ಗಾಂಧಿ ಪುಣ್ಯತಿಥಿ ಆಚರಣೆ
ಉಪ್ಪಳ : ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನಾಚರಣೆ ಯನ್ನು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಗಳವಾರ ಆಚರಿಸಲಾಯಿತು.
ಉಪ್ಪಳ ಕೈಕಂಬ ಮಂಡಲ ಸಮಿತಿ ಕಚೇರಿ ಪರಿಸರದಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಸತ್ಯನ್ ಸಿ ಉಪ್ಪಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಬಳಿಕ ಅವರು ಮಾತನಾಡಿ ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಸಹಿತ ಸಮಗ್ರ ಜೀವನಾದರ್ಶ ದೃಷ್ಟಿಕೋನಗಳಿಗೆ ಹೊಸ ವ್ಯಾಖ್ಯೆ ನೀಡಿದ ಗಾಂಧೀಜಿಯವರು ಶತಶತಮಾನಗಳಿಗೂ ವಂದ್ಯರು ಎಂದು ತಿಳಿಸಿದರು. ಸತ್ಯಾಗ್ರಹದ ಆಶಯಗಳನ್ನು ಜಗತ್ತಿಗೇ ತೆರೆದಿಟ್ಟ ಗಾಂಧಿಯ ತತ್ವಾದರ್ಶಗಳನ್ನು ಇನ್ನಷ್ಟು ಪ್ರಚುರಪಡಿಸಬೇಕಿದ್ದು, ಆಧುನಿಕ ತಂತ್ರಜ್ಞಾನ ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಕರೆನೀಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ,ನೇತಾರರುಗಳಾದ ಪಿ.ಎಂ.ಖಾದರ್ ಹಾಜಿ, ದಿವಾಕರ ಎಸ್ ಜೆ, ಬಾಬು ಬಂದ್ಯೋಡು,ಪ್ರದೀಪ್ ಶೆಟ್ಟಿ,ವಿ.ಪಿ.ಮಹಾರಾಜನ್,ಶರೀಫ್ ಅರಿಬೈಲ್, ಓ.ಎಂ.ರಶೀದ್,".ಪಿ.ಮಹಾರಾಜ್,ಚಂದ್ರಶೇಖರ್ ಐಲ್,ಮುಕುಂದನ್ ಮಾಸ್ಟರ್, ಕಲಾ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.