HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಿಡಿಎಸ್ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಪ್ರತಿಜ್ಞೆಗೆ ಪಂ ಅಧ್ಯಕ್ಷೆ ಬಹಿಷ್ಕಾರ-
                       ಯುಡಿಎಫ್ ಖಂಡನೆ
    ಪೆರ್ಲ: ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಕುಟುಂಬಶ್ರೀ ಘಟಕಗಳ ಪಂಚಾಯತು ಮಟ್ಟದ ಸಮಿತಿಯಾದ ಸಿಡಿಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಧ್ಯಕ್ಷೆ ಹಾಗೂ ಇತರ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಪ್ರತಿಜ್ಞೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಚುನಾವಣಾ ಅಧಿಕಾರಿಯನ್ನು ತಡೆದು ನಿಲ್ಲಿಸಿ ಘೋಷಣೆ ಕೂಗಿದ ಪಂಚಾಯತಿ ಅಧ್ಯಕ್ಷೆಯ ನಡೆವಳಿಕೆ ತಿಳಿಗೇಡಿತನ ಮತ್ತು ಖಂಡನಾರ್ಹ. ಹಾಲಿ ಪಂಚಾಯತಿ ಸದಸ್ಯರಿಗೆ ಸಿಡಿಎಸ್ ಸದಸ್ಯರಾಗಲು ಸಾಧ್ಯವಿಲ್ಲವೆಂದು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿರುವಾಗ  ಪಂಚಾಯತಿ ಹಾಲಿ ಸದಸ್ಯರನ್ನು  ಸಿಡಿಎಸ್ ಸದಸ್ಯರಾಗಲು ಚುನಾವಣಾಧಿಕಾರಿ ಅವಕಾಶ ನೀಡಲಿಲ್ಲ.ಇದರಿಂದಾಗಿ ಹಾಲಿ ಪಂ ಸದಸ್ಯೆಯನ್ನು ಸಿಡಿಎಸ್ ಸದಸ್ಯೆಯಾಗಿ ಅಯ್ಕೆ ಮಾಡುವ ಬಿಜೆಪಿ ಪ್ರಯತ್ನ ವಿಫಲವಾಯಿತು. ಕಾನೂನು ಬದ್ಧವಾಗಿ ಕ್ರಮ ಕೈಗೊಂಡಾಗ ಕಾನೂನು ವಿರುದ್ಧವೆನ್ನುವ ಪಂಚಾಯತಿ ಅಧ್ಯಕ್ಷೆ ಕಾನೂನು ಪುಸ್ತಕವನ್ನು ಒಮ್ಮೆ ಪೂರ್ಣವಾಗಿ ಓದಿಕೊಳ್ಳಬೇಕು. ಸಿಡಿಎಸ್ ಚುನಾವಣೆಯಲ್ಲಿ ಉಂಟಾದ ತೀವ್ರ ಮುಖಭಂಗದಿಂದಾಗಿ  ಪ್ರತಿಷ್ಠೆ ಉಳಿಸಿಕೊಳ್ಳಲು ಪಂಚಾಯತಿ ಅದ್ಯಕ್ಷೆ ವ್ಯರ್ಥ ಆರೋಪಮಾಡುತ್ತಿದ್ದಾರೆ ಎಂದು  ಯುಡಿಎಫ್ ಎಣ್ಮಕಜೆ ಪಂಚಾಯತಿ ಸಮಿತಿ ಆರೋಪಿಸಿದೆ.
   ರಾಜಕೀಯ ಕುತಂತ್ರ ಮತ್ತು ಅಧಿಕಾರ ದುರ್ಬಳಕೆ ಮಾಡಿ ಗೆಲುವಿಗಾಗಿ ಕ್ಷೇತ್ರ ಕಾರ್ಯ ನಡೆಸಿದ  ಬಿಜೆಪಿ ಗೆ ಒಂದಕ್ಕಿಂತ ಹೆಚ್ಚು ಸಿಡಿಎಸ್ ಸದಸ್ಯರನ್ನು ಚುನಾಯಿಸಲು ಸಾಧ್ಯವಾಗಲಿಲ್ಲ. ಸ್ವತಃ ಪಂಚಾಯತಿ ಅಧ್ಯಕ್ಷೆಯ ವಾಡರ್ಿನಲ್ಲಿ ಬಿಜೆಪಿಗೆ ಸಿಡಿಎಸ್ ಸದಸ್ಯೆ ಇಲ್ಲದೆ ಹೋದದ್ದು ಹಾಗೂ ಬಿಜೆಪಿ ಸದಸ್ಯರಗಳ ವಾಡರ್ಿನಲ್ಲಿ ಇತರ ಪಕ್ಷದ ಬೆಂಬಲಿತ ಸಿಡಿಎಸ್ ಸದಸ್ಯರು ಅಯ್ಕೆಯಾಗದ್ದು ಪಂಚಾಯತಿ ಅಡಳಿತದ ನಿದ್ದೆಗೆಡಿಸಿದೆ.ಬಿಜೆಪಿ ಅಡಳಿತವಿರುವ ಪಂಚಾಯತಿಯಲ್ಲಿ ಯುಡಿಎಫ್ ಬೆಂಬಲಿತ ಸಿಡಿಎಸ್ ಅಧ್ಯಕ್ಷೆ ಚುನಾವಣೆಯಲ್ಲಿ ಅಯ್ಕೆಯಾಗಿರುವುದು ಪಂಚಾಯತಿ ಅಧ್ಯಕ್ಷೆಯ ಅಧಿಕಾರ ದರ್ಪಕ್ಕೆ ಸಿಕ್ಕಿದ ತಿರುಗೇಟು. ಚುನಾವಣೆಯ ಕೊನೆಯ ಕ್ಷಣದಲ್ಲಿ ಸಿಡಿಎಸ್ ಸದಸ್ಯರನ್ನು ಸಂಪಕರ್ಿಸಿ ಜಾತಿ ಧರ್ಮದ ಹೆಸರಿನಲ್ಲಿ ಮತ ಪಡೆಯಲು ಪ್ರಯತ್ನಿಸಿಯೂ, ಬೆದರಿಸಿಯೂ ಗೆಲುವು ಸಾಧಿಸಲು ಹೊರಟವರಿಗೆ ಸೋಲಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಜನರ ಕೋಮುಭಾವನೆ ಕೆರಳಿಸಿದರೆ ಸುಲಭದಲ್ಲಿ ಅಧಿಕಾರಕ್ಕೆ ಲಭಿಸಬಹುದೆಂಬ ರಾಜಕೀಯ ಚಿಂತನೆಗೆ ಇದೊಂದು ಪಾಠವಾಗಿದೆಯೆಂದು ಯುಡಿಎಫ್ ಹೇಳಿಕೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries