ರಸ್ತೆ ಕಾಂಕ್ರೀಟ್ ಅವೈಜ್ಞಾನಿಕ; ವಿಜಿಲೆನ್ಸ್ ಗೆ ದೂರು
ಕುಂಬಳೆ: ಮೂರೂವರೆ ಕೋಟಿ ರೂಪಾಯಿ ಖಚರ್ಿನಲ್ಲಿ ರಬ್ಬರೈಸ್ಡ್ ಡಾಮರೀಕರಣ ನಡೆಯಲಿರುವ ಕಳತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಭಾನುವಾರ ಕಾಂಕ್ರೀಟ್ ನಡೆಸಿದ ಕುಂಬಳೆ-ಕಂಚಿಕಟ್ಟೆ-ಮಳಿ ರಸ್ತೆಯ ಕೊನೆಯ ಹಂತ ಕಳಪೆ ಕಾಮಗಾರಿಯಿಂದ ಶೀಘ್ರ ಹಾನಿಗೊಳ್ಳಲಿದೆಯೆಂದು ಡಿವೈಎಫ್ಐ ಆರೋಪಿಸಿದೆ.
ಮಳಿ ರಸ್ತೆಯ ಅವೈಜ್ಞಾನಿಕ ಕಾಂ ಕ್ರೀಟ್ನ ಬಗ್ಗೆ ತನಿಖೆ ನಡೆಸಬೇಕೆಂದು ವಿಜಿಲೆನ್ಸ್ನೊಂದಿಗೆ ಆಗ್ರಹಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಗೆ ಅವೈಜ್ಞಾನಿಕ ರೀತಿಯಲ್ಲಿ ಕಾಂಕ್ರೀಟ್ ನಡೆಸಲಾಗುತ್ತಿದೆಯೆಂದು ಪಂಚಾಯತಿ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿಯಂತತರಿಗೆ ತಿಳಿಸಿದ್ದರೂ ಸ್ಥಳಕ್ಕೆ ಭೇಟಿನೀಡಲು ಕೂಡಾ ಅವರು ಮುಂದಾಗಲಿಲ್ಲ ಎಂದು ಡಿವೈಎಫ್ಐ ತಿಳಿಸಿದೆ.
ಕುಂಬಳೆ-ಕಂಚಿಕಟ್ಟೆ-ಮಳಿ ರಸ್ತೆಯ ಕಳತ್ತೂರು ರಸ್ತೆಗೆ ಸೇರುವ ಭಾಗದ 90 ಮೀಟರ್ ರಸ್ತೆಗೆ ಮೊನ್ನೆ ಕಾಂಕ್ರೀಟ್ ನಡೆಸಲಾಗಿದೆ. ಡಾಮರೀಕರಣ ರಸ್ತೆಗೆ ಕಾಂಕ್ರೀಟ್ ನಡೆಸುವಾಗ ಡಾಮರು ಅಗೆದು ತೆಗೆದು ಹೊಸತಾಗಿ ಉತ್ತಮ ಜಲ್ಲಿಕಲ್ಲುಗಳನ್ನು ಬಳಸಿ ರೋಲರ್ ಉಪಯೋಗಿಸಿ ಭದ್ರತೆ ಖಚಿತ ಪಡಿಸಿದ ಬಳಿಕ ಕಾಂಕ್ರೀಟ್ ನಡೆಸ ಬೇಕೆಂದೂ ಡಾಮರಿನ ಅಂಶವಿದ್ದರೆ ಅದು ಹಾನಿಗೀಡಾಗಲಿದೆಯೆಂದು ಲೋಕೋಪಯೋಗಿ ಅಭಿಯಂತರರು ತಿಳಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರನಿಗೆ ತಿಳಿಸಿದ್ದರೂ ಅಗೆದು ತೆಗೆದ ಡಾಮರು ತೆರವುಗೊಳಿಸದೆ ಅದರ ಮೇಲೆ ಜಲ್ಲಿ ಹಾಕಿ ಕಳಪೆ ಕಾಂಕ್ರೀಟ್ ನಡೆಸಿರುವುದಾಗಿ ದೂರುದಾತರು ತಿಳಿಸಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ಪರಿಸರದಿಂದ ಶೇಡಿಕಾವು-ಕಂಚಿಕಟ್ಟೆ-ಮಳಿ-ಪೆರುವತ್ತಡ್ಕ-ಚೂರಿತ್ತಡ್ಕ ರಸ್ತೆಯ ಕೊನೆಯ ಭಾಗದಲ್ಲಿ ಕಾಂಕ್ರೀಟ್ ನಡೆಸುವಲ್ಲಿ ಲೋಪವೆಸಗಲಾಗಿದೆಯೆಂದು ಅವರು ತಿಳಿಸಿದ್ದಾರೆ.