HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕಾಟುಕುಕ್ಕೆಯಲ್ಲಿ ಶ್ರೀನಿವಾಸ ಮಹಾಮಂಗಲೋತ್ಸವ
              ನಾಳೆ(ಜ.7) ಸಿದ್ಧತೆಗಳ ಬೃಹತ್ ಮಹಾಸಭೆ
   ಪೆರ್ಲ: ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಇದರ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಜನವರಿ 16ರಿಂದ 20ರ ತನಕ ಕಾಟುಕುಕ್ಕೆಯಲ್ಲಿ ನಡೆಯಲಿರುವ  ಪುರಂದರದಾಸ ಆರಾಧನೋತ್ಸವ ಮತ್ತು  ಶ್ರೀ ವೆಂಕಟೇಶ ಸ್ವಾಮಿಗೆ ತಿರುಮಜ್ಜನಾಭಿಷೇಕ ಸಹಿತವಾದ ಶ್ರೀನಿವಾಸ ಮಹಾಮಂಗಲೋತ್ಸವಕ್ಕೆ ಭರದ ಸಿದ್ಧತೆಗಳಾಗುತಿದ್ದು, ಜ.7ರಂದು ಬೆಳಿಗ್ಗೆ 10ಕ್ಕೆ  ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಸಿದ್ಧತೆಗಳ ಬೃಹತ್ ಮಹಾಸಭೆ ಜರಗಲಿದೆ.
   ಮಹಾಮಂಗಲೋತ್ಸವದ ಗೌರವ ಮಾರ್ಗದರ್ಶಕರಾದ ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಇವರ ಮಾಗದರ್ಶನದಲ್ಲಿ ನಡೆಯುವ ಮಹಾಸಿದ್ಧತಾ ಸಭೆಯಲ್ಲಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾಯರ್ುದಶರ್ಿ ಜಯರಾಮ ನೆಲ್ಲಿತ್ತಾಯ, ಕನರ್ಾಟಕ ಧಾಮರ್ಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್ ಪುತ್ತೂರು, ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಧರ್ಮದಶರ್ಿ ನನ್ಯ ಅಚ್ಯುತ ಮೂಡಿತ್ತಾಯ, ಮಂಗಲೋತ್ಸವದ ಗೌರವ ಸಲಹೆಗಾರ ಬಿ.ವಸಂತ ಪೈ ಬದಿಯಡ್ಕ ಸಹಿತ ಅನೇಕ ಪ್ರಮುಖರು ಕಾರ್ಯಕ್ರಮಗಳ ಯಶಸ್ಸಿಗೆ ಮಾರ್ಗದರ್ಶನ ನೀಡುವರು. ಜೊತೆಗೆ ಸುಳ್ಯ, ಪುತ್ತೂರು, ಉಉಪ್ಪಿನಂಗಡಿ, ಕಬಕ, ವಿಟ್ಲ, ಬಂಟ್ವಾಳ, ಮಂಗಳೂರು ಮತ್ತು ಕಾಸರಗೋಡು ತಾಲೂಕಿನ ಭಜನಾ ಮಂಡಳಿಗಳ ಪ್ರಮುಖರು, ವಿವಿಧ ಉಪಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು. ಕಾಸರಗೋಡು ತಾಲೂಕು ಮತ್ತು ದಕ್ಷಿಣ ಕನ್ನಡದ ವಿವಿದೆಡೆಗಳಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ನಡೆಯುತಿದ್ದು, ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಮಂಗಲೋತ್ಸವಕ್ಕೆ ಹೊರೆಕಾಣಿಕೆಗಳು ಆಗಮಿಸಲಿವೆ.
ಕಾಟುಕುಕ್ಕೆ ಕ್ಷೇತ್ರದಲ್ಲಿ ನಾಳೆ(7)ನಡೆಯುವ ಮಹಾಸಿದ್ಧತೆ ಸಭೆಯಲ್ಲಿ ವಿವಿದೆಡೆಗಳಿಂದ ಪ್ರಾತಿನಿಧಿಕವಾಗಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡು,ಕಾರ್ಯಕ್ರಮಕ್ಕೆ ಅಂತಿಮ ರೂಪುರೇಷೆಗಳನ್ನು ನೀಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries