ಹೆದ್ದಾರಿ ಶಾಲೆಯಲ್ಲಿ ನಾಡಗೀತೆ ಕನ್ನಡ ಸ್ವರ ಕಾಯರ್ಾಗಾರ
ಉಪ್ಪಳ: ಗಡಿನಾಡಿನ ಯುವ ಕನ್ನಡ ಮನಸ್ಸುಗಳನ್ನು ಪ್ರೇರೇಪಿಸುವಲ್ಲಿ ಕನ್ನಡ ಸ್ವರದಂತಹ ಕಾರ್ಯಕ್ರಮಗಳು ಪ್ರಾಯೋಗಿಕವಾಗಿ ಯಶಸ್ವಿಯಾಗುತ್ತವೆ. ಗ್ರಾಮ ಗ್ರಾಮಗಳಲ್ಲಿ ಇಂತಹ ಯತ್ನಗಳು ಆಗಬೇಕು ಎಂದು ಮುಳಿಗದ್ದೆ ಹೆದ್ದಾರಿ ಶಾಲಾ ಪ್ರಬಂಧಕ ರಾಮಕೃಷ್ಣ ಭಟ್.ಎನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೊಡಿನ ಸಾಂಸ್ಕೃತಿಕ, ಸಾಹಿತ್ತಿಕ ಸಂಘಟನೆ ರಂಗಚಿನ್ನಾರಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕನ್ನಡ ಸ್ವರ ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಮುಳಿಗದ್ದೆ ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರವು ಅಗರ್ಭ ಶ್ರೀಮಂತಿಕೆಯ ಪ್ರಕಾರವಾಗಿ ಬೆಳೆದುನಿಂತಿದ್ದು, ಆ ಬಗೆಗಿನ ಅರಿವನ್ನು ವಿದ್ಯಾಥರ್ಿಗಳಿಗೆ ನೀಡಬೇಕಿದೆ. ಮಾತೃಭಾಷಾ ಮಾಧ್ಯಮದ ಮೂಲಕ ಪರಿಪುಷ್ಠಗೊಳ್ಳುವ ಜ್ಞಾನ ಪರಿಪೂರ್ಣತೆಯೊಂದಿಗೆ ಸಂತೃಪ್ತಿ ನೀಡುವುದೆಂದು ಅವರು ಈ ಸಂದರ್ಭ ತಿಳಿಸಿದರು.
ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಂಕರ ಭಟ್ ಉಳುವಾನ, ಮಾತೃ ಸಂಘದ ಅಧ್ಯಕ್ಷೆ ಭಾಗೀರಥಿ ಶುಭ ಹಾರೈಸಿದರು.
ಕನ್ನಡ ಸ್ವರ ಕಾರ್ಯಕ್ರಮದ ಸಂಚಾಲಕ ಸತ್ಯನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸ್ವರ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು. ತರಬೇತುದಾರ ಪ್ರಮೋದ್ ಸಪ್ರೆ ಕಾಯರ್ಾಗಾರವನ್ನು ನಡೆಸಿಕೊಟ್ಟರು.