HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಸಾಮಥ್ರ್ಯದ ಆಗರವಾಗಿರುವ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಅಗತ್ಯ-                   ಡಾ.ವಾರುಣಿ ಶ್ರೀರಾಮ
   ಕುಂಬಳೆ: ಸುಸಂಸ್ಕೃತಿ ಸನ್ನಡತೆಗಳನ್ನು ಮೈಗೂಡಿಸುವ ಮೊದಲ ಸೋಪಾನವನ್ನು ಮಾತೆಯರು ಮಕ್ಕಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಬಾಲ್ಯದಲ್ಲೇ ಮನದಟ್ಟುಮಾಡಿ ಕೊಡಬೇಕಾಗಿದೆ. ಸನಾತನಧರ್ಮದ ಅರಿವುಳ್ಳ ಹಿರಿಯರು, ಸಾಮಥ್ರ್ಯದ ಆಗರವಾಗಿರುವ ಯುವ ಪೀಳಿಗೆಯನ್ನು ಸರಿಯಾದ ಮಾರ್ಗದರ್ಶನವಿತ್ತು ರೂಪಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಅಗತ್ಯತೆಯಿದೆ ಎಂದು ಪ್ರಸಿದ್ದ ಮನೋರೋಗ ತಜ್ಞೆ ಡಾ.ವಾರುಣೀ ಶ್ರೀರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಸಿರಿಗನ್ನಡ ವೇದಿಕೆ ಕಾಸರಗೋಡು ಜಿಲ್ಲೆ ಮಹಿಳಾ ಘಟಕದ ವತಿಯಿಂದ ಶನಿವಾರ ಅಪರಾಹ್ನ ಯುವ ಸಮಾಜದಲ್ಲಿ ಅರಿವು ಮೂಡಿಸುವುದಕ್ಕಾಗಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಾವು-ನಮ್ಮತನ ಎಂಬ ವಿಷಯದಡಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
  ಇತರ ಮತಗಳಿಗಿಂತ ಹೆಚ್ಚು ಆರಾಧನೆ, ನಂಬಿಕೆ, ಜೀವನ ಕ್ರಮಗಳೇ ಮೊದಲಾದವುಗಳಿಗೆ ಸ್ವಾತಂತ್ರ್ಯ ನೀಡಿರುವ ಸನಾತನ ಧರ್ಮದ ವಿಶಿಷ್ಟ ಪರಂಪರೆಯನ್ನು ಗಮನಿಸುವುದನ್ನು ರೂಢಿಸಬೇಕು. ಪ್ರತಿಯೊಂದರಲ್ಲೂ ಗುಡಾರ್ಥಗಳಿರುವ ಧರ್ಮಸಂದೇಶಗಳು ಸನಾತನತೆಯ ಶ್ರೀಮಂತಿಕೆಯಾಗಿದ್ದು, ಈ ಬಗೆಗಿನ ಅರಿವನ್ನು ಹಿರಿಯರು ಮಕ್ಕಳಿಗೆ ಇನ್ನಷ್ಟು ವಿಸ್ತರಿಸಬೇಕು ಎಂದು ಅವರು ತಿಳಿಸಿದರು.
   ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಸಾವಿತ್ರಿ ಟೀಚರ್, ನಳಿನಿ ಬೆಜಪ್ಪೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂಭಟ್ ದಭರ್ೆಮಾರ್ಗ,ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಪೆರಡಾನ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ, ಸಾಹಿತಿ ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಪ್ರಗತಿಪರ ಕೃಷಿಕ ನರಸಿಂಹಭಟ್ ಏತಡ್ಕ, ಶಾಲಾಶಿಕ್ಷಕಿಯರು ಉಪಸ್ಥಿತರಿದ್ದರು.
   ಸಿರಿಗನ್ನಡ ಜಿಲ್ಲಾಧ್ಯಕ್ಷ ವಿ.ಬಿ. ಕುಳಮರ್ವ  ಸ್ವಾಗತಿಸಿ,  ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ವಿಜಯಾಸುಬ್ರಹ್ಮಣ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಕುಸುಮಾ ಪೆಮರ್ುಖ ವಂದಿಸಿದರು. ಪಾರ್ವತಿ ಕೂಳಕ್ಕೋಡ್ಳು ಕಾರ್ಯಕ್ರಮ ನಿರೂಪಿಸಿದರು. ಪ್ರೇಮಗಂಗಾ ಕಾರಿಂಜಹಳೆಮನೆ ಪ್ರಾರ್ಥನೆ ಹಾಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries