ಭಾಗವತ ಗಿರೀಶ್ ರೈ ಕಕ್ಕೆಪದವು ಹಾಡಿರುವ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಬಿಡುಗಡೆ
ಮಂಜೇಶ್ವರ : ಹೈ ಟೆಕ್ ಸಿನಿ ಕ್ರಿಯೇಷನ್ಸ್ ಮಂಜೇಶ್ವರ ಆಶ್ರಯದಲ್ಲಿ ಯೋಗೀಶ ರಾವ್ ಚಿಗುರುಪಾದೆ ಸಾಹಿತ್ಯದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಗಿರೀಶ್ ರೈ ಕಕ್ಕೆಪದವು ಹಾಡಿರುವ ಅಯ್ಯಪ್ಪ ಸ್ವಾಮಿ ಬಗೆಗಿನ ಭಕ್ತಿಗೀತೆಯನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಇತ್ತೀಚೆಗೆ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಹಾಡನ್ನು ಸಂಪೂರ್ಣವಾಗಿ ಆಲಿಸಿದ ಶ್ರೀಗಳು ಸಾಹಿತ್ಯ ಹಾಗೂ ಹಾಡಿನ ಬಗ್ಗೆ ಮೆಚ್ಚುಗೆಯನ್ನಾಡುತ್ತಾ 'ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಕ್ತರಿಗೆ ಉಚಿತವಾಗಿ ಯೂ ಟ್ಯೂಬ್ ಮೂಲಕ ಹಾಡು ಲಭಿಸುವಂತೆಮಾಡುವ ಈ ಕಾರ್ಯ ಅನುಕರಣೀಯ. ಸಿನಿ ಕ್ರಿಯೇಷನ್ ನಿಂದ ಇನ್ನಷ್ಟು ಇಂಥ ಸೇವಾ ಕಾರ್ಯಗಳು ಜರಗಲಿ ನಾಡಿನಾದ್ಯಂತ ಪದ್ಯದ ಕಂಪು ಹರಡಲಿ' ಎಂದು ಈ ಸಂದರ್ಭ ಆಶೀರ್ವಚನ ನುಡಿಗಳನ್ನಾಡಿದರು.
ಸುಂದರ ಗುರುಸ್ವಾಮಿ ಅಂಗಡಿಪದವು, ಹೈ ಟೆಕ್ ಸಿನಿ ಕ್ರಿಯೇಷನ್ಸ್ ಮಂಜೇಶ್ವರ ಸಂಸ್ಥೆಯ ಚಿದಾನಂದ ಅರಿಬೈಲು, ರವಿಚಂದ್ರ ಶೆಟ್ಟಿ ಅರಿಬೈಲು, ಹಾಡಿನ ಕೆಮರಾ ಹಾಗೂ ಎಡಿಟಿಂಗ್ ಮಾಡಿದ ರವಿ ಗಟ್ಟಿ ಕುಂಬಳೆ, ಸಾಹಿತ್ಯ ರಚಿಸಿದ ಯೋಗೀಶ ರಾವ್ ಚಿಗುರುಪಾದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಿಥುನ್ ರಾಜ್ ವಿದ್ಯಾಪುರ ಸಂಗೀತ ನೀಡಿದ 'ಕಾಡ ನಡುವೆ ಗುಡಿಯೊಳಿರುವ' ಅಯ್ಯಪ್ಪ ಸ್ವಾಮಿ ಬಗೆಗಿನ ಹಾಡು ಸಾಯಿ ರಾಂ ಸ್ಟುಡಿಯೋ ಮಂಗಳೂರಿನಲ್ಲಿ ಧ್ವನಿ ಮುದ್ರಣ ಗೊಂಡಿತ್ತು. ಇದೀಗ ಆಸಕ್ತರಿಗೆ ಉಚಿತವಾಗಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ.