HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಕನ್ನಡಿಗರು ಒಗ್ಗಟ್ಟಿನಿಂದ ಹೋರಾಡುವುದು ಅನಿವಾರ್ಯ-ಕೆ.ಎನ್.ಕೃಷ್ಣ ಭಟ್
    ಬದಿಯಡ್ಕ : ಗಡಿನಾಡಿನ ಕನ್ನಡ ಸಂಸ್ಕೃತಿ, ಕನ್ನಡಿಗರ ನಿಭರ್ೀತ ಜೀವನಕ್ಕೆ ಇಂದು ಚ್ಯುತಿ ಬಂದಿದೆ. ಸಾಂವಿಧಾನಿಕ ಹಕ್ಕುಗಳನ್ನೂ ಕೇಳಿ ಪಡೆಯುವ ದುವರ್ಿಧಿ ನಮ್ಮಿದಿರಿಗಿದ್ದು, ಒಗ್ಗಟ್ಟಿನಿಂದ ಹೋರಾಡುವುದು ಅನಿವಾರ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿದರು.
  ಗಡಿನಾಡ ಕನ್ನಡಿಗರ ಹಕ್ಕುಗಳ ಸಂರಕ್ಷಣೆಗಾಗಿ ಕನ್ನಡಪರ ಸಮಿತಿಗಳ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಗಣರಾಜ್ಯೋತ್ಸವ ದಿನದಂದು ಸಂಜೆ ಬದಿಯಡ್ಕದಲ್ಲಿ ನಡೆದ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
   ನಿವೃತ್ತ ಅಧ್ಯಾಪಿಕೆ ಸುಮಿತ್ರಾ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಹಿರಿಯ ಸಾಹಿತಿ, ಕವಿ ವಿ.ಬಿ.ಕುಳಮರ್ವ ಮಾತನಾಡುತ್ತಾ ಕಾಸರಗೋಡು ಅಚ್ಚ ಕನ್ನಡ ನಾಡು. ಇದೊಂದು ಬಹುಭಾಷಾ ಸಂಗಮ ಭೂಮಿಯಾಗಿದ್ದು, ಇಲ್ಲಿರುವಷ್ಟು ಭಾಷೆಗಳು ಪ್ರಪಂಚದ ಯಾವುದೇ ಕಡೆಗಳಲ್ಲಿ ಇಲ್ಲ. ಕೇರಳ ಸರಕಾರ ಕನ್ನಡಿಗರ ಮೇಲೆ ತೋರುವ ಮಲತಾಯಿ ಧೋರಣೆಯನ್ನು ಅಮಾನುಷ ದೌರ್ಜನ್ಯವೆಂದೇ ಕರೆಯಬೇಕಾಗಿದೆ. ನಮಗೆ ಯಾವುದೇ ಭಾಷೆಯ ಮೇಲೆ ದ್ವೇಷ ಇಲ್ಲ. ಕನ್ನಡದ ಸ್ಥಾನದಲ್ಲಿ ಇನ್ನೊಂದನ್ನು ಒಪ್ಪಿಕೊಳ್ಳುವುದಂತೂ ಸಾಧ್ಯವಿಲ್ಲದಾಗಿದೆ. ಇಲ್ಲಿನ ಎಲ್ಲ ಕನ್ನಡಿಗರೂ ತುಳುವರು ಹಾಗೇಯೇ ತುಳುವರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಇಲ್ಲಿ ತುಳು ಕನ್ನಡಿಗರಲ್ಲಿ ಯಾವುದೇ ಬೇಧ ಇಲ್ಲ. ಕನರ್ಾಟಕ ಸರಕಾರವು ಕೇರಳದ ಕನ್ನಡ ಶಾಲೆ, ಕನ್ನಡ ಮಕ್ಕಳ ಕುರಿತು ಬಹುದೊಡ್ಡ ಪ್ರಮಾಣದಲ್ಲಿ ಸ್ಪಂದಿಸುತ್ತಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಹಿರಿಯರಾದ ತೆಕ್ಕೇಕರೆ ಶಂಕರನಾರಾಯಣ ಭಟ್, ಗೋಪಾಲ ಮಾಸ್ತರ್, ಈಶ್ವರ ನಾಯ್ಕ ಪೆರಡಾಲ, ಕರುಣಾಕರ ಬದಿಯಡ್ಕ, ರಾಮ ಪಟ್ಟಾಜೆ, ಹರೀಶ್ ನಾರಂಪಾಡಿ, ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದವರು ಮಾತನಾಡಿದರು.
ಮೈರ್ಕಳ ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕನ್ನಡ ಎಂಬುದು ಕೇವಲ ಭಾಷೆ ಮಾತ್ರವಲ್ಲದೆ ಗಡಿನಾಡ ಸಂಸ್ಕೃತಿಯ ಪ್ರತೀಕವಾಗಿದೆ. ಬಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿರುವುದು ಖೇದಕರವಾಗಿದೆ ಎಂದರು. ಸುಂದರ ಬಾರಡ್ಕ ಧನ್ಯವಾದವನ್ನಿತ್ತರು. ರವಿಕಾಂತ ಕೇಸರಿ ಕಡಾರು ಕಾರ್ಯಕ್ರಮ ನಿರೂಪಿಸಿದರು. ನೂರಾರು ಕನ್ನಡ ಪರ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆಗಾಗಿ ಹಲವು ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಬೇಕೆಂಬ ಉದ್ದೇಶದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries