HEALTH TIPS

ಯಾವುದೇ ಶೀರ್ಷಿಕೆಯಿಲ್ಲ


            ಮೂರು ದಿನಗಳ ಮಣಿಮುಂಡ ಫೆಸ್ಟ್ ಮ್ಯಾರಥಾನ್ ಓಟದೊಂದಿಗೆ ಸಮಾಪ್ತಿ
   ಉಪ್ಪಳ: ಗ್ರಾಮೀಣ ಪ್ರತಿಭೆಗಳಿಗೆ ಕಲೆ ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಚಟುವಟಿಕೆಗಳು ವ್ಯಾಪಕವಾಗಿ ಬೆಳೆದುಬರಬೇಕು. ವ್ಯಕ್ತಿತ್ವ, ಸಾಮಾಜಿಕ ಜೀವನದ ಗೌರವಯುತ ಬದುಕಿಗೆ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಳ್ಳುವುದು ಪ್ರೇರಣೆಯಾಗುತ್ತದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಕರೆನಿಡಿದರು.
   ಕಳೆದ 26 ವರ್ಷಗಳಿಂದ ಉಪ್ಪಳದ ಮಣಿಮುಂಡ ಗ್ರಾಮದಲ್ಲಿ ಬ್ರದಸರ್್ ಮಣಿಮುಂಡ ಸಂಘಟನೆ ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ವಿದ್ಯಾಭ್ಯಾಸ ಹಾಗೂ ಕ್ರೀಡೆಯತ್ತ ಆಕಷರ್ಿಸಲು ಹಮ್ಮಿಕೊಳ್ಳುವ ಮಣಿಮುಮಡ ಫೆಸ್ಟ್ನ ಪ್ರಸ್ತುತ ವರ್ಷದ ಸಮಾರಂಭದ ಶನಿವಾರ ನಡೆದ ಸಮಾರೋಪದಲ್ಲಿ ಹೊಸಂಗಡಿ ಜಂಕ್ಷನ್ ನಲ್ಲಿ ಆಯೋಜಿಸಲಾದ ಮ್ಯಾರಥಾನ್ ಓಟವನ್ನು ಹಸಿರು ನಿಶಾನೆ ತೊರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಹೊಸ ತಲೆಮಾರಿಗೆ ಭೌದ್ದಿಕ ವಿಕಾಸಕ್ಕೆ ಪ್ರೇರಣೆ ನೀಡುವ ಕಾರ್ಯಚಟುವಟಿಕೆಗಳು ಅಗತ್ಯವಿದ್ದು, ಯಾಂತ್ರಿಕ ಜೀವನ ಮನಸ್ಸು, ಬುದ್ದಿಯನ್ನು ಅರಳಿಸುವ ಕೆಲಸ ನಿರ್ವಹಿಸಲಾರವು. ಅವುಗಳು ಮನಸ್ಸನ್ನು ಕೆರಳಿಸುವುದರ ಜೊತೆಗೆ ವಿಕೃತಿಗೆ ಎಳಸುವ ಭೀತಿ ಇದೀಗ ಕಂಡುಬರುತ್ತಿದೆ ಎಂದು ಎಚ್ಚರಿಸಿದ ಅವರು, ಸ್ಥಳೀಯ ವಿವಿಧ ಸಂಘಟನೆಗಳು ಕ್ರೀಡೋತ್ಸವ, ಸಾಂಸ್ಕೃತಿಕ ಚಟುಟವಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
  ಕಾರ್ಯಕ್ರಮದಲ್ಲಿ ಬ್ರದಸರ್್ ಮಣಿಮುಂಡದ  ಅಧ್ಯಕ್ಷ ಮೊಹಮ್ಮದ್ ಅಝೀಂ ಮಣಿಮುಂಡ, ಮೊಹಮ್ಮದ್ ರಫೀಕ್, ಮೊಹಮ್ಮದ್ ಶಬೀರ್, ಝಫರುಲ್ಲ, ಜೀಸಾನ್, ಅಬ್ದುಲ್ ಲತೀಫ್, ಅಫ್ರೀದ್, ಶಬೀರ್ ಮೊದಲಾದವರು ಉಪಸ್ಥಿತರಿದ್ದು, ನೇತೃತ್ವವನ್ನು ನೀಡಿದರು.
  ಬಳಿಕ ಹೊಸಂಗಡಿಯಿಂದ ಉಪ್ಪಳ ಸಿಟಿಝನ್ ಕ್ಲಬ್ ತನಕ ರಾಷ್ಟ್ರೀಯ ಹೆದ್ದಾರಿಯಲ್ಲೇ ಮ್ಯಾರಥಾನ್ ಓಟ ನಡೆಯಿತು. ಓಟದಲ್ಲಿ  50 ಕ್ಕಿಂತ ಮಿಕ್ಕ ಓಟಗಾರರು ಸ್ಪಧರ್ಿಸಿದ್ದರು.
  ಫೆಸ್ಟ್ ನ ಅಂಗವಾಗಿ ಮೂರುದಿನಗಳಲ್ಲಾಗಿ ಆಫ್ ರೈಡ್ ಬೈಕ್ ರೇಸ್, ಫುಟ್ಬಾಲ್ ಪಂದ್ಯಾಟ, ಹಗ್ಗ ಜಗ್ಗಾಟ, ಮಕ್ಕಳಿಗೆ ಚಿತ್ರ ಬರೆಯುವ ಸ್ಪಧರ್ೆ, ಸಂಗೀತ ಕುಚರ್ಿ ಮೊದಲಾದ ಸ್ಪಧರ್ೆಗಳು, ವಿವಿಧ ವಿಚಾರಗೋಷ್ಠಿಗಳು ನಡೆಯಿತು.
  ಫುಟ್ಬಾಲ್ ಚಾಂಪ್ಯನರಾಗಿ ರೈಡಸರ್್ ತಂಡ ಟ್ರೋಫಿಯನ್ನು ತನ್ನದಾಗಿಸಿತು. ಹಗ್ಗ ಜಗ್ಗಾಟ ದಲ್ಲಿ ಚ್ಯಾಲೆಂಜಸರ್್ ತಂಡ ಟ್ರೋಪಿಯನ್ನು ಪಡಕೊಂಡಿತು. ಬೈಕ್ ಆಫ್ ರೈಡ್ ಸ್ಪಧರ್ೆಯಲ್ಲಿ ಮಣಿಮುಂಡ ಬುಲ್ಸ್ ಮೊದಲ ಸ್ಥಾನವನ್ನು ತನ್ನದಾಗಿಸಿತು.
   2017 ರ ಮಣಿಮುಂಡ ಫೆಸ್ಟ್ ನಲ್ಲಿ ಎಲ್ಲಾ ಸ್ಪಧರ್ೆಗಳಲ್ಲೂ ಉತ್ತಮವಾದ ಅಂಕವನ್ನು ಪಡೆದ ಸ್ಥಳೀಯ ನಿವಾಸಿ ಮೊಹಮ್ಮದ್ ಸಫ್ವಾನ್ ಸ್ಟಾರ್ ಆಫ್ ಮಣಿಮುಂಡವಾಗಿ ಆಯ್ಕೆಯಾದರು. ಮಣಿಮುಂಡ ಫೆಸ್ಟ್ ನೂರಾರು ಕ್ರೀಡಾಭಿಮಾನಿಗಳು ನೋಡಲು ಆಗಮಿಸಿದ್ದರು. ಯುವಕರಿಗಾಗಿ ಲಾಂಗ್ ಜಂಪ್, ಹೈ ಜಂಪ್, ವಾಲಿಬಾಲ್, ಆಯೋಜಿಸಿಸಿರುವುದರ ಜೊತೆಗೆ ಮಹಿಳೆಯರಿಗಾಗಿ ಮೆಹಂದಿ ಸ್ಪಧರ್ೆ, ಒಲೆ ರಹಿತ ಅಡುಗೆ ತಯಾರಿ, ಪ್ರಬಂಧ ಹಾಗೂ ಚಿತ್ರ ರಚನೆಗಳ ಸ್ಪಧರ್ೆ ನಡೆದಿತ್ತು.
  ಸ್ಪಧರ್ೆಯಲ್ಲಿ ವಿಜೇತರಾದವರನ್ನು  ಜ.6 ರಂದು ಪೋಷಕರ ಉಪಸ್ಥಿತಿಯಲ್ಲಿ ಗೌರವಿಸಿ ಸನ್ಮಾನಿಸಲಾಗುವುದಾಗಿ ಸಂಘಟಕರು ತಿಳಿಸಿದ್ದಾರೆ.ಈ ಸಂದರ್ಭ ಮಣಿಮುಂಡ ಪ್ರದೇಶದ ವ್ಯಾಪ್ತಿಗೊಳಪಟ್ಟ ಸದ್ದಿಲ್ಲದೆ ಸುದ್ದಿಯಾಗುತ್ತಿರುವ ಸಮಾಜ ಸೇವಕರನ್ನು ಹಾಗೂ ಪ್ರಾಯಕ್ಕೆ ತಕ್ಕ ಸಮಯದಲ್ಲಿ ಮೋಟಾರು ವಾಹನಗಳ ಪರವಾನಿಗೆ ಪಡೆದವರನ್ನು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುವುದು. ಜೊತೆಗೆ ಹಿರಿಯ ನಾಗರಿಕರ ಅನುಭವಗಳನ್ನು ಯುವ ಸಮೂಹದೊಂದಿಗೆ ಹಂಚಿಕೊಳ್ಳುವ ವಿಶೇಷ ಕಾರ್ಯಕ್ರಮ ಕೂಡಾ ನಡೆಯಲಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries