HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಶ್ರೀನಿವಾಸ ಮಂಗಲೋತ್ಸವ-ಪುರ್ವಭಾವೀ ಸಭೆ
  ಬದಿಯಡ್ಕ: ಭಕ್ತಿಯ ಪರಿಜ್ಞಾನವನ್ನು ಮೂಡಿಸುವಲ್ಲಿ ಸಂಕೀರ್ತನೆಗಳು ಜನಸಾಮಾನ್ಯರಿಗೆ ದೊರಕಿರುವ ಮಹಾನ್ ವರದಾನವಾಗಿದ್ದು, ಮನಸ್ಸಿನ ಆಳದಿಂದ ಹುಟ್ಟುವ ಭಕ್ತಿಯಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಲು ಸಂಕೀರ್ತನೆ ಪರಿಣಾಮಕಾರಿ. ಪುರಂದರ ದಾಸರಂತಹ ಮಹಾನ್ ದಾಸಶ್ರೇಷ್ಠರ ಸಂದೇಶಗಳು ಸರ್ವಕಾಲಕ್ಕೂ ಸಲಲುವಂತಹ ಪರಿಣಾಮಕಾರಿಯಾಗಿದ್ದು, ಅವುಗಳ ಪ್ರಚಾರ-ಪ್ರಸರಿಸುವಿಕೆ ಅಗತ್ಯ ಇಂದಿದೆ ಎಂದು ಹಿರಿಯ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
   ಮಂಗಳವಾರ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ನಡೆದ ತಿರುಪತಿಯ ದಾಸಸಾಹಿತ್ಯ ಪ್ರೋಜೆಕ್ಟ್ ವತಿಯಿಂದ ಶ್ರೀವೆಂಕಟೇಶ ಸ್ವಾಮಿಗೆ ತಿರುಮಜ್ಜನಾಭಿಷೇಕ ಪೂರ್ವಕ ಶ್ರೀನಿವಾಸ ಮಂಗಳೋತ್ಸವದ ಅಂಗವಾಗಿ ಕಾಟುಕುಕ್ಕೆಯ ಶ್ರೀಪುರಂದರದಾಸ ಆರಾಧನೋತ್ಸವ ಸಮಿತಿ ನೇತೃತ್ವದಲ್ಲಿ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಜ. 16 ರಿಂದ 20ರ ವರೆಗೆ ನಡೆಯಲಿರುವ ಶ್ರೀನಿವಾಸ ಮಂಗಳೋತ್ಸವದ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವೀ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಸಾಮಾನ್ಯ ಭಕ್ತರಿಗೆ ಭಜನೆಯ ಮೂಲಕ ದೇವದರ್ಶನ ನೀಡುವ ಭಜನಾ ಸಂಕೀರ್ತನೆಗಳು ಆಧುನಿಕ ಸಮಾಜ ವ್ಯವಸ್ಥೆಗೆ ಪೂರಕ. ಯುವ ಸಮೂಹಕ್ಕೆ ದಾಸ ಶ್ರೇಷ್ಠರ ಕೊಡುಗೆಗಳನ್ನು ಪರಿಚಯಿಸುವ, ಭಕ್ತಿ ಮರ್ಗಕ್ಕೆ ಕರೆತರುವ ಯತ್ನಗಳು ಆಗಬೇಕು ಎಂದು ಅವರು ತಿಳಿಸಿದರು.
   ಗೋಕರ್ಣ ಹವ್ಯಕ ಮಹಾ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ  ಶ್ರೀಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆಯ ಅಧ್ಯಕ್ಷ, ಖ್ಯಾತ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಖೆಗಳ ಬಗ್ಗೆ ಮಾಹಿತಿ ನೀಡಿದರು. ಗಾಯಕ ಕಿಶೋರ್ ಪೆರ್ಲ, ಉಷಾ ಶಿವರಾಮ್ ಕಾರಿಂಜೆ ಹಳೆಮನೆ, ಸರಸ್ವತಿ ಅರಳಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಜ.15 ರಂದು ಅಪರಾಹ್ನ 2ಕ್ಕೆ ಬದಿಯಡ್ಕದಿಂದ ಹೊರೆಕಾಣಿಕೆ ಹೊರಡುವ ಬಗ್ಗೆ ಸಭೆಯಲ್ಲಿ ನಿರ್ಣಯ  ಕೈಗೊಳ್ಳಲಾಯಿತು. ವಸಂತ ಪೈ ಬದಿಯಡ್ಕ ಹೊರೆಕಾಣಿಕೆ ಮೆರವಣಿಗೆಗೆ ಸಂಪೂರ್ಣ ಬೆಂಬಲ ನಿಡುವ ಬಗ್ಗೆ ಘೋಷಿಸಿದರು.
   ಪಾರ್ವತಿ ಕುಂಜತ್ತಾಯ ಸ್ವಾಗತಿಸಿ, ಕುಸುಮಾ ಪೆಮರ್ುಖ ವಂದಿಸಿದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries