೂ ನಗರದ ಹೊರವಲಯದ ತೋಟಗಾರಿಕೆ, ಮಧ್ಯಾಹ್ನ ತೆಂಗು, ಮಾವು ಹಾಗೂ ಹಲಸಿನ ಬಳಕೆಯಲ್ಲಿ ಮೌಲ್ಯಮಾಪನ ಕುರಿತಾಗಿ ವಿಚಾರಸಂಕಿರಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೃಷಿ ಸಂಬಂಧಿತ ಪ್ರದರ್ಶನಗಳು ನಡೆಯಲಿದೆ.
ಡಿ.8 ರಂದು ಬೆಳಗ್ಗೆ 11 ಗಂಟೆಗೆ ಕಿಸಾನ್ ಮೇಳ ಉದ್ಘಾಟನೆಗೊಳ್ಳಲಿದೆ. ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಅಗ್ರಿ-ಬ್ಯುಸಿನೆಸ್ ಎಕ್ಸ್ಪೋ ಉದ್ಘಾಟಿಸುವರು. ಪ್ರಥಮ ಅಂಚೆ ಕಾಡರ್್ನ್ನು ಪೋಸ್ಟ್ ಮಾಸ್ಟರ್ ಜನರಲ್ ಎಸ್.ಎಫ್.ಎಚ್. ರಿಜ್ವಿ ಬಿಡುಗಡೆಗೊಳಿಸುವರು. ಇದೇ ಸಂದರ್ಭದಲ್ಲಿ ಉತ್ತಮ ತೆಂಗು, ಅಡಿಕೆ, ಕೊಕ್ಕೋ ಕೃಷಿಕರನ್ನು ಗೌರವಿಸಲಾಗುವುದು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ಡಾ.ಬಿ.ಎನ್.ಎಸ್.ಮೂತರ್ಿ, ಮೊಗ್ರಾಲ್ಪುತ್ತೂರು ಪಂಚಾಯತು ಅಧ್ಯಕ್ಷ ಎ.ಎ.ಜಲೀಲ್, ಆತ್ಮ ಯೋಜನಾ ನಿದರ್ೇಶಕಿ ಕೆ.ಟಿ.ಲೀನಾ ಶುಭಹಾರೈಸುವರು.
ಶತಮಾನಗಳನ್ನು ಪೂರೈಸಿರುವ ಕಾಸರಗೊಡು ಸಿಪಿಸಿಆರ್ಐ ಕೇಂದ್ರ ಕಾಲಾಕಾಲಕ್ಕನುಗುಣವಾಗಿ ಕೃಷಿ ಸ್ನೇಹಿ ಚಟುವಟಿಕೆ, ವಿಚಾರ ಸಂಕಿರಣಗಳ ಆಯೋಜನೆಯ ಮೂಲಕ ಗಮನ ಸೆಳೆಯುತ್ತಿದೆ.