HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       25 ವರ್ಷಗಳಷ್ಟು ಮುಂದಡಿಯಿರಿಸಿ ಅಭಿವೃದ್ದಿ ಚಟುವಟಿಕೆಗೆ ರೂಪುನೀಡಬೇಕು-ಸಚಿವ ಇ.ಚಂದ್ರಶೇಖರನ್
  ಕಾಸರಗೋಡು: ಭಾರೀ ಯೋಜನೆಗಳನ್ನು ಜನಸಾಮಾನ್ಯರ ಮುಂದಿರಿಸಿದಲ್ಲಿಗೆ ಅಭಿವೃದ್ದಿಯ ಶಖೆ ಆರಂಭಗೊಳ್ಳದು. ವಿವಿಧ ಹಂತದ ಜೀವನ ನಡೆಸುವ ಜನಸಾಮಾನ್ಯರ ಜೀವನ ಮಟ್ಟವನ್ನು ಎತ್ತರಕ್ಕೇರಿಸುವ ದೃಷ್ಟಿಕೋನದ ಸಮಗ್ರ ಕ್ರಿಯಾತ್ಮಕ ಯೋಜನೆಯ ಅನುಷ್ಠಾನ ಅಗತ್ಯ ಇದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಜಿಲ್ಲಾ ಅಭಿವೃದ್ದಿ ಸಮಿತಿ ನೇತೃತ್ವದಲ್ಲಿ ವಿವಿಧ ಯೋಜನೆಗಳ ರಚನೆಗೆ ಸಂಬಂಧಿಸಿ ಶನಿವಾರ ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಭಿವೃದ್ದಿ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
   ನಮ್ಮ ಮುಂದಿರುವ ಭವಿಷ್ಯತ್ತಿನ ಕಾಲಘಟ್ಟವು ತೀವ್ರ ವೇಗದ ಮತ್ತು ತಾಂತ್ರಿಕ ಸುಧಾರಣೆಯ ಮಹತ್ವದ ಕಾಲವಾಗಿದ್ದು, ಮುಂದಿನ 25 ವರ್ಷಗಳನ್ನು ಲಕ್ಷ್ಯವಾಗಿರಿಸಿ ಯೋಜನೆ ರೂಪಿಸುವ ಅಗತ್ಯವಿದೆ. ಕಳೆದ ಐದು ವರ್ಷಗಳ ಹಿಂದಿದ್ದ ವ್ಯವಸ್ಥೆ ಇಂದಿರದೆ ವ್ಯಾಪಕ ಬದಲಾವಣೆಗಳಾಗಿವೆ. ಮುಂದಿನ ಐದು ವರ್ಷಗಳ ಬಳಿಕದ ಸಮಾಜ ಇಂದಿನ ಸಂದರ್ಭವನ್ನು ಗಮನಿಸಿ ಆಶ್ಚರ್ಯಪಡುವಷ್ಟು ಮುಂದುವರಿಯುತ್ತದೆ. ವಿಸ್ಮಯಕರವಾದ ಬದಲಾವಣೆಗಳು, ಸಂಶೋಧನೆಗಳು ಇಂದು ನಡೆಯುತ್ತಿದ್ದು, ಪ್ರತಿ ಐದು ನಿಮಿಷಗಳ ಬದಲಾವಣೆಗಳೂ ಆಶ್ಚರ್ಯಕರವಾದುದು ಎಂದು ಸಚಿವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಆಡಳಿತ ನಡೆಸುವವರೂ ಬದಲಾಗಬೇಕಿದ್ದು, ಭವಿಷ್ಯದ ಅಗಾಧತೆಯನ್ನು ಗ್ರಹಿಸಿ ಕಾರ್ಯನಿರ್ವಹಿಸುವ ತುತರ್ು ಇದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಜಿಲ್ಲೆಯ 38 ಗ್ರಾಮ ಪಂಚಾಯತುಗಳು, ಮೂರು ನಗರಸಭೆಗಳು, ಆರು ಬ್ಲಾಕ್ ಪಂಚಾಯತುಗಳು, ಜಿಲ್ಲಾ ಪಂಚಾಯತು ಮೊದಲಾದ ಸ್ಥಳೀಯಾಡಳಿತ ಸಂಸ್ಥೆಗಳು ಜೊತೆಯಾಗಿ 19 ವಿವಿಧ ಅಭಿವೃದ್ದಿ ಯೋಜನೆಗಳ ಕರಡು ತಯಾರಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ ಸಚಿವರು, ಅಭಿವೃದ್ದಿ ಸಮಾಜದ ಇನ್ನೂ ಕೆಳವರ್ಗದಲಲಿರುವವರನ್ನು ಮೇಲೆತ್ತುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿರಲಿ ಎಂದು ಕರೆನೀಡಿದರು.
   ಶಾಸಕ ಕೆ.ಕುಂಞಿರಾಮನ್ ಮಾತನಾಡಿ, ಸಮಾಜದ ಕೆಳವರ್ಗದ ಕಡುಬಡತನದಲ್ಲಿರುವ ಜನರನ್ನು ಲಕ್ಷ್ಯವಾಗಿರಿಸಿ ಅವರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಯೋಜನೆಯಲ್ಲಿ ಆದ್ಯತೆಯಿರಲಿ ಎಂದು ತಿಳಿಸಿದರು.
   ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯವರೇ ಆದ ಉದ್ಯೋಗಸ್ಥರು ಇಲ್ಲದಿರುವುದೇ ಬಹುತೇಕ ಅಸಮರ್ಪಕ ಯೋಜನೆಗಳ ತಯಾರಿಗೆ ಕಾರಣವೆಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್ ತಿಳಿಸಿದರು. ಜಿಲ್ಲೆಯ ಸಮಗ್ರ ಪರಿಚಯವಿದ್ದವರಿಂದ ಮಾತ್ರ ಈ ಜಿಲ್ಲೆಗೆ ಅಗತ್ಯವಾದ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಸಾಧ್ಯ ಎಂಬುದರ ಬಗ್ಗೆ ಅವರು ಈ ಸಂದರ್ಭ ಬೊಟ್ಟುಮಾಡಿದರು. ಕುಡಿಯುವ ಶುದ್ದಜಲ ಪೂರೈಕೆ ಸಹಿತ ತುತರ್ು ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಅವರು ಮುನ್ಸೂಚನೆ ನೀಡಿದರು.
  ಜಿಲ್ಲಾ ಯೋಜನಾಧಿಕಾರಿ ಕೆ.ಎ.ಸುರೇಶ್ರವರು ಕರಡು ಯೋಜನೆಯ ಬಗ್ಗೆ ಮಾತನಾಡಿ ವಿವರ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಸ್ವಾಗತಿಸಿ, ಜಿಲ್ಲಾ ಸಹಾಯಕ ಯೋಜನಾಧಿಕಾರಿ ನಿನೋಜ್ ವಂದಿಸಿದರು. ಜಿಲ್ಲಾ ಪಂಚಾಯತು ಯೋಜನಾನುಷ್ಠಾನದ ಸರಕಾರಿ ಅಭಿಯೋಜಕ ಕೆ.ಬಾಲಕೃಷ್ಣನ್ ಗುಂಪುಚಚರ್ೆಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಬ್ಲಾಕ್, ಗ್ರಾಮ ಪಂಚಾಯತುಗಳ ಅಧ್ಯಕ್ಷರುಗಳು, ಸದಸ್ಯರು, ಜಿಲ್ಲಾ ಕಚೇರಿಗಳ ವಿವಿಧ ಉದ್ಯೋಗಸ್ಥರು ಸಹಿತ ವಿವಿಧ ಕ್ಷೇತ್ರಗಳ ಅನುಭವಿಗಳು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries