ಸ್ವರ್ಗ ಸಂಚಾರ ಭೀತಿದಾಯಕ -
ಹೆಚ್ಚಿದ ವಾಹನ ಸಂಚಾರ-ಅಪಘಾತಗಳ ಸರಮಾಲೆ
ಪೆರ್ಲ: ಪೆರ್ಲ -ಸ್ವರ್ಗ ರಸ್ತೆ ಡಾಮರೀಕರಣಗೊಂಡು ಸುಗಮ ಸಂಚಾರಕ್ಕೆ ಒಂದೆಡೆ ತೆರೆದುಕೊಳ್ಳುತ್ತಿದ್ದಂತೆ ಅಪಘಾತಗಳು ಭೀತಿ ಸೃಷ್ಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 3.8 ಕಿ.ಮೀ ಮೆಕೆಡಾಂ ಟಾರಿಂಗ್ ಹಾಗೂ ಉಳಿದಂತೆ 1.8 ಕಿಮೀ ಇದೀಗ ಮರು ಡಾಮರೀಕರಣ ಭಾಗಶಃ ಪೂರ್ಣಗೊಂಡಿದ್ದು ರಸ್ತೆಯು ತೀರಾ ಅಗಲ ಕಿರಿದಾಗಿರುವುದರಿಂದ ವಾಹನ ಅಪಘಾತಗಳು ನಿತ್ಯ ಘಟನೆಯಾಗಿ ಮಾರ್ಪಟ್ಟಿದೆ.
ಅಂತರ್ ರಾಜ್ಯ ರಸ್ತೆಯಾದ ಪೆರ್ಲ ಅಡ್ಕಸ್ಥಳ ರಸ್ತೆಯು ಪೂರ್ಣವಾಗಿ ಹಾನಿಗೀಡಾಗಿರುವುದು ಮತ್ತು ಪೆರ್ಲ ಸ್ವರ್ಗ ರಸ್ತೆಯು ಸುವ್ಯವಸ್ತಿತ ರಸ್ತೆಯಾಗಿ ಮಾರ್ಪಟ್ಟಿರುವುದರಿಂದ ಕಾಸರಗೋಡು ಭಾಗದಿಂದ ಪುತ್ತೂರು ಭಾಗಗಕ್ಕೆ ಸಾಗುವ ವಾಹನಗಳು ಈ ರಸ್ತೆಯನ್ನು ಆಯ್ದುಕೊಳ್ಳುತ್ತಿದ್ದು, ವಾಹನ ದಟ್ಟಣೆ ವ್ಯಾಪಕವಾಗಿದೆ. ಈ ರಸ್ತೆಯಲ್ಲಿ ಭಾನುವಾರ ಎರಡು ಅಪಘಾತಗಳು ಸಂಭವಿಸಿದೆ.
ಗೋಳಿಕಟ್ಟೆಯಲ್ಲಿ ನಿಲ್ಲಿಸಿದ ಸ್ವಿಫ್ಫ್ಟ್ ಕಾರೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದು ಬೈಕ್ ಸವಾರನನ್ನು ಗಾಯಗಳೊಂದಿಗೆ ಪುತ್ತೂರು ಸಿಟಿ ಹಾಸ್ಪಿಟಲ್ ನಲ್ಲಿ ದಾಖಲುಗೊಳಿಸಲಾಯಿತು. ಈ ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಮೊಗ್ರಾಲ್ ಪುತ್ತೂರಿನಿಂದ ಪುತ್ತೂರು ಭಾಗಕ್ಕೆ ಸಂಚರಿಸುತ್ತಿದ್ದ ಶಿಫ್ಟ್ ಕಾರು ಹಾಗೂ ಪುತ್ತೂರಿನಿಂದ ಮಣಿಯಂಪಾರೆ ಸಾಗುತ್ತಿದ್ದ ಅಲ್ಟೋ 800 ಕಾರುಗಳು ಸ್ವರ್ಗ ಪಳ್ಳಂದ್ರಮೂಲೆ ತಿರುವಿನಲ್ಲಿ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಯಾರೂ ಗಾಯಗಳಿಲ್ಲದೆ ಪಾರಾಗಿದ್ದಾರೆ.ಅಪಘಾತದ ರಭಸಕ್ಕೆ ಎರಡೂ ವಾಹನಗಳ ಚಕ್ರಗಳು ಕಿತ್ತು ಹೋಗಿವೆ.
ಶನಿವಾರ ಬೈಕೊಂದು ಇದೇ ತಿರುವಿನಲ್ಲಿ ಅಪಘಾತಕ್ಕೊಳಗಾಗಿದ್ದು, ಅದೃಷ್ಟವಶಾತ್ ಪಾರಾಗಿತ್ತು.ಈ ರಸ್ತೆಯ ಅಗಲೀಕರಣಕ್ಕಾಗಿ ಊರವರು ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.