ರಸ್ತೆಗೆ ಕಸ ಸುರಿದ ಅಂಗಡಿ ಮುಂದೆಯೇ ಕಸ ಹಾಕಿ ಜಾಗೃತಿ
ರಾಮಕೃಷ್ಣ ಮಿಷನ್ ಸ್ವಯಂಸೇವಕನಿಂದ ವಿಶಿಷ್ಟ ಅಭಿಯಾನ
ಮಂಗಳೂರು: ರಸ್ತೆಯಲ್ಲಿ ಪದೇಪದೇ ಸುರಿಯುತ್ತಿದ್ದ ಕಸವನ್ನು ಮತ್ತೆ ಅಂಗಡಿ ಮುಂದೆ ಸುರಿಯುವ ಮೂಲಕ ಯುವ ಸ್ವಯಂಸೇವಕನೊಬ್ಬ ಅಂಗಡಿ ಮಾಲೀಕನಿಗೆ ತನ್ನ ತಪ್ಪಿನ ಅರಿವು ಮೂಡಿಸಿದ್ದಾನೆ.
ರಾಮಕೃಷ್ಣ ಮಿಷನ್ ವತಿಯಿಂದ ಪ್ರತೀ ಭಾನುವಾರ ನೂರಾರು ಸ್ವಯಂಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ, ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ತಂದು ಹಾಕುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ಸ್ವಯಂಸೇವಕರು ಕಸ ಹಾಕಿದ್ದು ಯಾರು ಎನ್ನುವುದನ್ನು ಪರಿಶೀಲಿಸಿದ್ದಾರೆ. ಕಸದಲ್ಲಿದ್ದ ರಸೀದಿಯ ಸಹಾಯದಿಂದ ಕಸ ಹಾಕಿದ ಅಂಗಡಿ ಬಳಿಗೆ ತೆರಳಿ ವಾಪಸ್ ಅವರ ಅಂಗಡಿಗೆ ಕಸವನ್ನು ಸುರಿದಿದ್ದಾರೆ.
ಸ್ವಯಂಸೇವಕ ಸೂರಜ್ ಕಸವನ್ನು ಅಂಗಡಿಯಲ್ಲಿ ಸುರಿಯುತ್ತಿದ್ದಂತೆ ಅಂಗಡಿ ಮಾಲೀಕ ಕಕ್ಕಾಬಿಕ್ಕಿಯಾದರು. ಆದರೆ, ತಮ್ಮ ತಪ್ಪಿನ ಅರಿವಿನಿಂದ ಸುಮ್ಮನಾಗಿದ್ದಾರೆ.
ಇನ್ನು ಮುಂದೆ ಇದೇ ರೀತಿಯ ಅಭಿಯಾನ ನಡೆಸಲು ರಾಮಕೃಷ್ಣ ಮಿಷನ್?ನ ಸ್ವಯಂಸೇವಕರು ಮುಂದಾಗಿದ್ದು, ಎಲ್ಲೆಂದರಲ್ಲಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ.