ರೈಲುಗಳಲ್ಲಿ ಬಾಲ ಭಿಕ್ಷಾಟನೆ ಮತ್ತಷ್ಟು ಹೆಚ್ಚಳ
ಕಾಸರಗೋಡು: ರೈಲುಗಾಡಿಗಳಲ್ಲಿ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಭಿಕ್ಷಾಟನೆ ನಡೆಸುವ ಜಾಲ ಮತ್ತಷ್ಟು ಸಕ್ರಿಯಗೊಂಡಿದೆ. ತಪಾಸಣೆ ನಡೆಸಲು ಸಿಬ್ಬಂದಿಗಳು ಇಲ್ಲದಿರುವುದು, ಸೆರೆಹಿಡಿದವರನ್ನು ಸರಿಯಾದ ರೀತಿಯಲ್ಲಿ ಪುನರ್ವಸತಿ ಕೇಂದ್ರಗಳಿಗೆ ತಲುಪಿಸದಿರುವುದು ಇತ್ಯಾದಿ ಕಾರಣಗಳಿಂದ ಬಾಲ ಭಿಕ್ಷಾಟನೆ ಹೆಚ್ಚಲು ಕಾರಣವಾಗಿದೆ.
ಸ್ವಂತ ಮಕ್ಕಳನ್ನು ಹಾಗೂ ಸಹೋದರಿಯರ ಮಕ್ಕಳನ್ನು ಎತ್ತಿಕೊಂಡು ಹಲವು ಯುವತಿಯರು ಭಿಕ್ಷಾಟನೆ ನಡೆಸುತ್ತಿದ್ದಾರೆ. ಭಿಕ್ಷಾಟನೆಗೆ ಬಂದ ಮಕ್ಕಳು, ತಾಯಂದಿರು ನಿಸ್ಸಹಾಯಕರಾಗಿ ರೈಲು ನಿಲ್ದಾಣಗಳಲ್ಲಿ ಮಲಗುವುದನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇವರಿಗೆ ಯಾರ ಸಹಾಯವೂ ಲಭಿಸುತ್ತಿಲ್ಲ ಎಂಬುದು ಖೇದಕರ.
ಪ್ರತಿಯೊಂದು ರೈಲು ನಿಲ್ದಾಣ ವ್ಯಾಪ್ತಿಯ ಅಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯ ರೈಲು ನಿಲ್ದಾಣಗಳಿಂದ ಇವರನ್ನು ಬೇರೆ ಕಡೆಗೆ ಕಳುಹಿಸುವ ಕೆಲಸವಷ್ಟೇ ಮಾಡುತ್ತಿರುವುದು ಕಂಡುಬರುತ್ತಿದೆ. ಮಕ್ಕಳ ಸಂರಕ್ಷಣಾ ಆಯೋಗದ ಆದೇಶಗಳಿಗೆ ಸಂಬಂಧಪಟ್ಟವರು ಎಳ್ಳಷ್ಟೂ ಬೆಲೆ ನೀಡದಿರುವುದು ವಿಪಯರ್ಾಸ.
ಕಾರು ಮೊದಲಾದ ವಾಹನಗಳಲ್ಲಿ ಪುಟ್ಟ ಮಕ್ಕಳನ್ನು ರೈಲು ನಿಲ್ದಾಣಕ್ಕೆ ತಂದಿಳಿಸಿ ಭಿಕ್ಷಾಟನೆ, ಲಾಟರಿ ಮಾರಾಟ ನಡೆಸಲು ಒತ್ತಡ ಹೇರುತ್ತಿವುದಾಗಿ ಕೆಲವು ರೈಲು ನಿಲ್ದಾಣ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ಹಿಂದೆ ಜಾಲವೊಂದು ಕಾರ್ಯವೆಸಗುತ್ತಿದೆ. ಈ ಆಧಾರದಲ್ಲಿ ಶಿಶು ಸಂರಕ್ಷಣಾ ಘಟಕವು ರೈಲುಗಳಲ್ಲಿ ತಪಾಸಣೆ ಆರಂಭಿಸಿತ್ತು. ಆದರೆ ಇಂತಹ ಯಾವುದೇ ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳಲ್ಲಿನ ತಪಾಸಣೆ ಮಧ್ಯೆ ನಾಗಪುರ ನಿವಾಸಿಯಾದ 20ರ ಹರೆಯದ ರಕ್ನೌ ಎಂಬ ಯುವತಿ ಹಾಗೂ ನಾಲ್ಕರ ಹರೆಯದ ಹೆಣ್ಣು ಮಗುವನ್ನು ಕಾಸರಗೋಡು ಮಹಿಳಾ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ವರ್ಷದ ಹಿಂದೆ ಕಸ್ಟಡಿಗೆ ತೆಗೆದಿದ್ದರು. ಬಳಿಕ ಮಾನವ ಸಾಗಾಟದ ಬಗ್ಗೆ ತನಿಖೆ ನಡೆಸುವ ನೋಡಲ್ ಅಧಿಕಾರಿ ಐಜಿ ಎಸ್.ಶ್ರೀಜಿತ್ ಅಂದು ಕೇಸು ದಾಖಲಿಸಲು ಆದೇಶ ಹೊರಡಿಸಿದ್ದರು. ಯುವತಿ ಹಾಗೂ ಜೊತೆಗಿದ್ದ ಮಗುವಿನ ರಕ್ತ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೊತೆಗಿದ್ದ ಮಗು ಯುವತಿಯದೇ ಎಂಬುದು ಪರೀಕ್ಷೆಯಿಂದ ಸಾಬೀತಾಗಿತ್ತು.
ಮಕ್ಕಳ ಸಂರಕ್ಷಣಾ ಆಯೋಗ ಆದೇಶ :
ರೈಲಿನಲ್ಲಿ ಹಸುಳೆಗಳೊಂದಿಗೆ ಭಿಕ್ಷಾಟನೆ ನಡೆಸುವ ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲು ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು 2016ರಲ್ಲಿ ಆದೇಶ ಹೊರಡಿಸಿತ್ತು. ರಾಜ್ಯ ಪೊಲೀಸ್ ಮುಖ್ಯಸ್ಥರು, ಪಾಲಕ್ಕಾಡು ರೈಲ್ವೇ ವಿಭಾಗದ ಪ್ರಬಂಧಕ, ರೈಲ್ವೇ ಪೊಲೀಸ್ ಸೂಪರಿಂಟೆಂಡೆಂಟ್ ಇವರಿಗೆ ತನಿಖೆ ನಡೆಸುವ ಹೊಣೆಗಾರಿಕೆಯನ್ನು ಆಯೋಗವು ನೀಡಿತ್ತು. ರೈಲುಗಳಲ್ಲಿ ಸಮರ್ಪಕವಾಗಿ ತಪಾಸಣೆ ನಡೆಸಿ ಮಕ್ಕಳನ್ನು ಬಳಸಿ ನಡೆಸುವ ಭಿಕ್ಷಾಟನೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು. ಆದರೆ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪರಿಣಾಮ ರೈಲುಗಳಲ್ಲಿ ಮಕ್ಕಳನ್ನು ಬಳಸಿಕೊಂಡು ನಡೆಸುವ ಭಿಕ್ಷಾಟನೆ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಗಳಿಗೆ ಕಾರಣವಾಗುತ್ತಿದೆ