ಹಳ್ಳಿಗೆ ತಲುಪಿದ ಕನರ್ಾಟಕ ಗ್ರಾಮಾಂತರ ಸಾರಿಗೆ
ಉಪ್ಪಳ: ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ಎಂಬಂತೆ ಕನರ್ಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಬಸ್ಸು ಸಂಚಾರ ಗಡಿ ಪ್ರದೇಶವಾದ ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕ ಪ್ರದೇಶಕ್ಕೆ ಆರಂಭವಾಗಿದೆ. ಗ್ರಾಮಸ್ಥರ ದೂರ ಸಂಚಾರಕ್ಕೆ ಅನುಕೂಲವಾಗಿರುವ ಗ್ರಾಮಾಂತರ ಸಾರಿಗೆ ಬಸ್ಸು ಧರ್ಮತ್ತಡ್ಕದಿಂದ ಬಂದ್ಯೋಡು ಮೂಲಕ ಉಪ್ಪಳ ಮಾರ್ಗವಾಗಿ ಮಂಗಳೂರು ತಲುಪಲಿದೆ.ದಿನಂಪ್ರತಿ ಮೂರು ಬಾರಿ ಸಂಚಾರ ನಡೆಸಲಿರುವ ಬಸ್ಸು ಧರ್ಮತ್ತಡ್ಕದಿಂದ ಬೆಳಗ್ಗೆ 8.35 ಕ್ಕೆ ಹೊರಡಲಿದೆ.ಮಧ್ಯಹ್ನ 1.30 ಹಾಗೂ ಸಾಯಂಕಾಲ 6.10 ಕ್ಕೆ ಬಸ್ಸು ಮಂಗಳೂರು ಕಡೆಗೆ ಪ್ರಯಾಣ ಬೆಳೆಸಲಿದೆ.
ದಶಕಗಳ ಬೇಡಿಕೆ ಈಡೇರಿಕೆ:
ದಶಕಗಳಿಂದ ಧರ್ಮತ್ತಡ್ಕ ಭಾಗವಾಗಿ ಬಸ್ಸು ಸಂಚಾರ ಆರಂಭಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಈ ಬಗ್ಗೆ ಸ್ಥಳೀಯರು ಕೇರಳ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಸ್ಥಳಿಯ ಜನಪ್ರತಿನಿಧಿಗಳನ್ನು ವಿನಂತಿಸಿದ್ದರು.ಅದರಂತೆ ಕನರ್ಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ವತಿಯಿಂದ ಗ್ರಾಮಾಂತರ ಸಾರಿಗೆ ಬಸ್ಸು ಸಂಚಾರ ಗುರುವಾರ ಆರಂಭಗೊಂಡಿದ್ದು, ಈ ಭಾಗದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮತ್ತಡ್ಕದಿಂದ ಪ್ರವಾಸಿ ತಾಣ ಪೊಸಡಿಗುಂಪೆ ಹಾಗೂ ಬಾಯಾರುಪದವು ಮುಖಾಂತರ ಉಪ್ಪಳವಾಗಿ ಮಂಗಳೂರು ನಗರಕ್ಕೆ ಬಸ್ಸು ಸೌಕರ್ಯ ಕಲ್ಪಿಸುವಂತೆ ಸ್ಥಳೀಯ ಶಾಸಕ ಪಿ.ಬಿ ಅಬ್ದುಲ್ರಜಾಕ್ ಅವರಲ್ಲಿ ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ವರ್ಷದ ಹಿಂದೆ ಮನವಿ ನೀಡಿದ್ದು ಪರಿಗಣನೆಯಲ್ಲಿದೆ. ಗ್ರಾಮೀಣ ಭಾಗದ ಬಸ್ಸು ಸಂಚಾರವು ಗ್ರಾಮ ವಿಕಸನದ ಭಾಗವೂ ಆಗಿದ್ದು, ಮಂಗಳೂರು ಭಾಗಕ್ಕೆ ತೆರಳುವ ವಿದ್ಯಾಥರ್ಿ ಹಾಗೂ ಉದ್ಯೋಗಸ್ಥರಿಗೆ ಅನುಕೂಲವಾಗಲಿದೆ.