ಕುಂಬಳೆಯಲ್ಲಿ ಬಾಲಗೋಕುಲ ಆರಂಭ
ಕುಂಬಳೆ: ಬಾಲಗೋಕುಲ ಸಮಿತಿ ಕುಂಬಳೆಯ ಆಶ್ರಯದಲ್ಲಿ ಭಾನುವಾರ ಕುಂಬಳೆ ಸದ್ಗುರು ಶ್ರೀ ನಿತ್ಯಾನಂದ ಮಠದಲ್ಲಿ `ಸದ್ಗುರು ಶ್ರೀ ನಿತ್ಯಾನಂದ' ಬಾಲಗೋಕುಲವನ್ನು ಆರಂಭಿಸಲಾಯಿತು.
ಸದ್ಗುರು ಶ್ರೀ ನಿತ್ಯಾನಂದ ಮಠದ ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ಕಡಪ್ಪುರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲಾ ಸೇವಾ ಪ್ರಮುಖ್ ಸದಾಶಿವ ಕಡಂಬಾರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧರ್ಮದ ಸಂರಕ್ಷಣೆಗಾಗಿ ಮತ್ತು ಸಂಸ್ಕಾರವನ್ನು ಕಲಿಸುವಲ್ಲಿ ಬಾಲಗೋಕುಲಗಳು ಪ್ರಮುಖ ಪ್ರಭಾವವನ್ನು ಬೀರುತ್ತಿದೆ. ಇತ್ತೀಚಿನ ದಿನಗಳಲ್ಲಿ ಧರ್ಮದ ಜಾಗೃತಿ, ಸಂಸ್ಕಾರದ ಮೇಲುಗೈ ಅನಿವಾರ್ಯವೆನಿಸಿದೆ. ಸಂಸ್ಕೃತಿಯನ್ನು ಮರೆಯದೆ, ಜೀವನದಲ್ಲಿ ಶಿಸ್ತು ಸಂಯಮಗಳನ್ನು ಪರಿಪಾಲಿಸಬೇಕಾದ್ದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಇಂತಹ ತರಗತಿಗಳು ಅವುಗಳಿಗೆ ಪೂರಕ ಎಂದು ಅವರು ಅಭಿಪ್ರಯಪಟ್ಟರು.
ಬಾಲಗೋಕುಲ ಶಿಕ್ಷಕಿ ರಶ್ಮಿ ಉಪಸ್ಥಿತರಿದ್ದರು.ಸುಮಾರು 100ಕ್ಕಿಂತಲೂ ಹೆಚ್ಚು ಮಾತೆಯರು ಮಕ್ಕಳು ಭಾಗವಹಿಸಿದರು. ಸದ್ಗುರು ಶ್ರೀ ನಿತ್ಯಾನಂದ ಮಠದಲ್ಲಿ ಮುಂದಿನ ಎಲ್ಲಾ ಭಾನುವಾರ ಸಂಜೆ 3ರಿಂದ 4.30ಯವರೆಗೆ ಬಾಲಗೋಕುಲ ತರಗತಿಗಳು ನಡೆಯಲಿವೆ.