ಕಟುಕರಿಂದ ಗಾಯಗೊಂಡ ಅಯ್ಯಪ್ಪನಿಗೆ ನೆರವು
ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಚಿರಪರಿಚಿತವಾದ ಅಯ್ಯಪ್ಪ ಹೆಸರಿನ ನಂದಿಗೆ ಗುರುವಾರ ರಾತ್ರಿ ಅಮಾನವೀಯವಾಗಿ ಕಡಿಯಲಾಗಿದ್ದು, ಅದರ ಬಾಲದ ಮೇಲ್ಬದಿಗೆ ಆಳವಾದ ಗಾಯವಾಗಿದೆ. ಗಾಯಗೊಂಡ ಬಳಿಕ ಕಟುಕರಿಂದ ರಕ್ಷಿಸಲು ಓಡಿದ ಅಯ್ಯಪ್ಪ ಕೊನೆಗೆ ನವಜೀವನ ಶಾಲಾ ಪರಿಸರದಲ್ಲಿ ಅವಿತು ಬಚಾವಾಗಿದ್ದು, ಶುಕ್ರವಾರ ಬೆಳಿಗ್ಗೆ ಇದನ್ನು ಗುರುತಿಸಿದ ಶಾಲಾ ಶಿಕ್ಷಕರು ಮರುಕಗೊಂಡು ಅಯ್ಯಪ್ಪನಿಗೆ ಚಿಕಿತ್ಸೆ ನೀಡಿದರು.
ನವಜೀವನ ಶಾಲಾ ಶಿಕ್ಷಕರಾದ ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ನಾರಾಯಣ ಪದ್ಮಾರ್, ಸಿಬ್ಬಂದಿಗಳಾದ ನಾರಾಯಣ ಮಣಿಯಾಣಿ, ಗೋಪಾಲ, ಕೇಳು ಮಾಸ್ತರ್ ಅಗಲ್ಪಾಡಿ ಮೊದಲಾದವರು ನಂದಿಯ ಸಂಕಷ್ಟಕ್ಕೆ ನೆರವಾದರು. ಪ್ರಸ್ತುತ ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಾಕಲಾಗಿದ್ದು, ತಾತ್ಕಾಲಿಕವಾಗಿ ಶಾಲಾ ಆವರಣದಲ್ಲೆ ಅದಕ್ಕೆ ವಿಶ್ರಾಂತಿಯ ವ್ಯವಸ್ಥೆ ಮಾಡಲಾಗಿದೆ. ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನಂದಿಯಾದ ಅಯ್ಯಪ್ಪ ನ ದುರವಸ್ಥೆಯ ಬಗ್ಗೆ ತಿಳಿದು ಧಾವಿಸಿ ಬಂದ ತಂತ್ರಿವರ್ಯರು ಸಾಂತ್ವನ ನೀಡಿ, ಶಾಲಾ ಶಿಕ್ಷಕ-ಸಿಬ್ಬಂದಿಗಳ ಮಾನವೀಯತೆಯ ನೆರವನ್ನು ಕೊಂಡಾಡಿದರು. ಸಮರಸದೊಂದಿಗೆ ತಮ್ಮ ನೋವನ್ನು ಹಂಚಿಕೊಂಡ ತಂತ್ರಿವರ್ಯರು, ಮೂಕ ಪ್ರಾಣಿಯ ಮೇಲಿನ ಇಂತಹ ಹಲ್ಲೆಯು ಕುಸಿದ ಮಾನವೀಯತೆ, ಪ್ರೇಮ, ಹೃದಯವಂತಿಕೆಯ ಸೂಚಕವಾಗಿದ್ದು, ಸರ್ವನಾಶದ ಸೂಚನೆಯಾಗಿದೆ. ಹಿಂಸೆಯ ಮೂಲಕ ವಿನಾಶವಲ್ಲದೆ ಬೇರೇನೂ ಲಭ್ಯವಾಗದು ಎಂದು ತಿಳಿಸಿದರು.