ಚಳಿಗಾಲದ ಅಧಿವೇಶನ ಅಂತ್ಯ; ತ್ರಿವಳಿ ತಲಾಖ್ ಗೆ ಅನುಮೋದನೆ ಪಡೆಯುವಲ್ಲಿ ಸದನ ವಿಫಲ
ಅನಿಧರ್ಿಷ್ಟಾವಧಿಗೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ, ಮುಸ್ಲಿಂ ಮಹಿಳೆಯರಿಗೆ ನಿರಾಸೆ
ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಬಹು ನಿರೀಕ್ಷಿತ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ಪಡೆಯುವಲ್ಲಿ ಕೇಂದ್ರ ಸಕರ್ಾರ ವಿಫಲವಾಗಿದ್ದು, ಲೋಕಸಭೆ, ರಾಜ್ಯಸಭೆ ಕಲಾಪವನ್ನು ಅನಿಧರ್ಿಷ್ಟಾವಧಿಗೆ ಮುಂದೂಡಲಾಗಿದೆ.
ಈ ಹಿಂದೆ ಕೇಂದ್ರ ಸಕರ್ಾರ ಮಂಡಿಸಿದ್ದ ತ್ರಿವಳಿ ತಲಾಖ್ ಅನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರೋಧದಿಂದಾಗಿ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ದೊರೆತಿರಲಿಲ್ಲ. ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017ಕ್ಕೆ (ತ್ರಿವಳಿ ತಲಾಖ್ ನಿಷೇಧ ಮಸೂದೆ) ಸಂಬಂಧಿಸಿ ರಾಜ್ಯಸಭೆಯಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಶುಕ್ರವಾರವೂ ಮುಂದುವರೆದಿದ್ದು, ತ್ರಿವಳಿ ತಲಾಖ್ ಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಕೇಂದ್ರ ಸಕರ್ಾರ ವಿಫಲವಾಗಿದೆ.
ಬುಧವಾರವೇ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಕೇಂದ್ರ ಸಕರ್ಾರ ರಾಜ್ಯಸಭೆಯಲ್ಲಿ ಮಂಡಿಸಿತ್ತಾದರೂ, ಮಸೂದೆಯನ್ನು ಪರಿಷ್ಕರಿಸಲು ಪರಿಶೀಲನಾ ಸಮಿತಿಗೆ ಒಪ್ಪಿಸುವ ಪ್ರಸ್ತಾವವನ್ನು ಮತಕ್ಕೆ ಹಾಕಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸಕರ್ಾರ ತಿರಸ್ಕರಿಸಿತ್ತು. ಅಧಿವೇಶನದ ಕೊನೆಯ ದಿನವಾದ ಇಂದು ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇತ್ತು. ಅದರಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ತಮ್ಮ ತಮ್ಮ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಿದ್ದವು.
ಸಂಕ್ಷಿಪ್ತ:
ಚಳಿಗಾಲದ ಅಧಿವೇಶನ ಮುಕ್ತಾಯ : 12 ಮಸೂದೆ ಅಂಗೀಕಾರ
ಅಧಿವೇಶನದಲ್ಲಿ ಕೇಂದ್ರಿಯ ರಸ್ತೆ ನಿಧಿ(ತಿದ್ದುಪಡಿ) ಮಸೂದೆ, ಸರಕು ಮತ್ತು ಸೇವಾ ತೆರಿಗೆ(ರಾಜ್ಯಗಳಿಗೆ ತೆರಿಗೆ ಪರಿಹಾರ) ತಿದ್ದುಪಡಿ ಮಸೂದೆ, ಹೈಕೋಟರ್್ ಮತ್ತು ಸುಪ್ರೀಂಕೋಟರ್್ನ ನ್ಯಾಯಮೂತರ್ಿಗಳ ಸಂಬಳ ಹೆಚ್ಚಳದ ಮಸೂದೆಗಳು ಅಂಗೀಕಾರಗೊಂಡವು.
: ಮುಸ್ಲಿಂ ಮಹಿಳೆಯರ(ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್ ನಿಷೇಧ ಮಸೂದೆ) ಸೇರಿದಂತೆ 12 ಮಸೂದೆಗಳನ್ನು ಅಂಗೀಕರಿಸುವುದರೊಂದಿಗೆ ಲೋಕಸಭೆಯ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿತು.
ಅಧಿವೇಶನವನ್ನು ಅನಿದರ್ಿಷ್ಟಾವಧಿಯವರೆಗೆ ಮುಂದೂಡುತ್ತ ಸಭಾಧ್ಯಕ್ಷೆ ಸುಮಿತ್ರಾ ಮಹಜನ್ ಮಾತನಾಡಿ, `ಈ ಅಧಿವೇಶನದಲ್ಲಿ 61 ಗಂಟೆ 48 ನಿಮಿಷಗಳ ಕಾಲ ಕಲಾಪ ನಡೆಯಿತು. ಅದರಲ್ಲಿ 15 ಗಂಟೆಗಳ ಅವಧಿ ಗದ್ದಲ ಮತ್ತು ಕಲಾಪ ಮುಂದೂಡಿಕೆಯಿಂದಾಗಿ ವ್ಯರ್ಥವಾಯಿತು. 16 ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಯಿತು' ಎಂದರು.
ಈ ಬಾರಿಯ ಅಧಿವೇಶನದಲ್ಲಿ ಕೇಂದ್ರಿಯ ರಸ್ತೆ ನಿಧಿ(ತಿದ್ದುಪಡಿ) ಮಸೂದೆ, ಸರಕು ಮತ್ತು ಸೇವಾ ತೆರಿಗೆ(ರಾಜ್ಯಗಳಿಗೆ ತೆರಿಗೆ ಪರಿಹಾರ) ತಿದ್ದುಪಡಿ ಮಸೂದೆ, ಹೈಕೋಟರ್್ ಮತ್ತು ಸುಪ್ರೀಂಕೋಟರ್್ನ ನ್ಯಾಯಮೂತರ್ಿಗಳ ಸಂಬಳ ಹೆಚ್ಚಳದ ಮಸೂದೆಗಳು ಅಂಗೀಕಾರಗೊಂಡವು.
`ಕಲಾಪದ ವೇಳೆ 280 ಮುಖ್ಯ ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ 45 ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಲಾಯಿತು. ಉಳಿದ ಮುಖ್ಯ ಪ್ರಶ್ನೆಗಳು ಸೇರಿದಂತೆ 3,330 ಮುಖ್ಯ ಅಲ್ಲದ ಪ್ರಶ್ನೆಗಳನ್ನು ಸದನದ ಮುಂದಿಡಲಾಗಿದೆ' ಎಂದರು.
`ಇದೇ ವೇಳೆಯಲ್ಲಿ ಸ್ಥಾಯಿ ಸಮಿತಿ 41 ವರದಿಗಳನ್ನು ಸದನಕ್ಕೆ ಸಲ್ಲಿಸಿವೆ. ಹಾಗೆಯೇ 98 ಖಾಸಗಿ ಮಸೂದೆಗಳನ್ನು ಪರಿಚಯಿಸಲು ಅವಕಾಶ ಮಾಡಿಕೊಡಲಾಯಿತು' ಎಂದು ಸಭಾಧ್ಯಕ್ಷರು ಸದನಕ್ಕೆ ತಿಳಿಸಿದರು.