ಸವಾಲುಗಳಿಗೆ ಧ್ವನಿಯಾಗಿ ಪಕ್ಷ ಮುನ್ನಡೆಸಬೇಕು-ಕುಮ್ಮನಂ ರಾಜಶೇಖರನ್
ಕುಂಬಳೆ: ಶಾಂತಿ, ಸಮೃದ್ದಿಯಿಂದ ಕೂಡಿದ, ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ. ಹೊಸ ತಲೆಮಾರಿಗೆ ಹೊಂದಿಕೊಂಡು ಸಮಾಜದ ತಳಮಟ್ಟದ ಜನಸಾಮಾನ್ಯರ ಜೀವನ ಮಟ್ಟವನ್ನು ಎತ್ತರಕ್ಕೇರಿಸುವ ಪರಿವರ್ತನಶೀಲ ಚಿಂತನೆ, ಯೋಜನೆಗಳ ಅನುಷ್ಠಾನದ ಮೂಲಕ ಆಡಳಿತದ ಹೊಸ ಮೈಲುಗಲ್ಲನ್ನು ಪ್ರಧಾನಿ ನರೇಂದ್ರಮೋದಿಯರು ಜಾರಿಗೊಳಿಸಿ ರಾಷ್ಟ್ರ ಇಂದು ಜಗತ್ತಿನಲ್ಲಿಯೆ ಅಗ್ರಮಾನ್ಯವಾಗಿ ಹೊರಹೊಮ್ಮಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ ಹಮ್ಮಿಕೊಂಡಿರುವ ವಿಕಾಸ ಯಾತ್ರೆಯ ಅಂಗವಾಗಿ ಸೋಮವಾರ ಸಂಜೆ ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಮಂಜೇಶ್ವರ ಮಂಡಲ 148ನೇ ಬೂತ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಆಡಳಿತರೂಢ ಎಡರಂಗ ಹಾಗೂ ಯುಡಿಎಫ್ ಜನವಂಚನೆಯ ರಾಜಕೀಯದ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದ ಅವರು, ವರ್ತಮಾನದ ಸವಾಲುಗಳಿಗೆ ಧ್ವನಿಯಾಗಿ ಸಮಾಜವನ್ನು ಮುನ್ನಡೆಸುವ ರಾಜಕಾರಣ ಅಗತ್ಯವಿದೆ ಎಂದು ತಿಳಿಸಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರೊಚ್ಚಿಗೆಬ್ಬಿಸುವ ವಿಷಯಗಳನ್ನು ಜನರೆಡೆಗೆ ಎಸೆಯುವ ಮೂಲಕ ಎಡರಂಗ ಹಾಗೂ ಯುಡಿಎಫ್ ತಮ್ಮ ಹುಳುಕುಗಳನ್ನು ಮರೆಮಾಚಲು ಯತ್ನಿಸುತ್ತಿದ್ದು, ಪ್ರಜ್ಞಾವಂತ ನಾಗರಿಕರಿಗೆ ಸತ್ಯದ ಅರಿವು ಇದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ಸಹಿತ ಪರಿವಾರ ಸಂಘಟನೆಗಳು ರಾಜ್ಯದಲ್ಲಿ ತಳಮಟ್ಟದ ತನ್ನ ಕಾರ್ಯಚಟುವಟಿಕೆಗಳ ವಿಸ್ತರಣೆಯ ಮೂಲಕ ಜನರಿಗೆ ಭರವಸೆ ಮೂಡಿಸಲಿದೆ ಎಂದು ತಿಳಿಸಿದರು.
148ನೇ ಬೂತ್ ಘಟಕದ ಅಧ್ಯಕ್ಷ ದಯಾನಂದ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದ ಸಮರಂಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಮಾತನಾಡಿದರು. ರಾಜ್ಯ ಘಟಕದ ಇನ್ನೋರ್ವ ಕಾರ್ಯದಶರ್ಿ ಎ.ಎನ್.ರಾಧಾಕೃಷ್ಣನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದಶರ್ಿ ವೇಲಾಯುಧನ್, ಪಿ.ರಮೇಶ್, ರಾಜ್ಯ ಘಟಕದ ಸದಸ್ಯೆ ಪ್ರಮೀಳಾ ಸಿ.ನಾಯ್ಕ್, ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯಶಂಕರ ಭಟ್ ಹಿಳ್ಳೆಮನೆ, ಕುಂಬಳೆ ಪಂಚಾಯತು ಘಟಕಾಧ್ಯಕ್ಷ ಶಂಕರ ಆಳ್ವ, ಯುವಮೋಚರ್ಾ ಕುಂಬಳೆ ಘಟಕದ ಅಧ್ಯಕ್ಷ ಸುಧಾಕರ ಕಾಮತ್, ಗ್ರಾ.ಪಂ. ಸದಸ್ಯೆ ಪ್ರೇಮಲತಾ ಎಸ್., ಮಹೇಶ್ ಪುಣಿಯೂರು ಮೊದಲಾದವರು ಉಪಸ್ಥಿತರಿದ್ದರು.
ಮುಖಂಡ ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿತೇಶ್ ನಾಯ್ಕಾಪು ವಂದಿಸಿದರು.
ಇದಕ್ಕೂ ಮುನ್ನ ಅನಂತಪುರ ಶ್ರೀಪದ್ಮನಾಭ ಸ್ವಾಮಿ ಕ್ಷೇತ್ರ ಪರಿಸರದಲ್ಲಿ ಸಂಘಪರಿವಾರ ಮತ್ತು ಬಿಜೆಪಿ ಉನ್ನತ ಮಟ್ಟದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಗಮನ ಸೆಳೆದ ಅಧ್ಯಕ್ಷರುಗಳು:
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷ, ಪಂಚಾಯತು ಘಟಕಾಧ್ಯಕ್ಷರು ಮತ್ತು ಬೂತ್ ಅಧ್ಯಕ್ಷರು ಜೊತೆಯಾದುದು ವಿಶೇಷವಾಗಿ ಗುರುತಿಸಲ್ಪಟ್ಟಿತು. ಸಮಾವೇಶದ ಬಳಿಕ ಐವರು ಅಧ್ಯಕ್ಷರೂ ಜೊತೆಯಾಗಿ ಪೋಟೋಕ್ಕೆ ಪೋಸ್ ನೀಡಿರುವುದು ಕಾರ್ಯಕರ್ತರ ಹರ್ಷಕ್ಕೆ ಕಾರಣವಾಯಿತು. ಈ ಸಂದರ್ಭ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಂ ಅವರು, ಭಾರತೀಯ ಜನತಾ ಪಕ್ಷ ಬೆಳೆದುಬಂದ ರೀತಿ ಮತ್ತು ಅಭಿವೃದ್ದಿಗೆ ಒಂದಾಗುವ ಸೂಚಕವಾಗಿ ಐವರೂ ಜೊತೆಯಾಗಿರುವುದು ಸಾಕ್ಷಿ ಎಂದು ತಿಳಿಸಿದರು.