HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸಿಪಿಸಿಆರ್ಐಯಲ್ಲಿ ಕೃಷಿಕರ ಸಮಾವೇಶ ಆರಂಭ
   ಕಾಸರಗೋಡು: ಕೇಂದ್ರೀಯ ತೋಟ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು ಇದರ ಸ್ಥಾಪನಾ ದಿನ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇದರ ಬೆಳ್ಳಿ ಹಬ್ಬ ಸಮಾರಂಭ, ಆತ್ಮ ತಂತ್ರಜ್ಞಾನ ಸಂಗಮದಂಗವಾಗಿ ಕೃಷಿಕರ ಸಮಾವೇಶ ಶುಕ್ರವಾರ ಆರಂಭಗೊಂಡಿತು.
   ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೃಷಿ ಬಗೆಗಿನ ಸಂಶೋಧನೆ ಕೃಷಿಕರಿಗೆ ತಲುಪಬೇಕು. ಈಗಾಗಲೇ ಹಲವು ಸಾಧನೆಗಳಿಂದ ಗುರುತಿಸಿಕೊಂಡಿರುವ ಸಿಪಿಸಿಆರ್ಐ ಕೃಷಿಕರಿಗೆ ನೆರವಾಗುತ್ತಿದ್ದು, ಕೃಷಿಗೆ ಎದುರಾಗುತ್ತಿರುವ ರೋಗಗಳ ಬಗ್ಗೆ ಆಗಾಗ ಮಾಹಿತಿ ನೀಡಬೇಕು. ಕೇರಳ ಸರಕಾರವೂ ಕೃಷಿಕರ ಸಮಸ್ಯೆ ಪರಿಹರಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
   ಕೃಷಿಕರ ಸಮಾವೇಶದ ಬಗ್ಗೆ ಪ್ರಿನ್ಸಿಪಲ್ ಕೃಷಿ ಅಧಿಕಾರಿ ಟಿ.ಆರ್.ಉಷಾದೇವಿ ಮಾಹಿತಿ ನೀಡಿದರು. ಐಎಂಸಿ ಸದಸ್ಯ ಸುರೇಶ್ ಕುಮಾರ್ ಶುಭಹಾರೈಸಿದರು. ಸಿಪಿಸಿಆರ್ಐ ನಿದರ್ೇಶಕ ಡಾ.ಪಿ.ಚೌಡಪ್ಪ ಅವರು ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಡಾ.ಸಿ.ತಂಬಾನ್ ವಂದಿಸಿದರು.
   ಬಳಿಕ ನೆಲ-ಜಲ ಸಂರಕ್ಷಣಾ ತಂತ್ರಜ್ಞಾನಗಳು ವಿಚಾರಗೋಷ್ಠಿ, ಮಧ್ಯಾಹ್ನ ಉತ್ತಮ ಮೌಲ್ಯದ ಹಾಗೂ ಕಡಿಮೆ ಬಳಕೆಯಲ್ಲಿರುವ ಹಣ್ಣುಗಳ ಕೃಷಿ ಕುರಿತು ವಿಚಾರಗೋಷ್ಠಿ ನಡೆಯಿತು.
   ಇಂದು ಬೆಳಗ್ಗೆ ಕೊಕ್ಕೋ ಉತ್ಪಾದನೆ ಮತ್ತು ಸಂಸ್ಕರಣೆ, ಮಧ್ಯಾಹ್ನ 2 ರಿಂದ ಮೀನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಮತ್ತು ಆಡು ಸಾಕಣೆ, 7 ರಂದು ಬೆಳಗ್ಗೆ ಹಸಿರು ಉದ್ಯಮಕ್ಕೆ ಚಾಲನೆ-ಕೃಷಿ ಕೈಗಾರಿಕಾ ಸಬಲೀಕರಣ, 8 ರಂದು ಮಧ್ಯಾಹ್ನ ಕೃಷಿಕರು, ವಿಜ್ಞಾನಿಗಳು ವಿಚಾರ ವಿನಿಮಯ ನಡೆಯುವುದು.
   ಜ.9 ರಂದು ಬೆಳಗ್ಗೆ ಜೇನು ಸಾಕಣೆ, 10 ರಂದು ಬೆಳಗ್ಗೆ ನಗರ ಹಾಗೂ ನಗರದ ಹೊರವಲಯದ ತೋಟಗಾರಿಕೆ, ಮಧ್ಯಾಹ್ನ ತೆಂಗು, ಮಾವು ಹಾಗೂ ಹಲಸಿನ ಬಳಕೆಯಲ್ಲಿ ಮೌಲ್ಯಮಾಪನ ಕುರಿತಾಗಿ ವಿಚಾರಸಂಕಿರಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೃಷಿ ಸಂಬಂಧಿತ ಪ್ರದರ್ಶನಗಳು ನಡೆಯಲಿದೆ.
   ಡಿ.8 ರಂದು ಬೆಳಗ್ಗೆ 11 ಗಂಟೆಗೆ ಕಿಸಾನ್ ಮೇಳ ಉದ್ಘಾಟನೆಗೊಳ್ಳಲಿದೆ. ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಅಗ್ರಿ-ಬ್ಯುಸಿನೆಸ್ ಎಕ್ಸ್ಪೋ ಉದ್ಘಾಟಿಸುವರು. ಪ್ರಥಮ ಅಂಚೆ ಕಾಡರ್್ನ್ನು ಪೋಸ್ಟ್ ಮಾಸ್ಟರ್ ಜನರಲ್ ಎಸ್.ಎಫ್.ಎಚ್. ರಿಜ್ವಿ ಬಿಡುಗಡೆಗೊಳಿಸುವರು. ಇದೇ ಸಂದರ್ಭದಲ್ಲಿ ಉತ್ತಮ ತೆಂಗು, ಅಡಿಕೆ, ಕೊಕ್ಕೋ ಕೃಷಿಕರನ್ನು ಗೌರವಿಸಲಾಗುವುದು.
   ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್, ಡಾ.ಬಿ.ಎನ್.ಎಸ್.ಮೂತರ್ಿ, ಮೊಗ್ರಾಲ್ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಆತ್ಮ ಯೋಜನಾ ನಿದರ್ೇಶಕಿ ಕೆ.ಟಿ.ಲೀನಾ ಶುಭಹಾರೈಸುವರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries