HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಮಧುರಕಾನನರಿಗೆ ಅಕ್ಷರದ ಮೂಲಕ ನುಡಿನಮನ
       ಗಡಿನಾಡು ಕಾಸರಗೊಡಿನ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಮೇರು ಸಾಧಕ ಮಧುರಕಾನನ ಗೋಪಾಲಕೃಷ್ಣ ಭಟ್ ರವರು ಶನಿವಾರ ನಮ್ಮನ್ನಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧುರಕಾನನರನ್ನು ಹತ್ತಿರದಿಂದ ಬಲ್ಲ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಸಮರಸದ ಮೂಲಕ ಇಲ್ಲಿ ನುಡಿನಮನ ಸಲಲಿಸಿದ್ದಾರೆ.
.............................................
     ವಿ.ಬಿ.ಕುಳಮರ್ವ.     
    ಮಧುರಕಾನನ ಗೋಪಾಲಕೃಷ್ಣ ಭಟ್ಟರು ಕಾಸರಗೋಡಿನ ಪಂಡಿತ ಪರಂಪರೆಯ ವಿದಗ್ಘರು.ನೂರಾರು ಕವನಗಳನ್ನು, ನಾಟಕಗಳನ್ನು, ಲೇಖನಗಳನ್ನು ಬರೆದ ಇವರು "ಮಕ್ಕಳ ಮಧುರ ರಾಮಾಯಣ" ಮಹಾಕಾವ್ಯ ವನ್ನು ರಚಿಸಿ ಕಾಸರಗೋಡಿನ ಮಕ್ಕಳ ಸಾಹಿತ್ಯದ ಮಹಾಕವಿಗಳೆಂಬ ಕೀತರ್ಿಗೆ ಪಾತ್ರರಾದರು. ಅಗಲ್ಪಾಡಿಯ ಶ್ರೀ ಅನ್ನಪೂಣರ್ೇಶ್ವರೀ ಪ್ರೌಢ ಶಾಲೆಯಲ್ಲಿ ಕನ್ನಡ ಪಂಡಿತರಾಗಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ದುಡಿದವರು.ಉತ್ತಮ ವಾಗ್ಮಿಗಳು,ಮಾತ್ರವಲ್ಲ ಸಂಪನ್ಮೂಲ ವ್ಯಕ್ತಿಗಳು. ಮಕ್ಕಳಿಗಾಗಿ "ಬೆಣ್ಣೆ" ಎಂಬ ಸುಂದರವಾದ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಿದವರು.ಹಳೆಗನ್ನಡ ಛಂದಸ್ಸಿನಲ್ಲಿ ಕವನ ರಚನೆ ಇವರಿಗೆ ಹವ್ಯಾಸ.ಎಲ್ಲಕ್ಕಿಂತ ಹೆಚ್ಚು ಇವರೊಬ್ಬಸಹೃದಯೀ ಸಜ್ಜನರು.ಇವರ ಅಗಲಿಕೆ ಕಾಸರಗೋಡಿನ ಮಾತ್ರವಲ್ಲ ಕನರ್ಾಟಕದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.ಅವರ ಸಾಧನೆಗೆ ಬಹಳಷ್ಟು ಉನ್ನತ ಪ್ರಶಸ್ತಿಗಳು ದೊರಕಿರುವುದೇ ಅವರ ಹಿರಿಮೆ ಗರಿಮೆಗಳಿಗೆ ಸಾಕ್ಷಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries