ಪ್ರತಾಪನಗರದಲ್ಲಿ ಆರೋಗ್ಯ ತಿಳುವಳಿಕಾ ಶಿಬಿರ
ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಮಹಿಳಾ ಸಂಘ ಮತ್ತು ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಿಳುವಳಿಕಾ ಮತ್ತು ತಪಾಸಣಾ ಶಿಬಿರ ಇತ್ತೀಚೆಗೆ ಪ್ರತಾಪನಗರ ಗೌರೀ ಗಣೇಶ ಮಹಿಳಾ ಸಂಘದ ಕಛೇರಿಯಲ್ಲಿ ಜರಗಿತು.
ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಕೆ.ಪಿ.ವಲ್ಸರಾಜ್ ಅಧ್ಯಕ್ಷತೆ ವಹಿಸಿದರು. ವೈದ್ಯಾಧಿಕಾರಿ ಡಾ.ಸಿಮಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಹೆಲ್ತ್ ಲೈನ್ ಅಧಿಕಾರಿ ಮೋಹನ್ ಮಾಂಗಾಡ್, ಎನ್.ವೈ.ಸಿ ಮಂಜೇಶ್ವರ ಅಧಿಕಾರಿ ಚಂದ್ರಹಾಸ, ಚಿಂತಾಮಣಿ. ಜೆ.ಪಿ, ದಾಕ್ಷಾಯಿಣಿ.ಜೆ.ಪಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಪ್ರಭಾಕರ ರೈ ಬೋಧನಾ ಶಿಬಿರ ನಡೆಸಿದರು. ಈ ಸಂದರ್ಭದಲ್ಲಿ ಹೊಲಿಗೆ ತರಬೇತಿ ಹೊಂದಿದವರಿಗೆ ಪ್ರಮಾಣಪತ್ರವನ್ನು ವಿತರಿಸಲಾುತು. ಸಂಘದ ಅಧ್ಯಕ್ಷೆ ಸುಶೀಲ ನಾರಾಯಣ್ ಸ್ವಾಗತಿಸಿ, ಸುಧಾ ಗಣೇಶ್ ವಂದಿಸಿದರು. ಹರಿಣಾಕ್ಷಿ ನಿರೂಪಿಸಿದರು.