ಬದಿಯಡ್ಕ ವಿದ್ಯಾಪೀಠದಲ್ಲಿ `ಕನ್ನಡ ಸ್ವರ' ಕಾಯರ್ಾಗಾರ
ಬದಿಯಡ್ಕ : ಕಾಸರಗೋಡಿನಲ್ಲಿ ಕನ್ನಡದ ಅಳಿವು ಉಳಿವು ಭಾಷೆಯನ್ನು ನಾವು ಉಪಯೋಗಿಸುವುದರ ಮೇಲೆ ನಿಂತಿದೆ. ಕನ್ನಡಿಗರಾದ ನಾವು ನಿತ್ಯಜೀವನದಲ್ಲಿ ಇನ್ನೂ ಹೆಚ್ಚು ಕನ್ನಡವನ್ನೇ ಉಪಯೋಗಿಸುತ್ತಾ ನಮ್ಮಲ್ಲಿ ಅದನ್ನು ಗಟ್ಟಿಗೊಳಿಸಬೇಕಾಗಿದೆ. ನಾನು ಗಮನಿಸಿದಂತೆ ವಿದ್ಯಾಪೀಠದ ವಿದ್ಯಾಥರ್ಿಗಳು ಸ್ಪಷ್ಟ ಮತ್ತು ನಿರರ್ಗಳತೆಯಿಂದ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಚಿನ್ನಾರಿ ಕಾಸರಗೋಡು ಇವರ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ `ಕನ್ನಡ ಸ್ವರ' ಕಾರ್ಯಕ್ರಮದ ಅಂಗವಾಗಿ ಸೋಮವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಾಡಗೀತೆ ಹಾಗೂ ಭಾವಗೀತೆಗಳನ್ನು ಮಕ್ಕಳಿಗೆ ಕಲಿಸುವ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
`ಕನ್ನಡ ಸ್ವರ'ದ ಸಂಚಾಲಕ ನಿವೃತ್ತ ವಿದ್ಯಾಧಿಕಾರಿ ಸತ್ಯನಾರಾಯಣ ಕೆ. ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಮಂಜೇಶ್ವರ ಗೋವಿಂದ ಪೈಯವರ ಭಾವಗೀತೆ ಹಾಗೂ ಕುವೆಂಪುರವರ ನಾಡಗೀತೆಯನ್ನು ಕಾಸರಗೋಡಿನಾದ್ಯಂತ ವಿವಿಧ ಶಾಲೆಗಳಲ್ಲಿ ವಿದ್ಯಾಥರ್ಿಗಳಿಗೆ ಲಯಬದ್ಧವಾಗಿ ಹಾಡುವುದನ್ನು ಕಲಿಸುವ ಕಾಯರ್ಾಗಾರವಿದು. ಈ ಎಲ್ಲಾ ಶಾಲೆಗಳಿಂದ ಆಯ್ದ 600ಕ್ಕಿಂತಲೂ ಹೆಚ್ಚು ವಿದ್ಯಾಥರ್ಿಗಳಿಂದ ಏಕ ಕಾಲದಲ್ಲಿ ಈ ಗೀತೆಗಳನ್ನು ಫೆ.3ರಂದು ಮಂಜೇಶ್ವರ ಗೋವಿಂದ ಪೈಯವರ `ಗಿಳಿವಿಂಡು'ನಲ್ಲಿ ಹಾಡುವುದರ ಮೂಲಕ ಈ ನೆಲದಲ್ಲಿ `ಕನ್ನಡ ಸ್ವರ'ವನ್ನು ಗಟ್ಟಿಗೊಳಿಸುವ ಮಹೋನ್ನತ ಕಾರ್ಯಕ್ರಮ ನಡೆಯಲಿರುವುದು. ತನ್ಮೂಲಕ `ಕಾಸರಗೋಡು ಕನ್ನಡ ನಾಡು, ಕನ್ನಡಿಗರ ನೆಲೆವೀಡು' ಎಂಬುದನ್ನು ಇನ್ನೊಮ್ಮೆ ಸಾರಿ ಹೇಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮೂರಲ್ಲಿ ಕನ್ನಡ ಉಳಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಾರೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯು ಪಠ್ಯಕ್ಕೆ ಸೀಮಿತವಾಗಿರದೆ ಜೀವನಾದರ್ಶಗಳನ್ನು ತಿಳಿಹೇಳುವ ಸುಂದರ ಬದುಕಿನ ಪ್ರತೀಕವಾದ ಇಂತಹ ರಚನಾತ್ಮಕ ಕಾರ್ಯಗಳು ಸದಾ ನಡೆಯುತ್ತಿರಲಿ ಎಂದರು. ಖ್ಯಾತ ಗಾಯಕ ಕಿಶೋರ್ ಪೆರ್ಲ ಸಂಪನ್ಮೂಲ ವ್ಯಕ್ತಿಯಾಗಿ ಕಾಯರ್ಾಗಾರವನ್ನು ನಡೆಸಿಕೊಟ್ಟರು. ಅಧ್ಯಾಪಿಕೆ ರಾಜೇಶ್ವರಿ ಪೈಕ ನಿರೂಪಿಸಿದರು.