HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸವಲತ್ತುಗಳು ಲಭಿಸಲು ಕಾಮರ್ಿಕರು ಸಂಘಟಿತರಾಗಬೇಕು : ಬಿಎಂಎಸ್
  ಕುಂಬಳೆ: ಇಂದು ಎಲ್ಲಾ ವಿಭಾಗದ ಕಾಮರ್ಿಕರಿಗೂ ಸರಕಾರದಿಂದ ಹಲವು ಕ್ಷೇಮ ಯೋಜನೆಗಳಿದ್ದರೂ ಗ್ರಾಮ ಪ್ರದೇಶಗಳ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾಮರ್ಿಕರು ಅರ್ಹತೆಯಿರುವ ಸವಲತ್ತುಗಳು ಲಭಿಸದೆ ವಂಚಿತರಾಗುತ್ತಾರೆ. ಅದಕ್ಕೆ ಬೇಕಾಗಿ ಎಲ್ಲಾ ವಿಭಾಗದ ಕಾಮರ್ಿಕರು ಸಂಘಟಿತರಾಗಬೇಕೆಂದು ಬಿಎಂಎಸ್ ಜಿಲ್ಲಾ ಜೊತೆಕಾರ್ಯದಶರ್ಿ ಕೆ.ನಾರಾಯಣ ಅವರು ಕಾಮರ್ಿಕರಿಗೆ ಕರೆಯಿತ್ತರು.
    ಅಂಬಿಲಡ್ಕ ಶ್ರೀ ರಾಮ ಭಜನಾ ಮಂದಿರದ ಪರಿಸರದಲ್ಲಿ ಭಾನುವಾರ ಜರಗಿದ ಬಿಎಂಎಸ್ ಯೂನಿಟ್ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಭಾಕರ ಶೆಟ್ಟಿ ಪತ್ತಾಯಮನೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆಕಾರ್ಯದಶರ್ಿ ಐತ್ತಪ್ಪ ನಾರಾಯಣಮಂಗಲ, ಕುಂಬಳೆ ವಲಯ ಅಧ್ಯಕ್ಷ ದಿನೇಶ್ ಬಂಬ್ರಾಣ ಮಾತನಾಡಿದರು.
  ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಶಂಕರ ಪಾಟಾಳಿ ಅಂಬಿಲಡ್ಕ, ಉಪಾಧ್ಯಕ್ಷರುಗಳಾಗಿ ರಮೇಶ್ ಆಳ್ವ ಅಡಿಗದ್ದೆ, ವಿಜಯಲಕ್ಷ್ಮಿ ಉಳುವಾರು, ಕಾರ್ಯದಶರ್ಿಯಾಗಿ ನಾಗೇಶ್ ಶೆಟ್ಟಿ ಬಟ್ಟುಕಲ್ಲು, ಜೊತೆ ಕಾರ್ಯದಶರ್ಿಗಳಾಗಿ ಪ್ರಭಾಕರ ಶೆಟ್ಟಿ ಪತ್ತಾಯಮನೆ, ವಿನಯ ಕುಮಾರಿ ಬಟ್ಟೆಕಲ್ಲು, ಕೋಶಾಧಿಕಾರಿಯಾಗಿ ಚಿದಾನಂದ ಶೆಟ್ಟಿ ಅಡಿಗದ್ದೆ, ಸದಸ್ಯರಾಗಿ ಜಗನ್ನಾಥ  ಆಳ್ವ ಅಡಿಗದ್ದೆ, ಯೋಗೀಶ್ ಆಚಾರ್ಯ ಅಂಬಿಲಡ್ಕ, ವಿಕ್ರಮ ಆಚಾರ್ಯ ಉಳುವಾರು, ವಿಷ್ಣು ಆಚಾರ್ಯ ಅಂಬಿಲಡ್ಕ, ವಿಶ್ವನಾಥ ಶೆಟ್ಟಿ ಅಡಿಗದ್ದೆ, ಲವಾನಂದ ಭಂಡಾರಿ ನಜರ್ಾಲು, ಜಯಲಕ್ಷ್ಮೀ ಅಂಬಿಲಡ್ಕ, ರಾಧಿಕ ಅಂಬಿಲಡ್ಕ, ಕವಿತ ಬಟ್ಟೆಕಲ್ಲು, ಮಲ್ಲಿಕಾ ಅಂಬಿಲಡ್ಕ, ಪುಷ್ಪವತಿ ಕೊಡ್ಡ ಅವರನ್ನು ಆರಿಸಲಾಯಿತು. ಶಂಕರ ಪಾಟಾಳಿ ಸ್ವಾಗತಿಸಿ, ನಾಗೇಶ್ ಬಟ್ಟೆಕಲ್ಲು ವಂದಿಸಿದರು. ಫೆಬ್ರವರಿ 24 ಮತ್ತು 25 ರಂದು ಕುಂಬಳೆಯಲ್ಲಿ ಜರಗುವ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries