ಪ್ರತಿಭಟನೆ
ಬದಿಯಡ್ಕ : ಚೀನೀ ದೇಶದ ಪರ ಹೇಳಿಕೆಯನ್ನು ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದು, ಬದಿಯಡ್ಕದಲ್ಲಿ ಯುವಮೋಚರ್ಾ ನೇತೃತ್ವದಲ್ಲಿ ಪಿಣರಾಯಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಯಿತು.
ಶನಿವಾರ ಸಂಜೆ ಬದಿಯಡ್ಕ ಪೇಟೆಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಯುವಮೋಛರ್ಾ ರಾಜ್ಯ ಸಮಿತಿ ಸದಸ್ಯ ಪಿ.ಆರ್. ಸುನಿಲ್ ಮಾತನಾಡಿ ಜನ್ಮನೀಡಿದ ಮಾತೃಭೂಮಿಯ ಅನ್ನವನ್ನು ತಿಂದು ದೇಶ ವಿರೋಧಿ ಹೇಳಿಕೆಯನ್ನು ಓರ್ವ ಮುಖ್ಯಮಂತ್ರಿಯಾಗಿ ನೀಡಿದ್ದು ದೇಶವನ್ನು ನಾಚುವಂತೆ ಮಾಡಿದೆ. ಓರ್ವ ಪ್ರಜ್ಞಾವಂತ ವ್ಯಕ್ತಿಯಾದ ಮುಖ್ಯಮಂತ್ರಿ ಪಿಣರಾಯಿ ನಮ್ಮ ದೇಶಕ್ಕೇ ಕಪ್ಪುಚುಕ್ಕೆಯಾಗಿದೆ. ಕೂಡಲೇ ಕ್ಷಮೆಯಾಚಿಸದಿದ್ದಲ್ಲಿ ಉಗ್ರಹೋರಾಟವನ್ನು ಮುಂದುವರಿಸಲಾಗುವುದು ಎಂಬ ಎಚ್ಚರಿಕೆಯನ್ನು ಮಾತನ್ನು ಹೇಳಿದರು. ಯುವಮೋಛರ್ಾ ಮಂಡಲ ಅಧ್ಯಕ್ಷ ಅವಿನಾಶ್ ರೈ, ಯುವಮೋಛರ್ಾ ಪಂಚಾಯತಿ ಅಧ್ಯಕ್ಷ ಶರತ್ ಶೆಟ್ಟಿ, ಭಾಸ್ಕರ ಬದಿಯಡ್ಕ, ನ್ಯಾಯವಾದಿ ಗಣೇಶ್, ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ರಮೇಶ ಕೆಡೆಂಜಿ, ಪ್ರಸಾದ ಕನಕಪ್ಪಾಡಿ ಹಾಗೂ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.