HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬೆರಿಪದವು ಶುದ್ಧಜಲ ವಿತರಣಾ ಯೋಜನೆಯಲ್ಲಿ  ಅಕ್ರಮ ಬೆಳಕಿಗೆ
                       ರಸ್ತೆ  ಕಾಂಕ್ರೀಟ್ಗೆ ಕುಡಿನೀರು ಬಳಕೆ!
  ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆರಿಪದವು ಶುದ್ಧಜಲ ವಿತರಣಾ ಯೋಜನೆಯಲ್ಲಿ ಭಾರೀ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಕುಡಿಯುವ ನೀರು ವಿತರಿಸಬೇಕಾಗಿದ್ದರೂ, ಅದರ ಬದಲು ರಸ್ತೆ  ಕಾಮಗಾರಿಗೆ ಈ ನೀರನ್ನು  ಬಳಸುತ್ತಿರುವುದನ್ನು  ಪತ್ತೆಹಚ್ಚಲಾಗಿದೆ. ಶುದ್ಧಜಲ ಸಮಿತಿಯು ಈ ನಿಟ್ಟಿನಲ್ಲಿ  ಪ್ರಧಾನ ಆರೋಪಿಯಾಗಿರುವುದಾಗಿ ತಿಳಿದುಬಂದಿದೆ.
    ಬೆರಿಪದವು ಸಮೀಪದ ಕನರ್ಾಟಕದ ರಸ್ತೆಯೊಂದನ್ನು  ಕಾಂಕ್ರೀಟ್ ಕಾಮಗಾರಿ ನಡೆಸಲು  ಈ ಯೋಜನೆಯ ಕುಡಿನೀರಿನ ಟ್ಯಾಂಕ್ಗೆ ನೇರ ಪೈಪ್ ಅಳವಡಿಸಿ ಬೆಳಗ್ಗೆಯಿಂದ ಸಂಜೆ ತನಕ ನೀರು ನೀಡಲಾಗುತ್ತಿತ್ತು. ಹಲವು ದಿನಗಳಿಂದ ಈ ಅಕ್ರಮ ನಡೆಯುತ್ತಿತ್ತು. ಈ ಅಕ್ರಮದ ವಿರುದ್ಧ  ಸ್ಥಳ ಸಂದಶರ್ಿಸಿದ ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ಕೆ.ಜಯಲಕ್ಷ್ಮಿ  ಭಟ್ ಅವರು ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಈ ಅವ್ಯವಹಾರದ ವಿರುದ್ಧ  ಜಿಲ್ಲಾಧಿಕಾರಿಗಳಿಗೆ, ಗ್ರಾಮ ಪಂಚಾಯತು ಅಧ್ಯಕ್ಷರಿಗೆ ಹಾಗೂ ಜಲನಿಧಿ ಪಂಚಾಯತು ಅಧಿಕಾರಿಗೆ ದೂರು ನೀಡಿದ್ದಾರೆ.
    ಪ್ರಸ್ತುತ ಕುಡಿಯುವ ನೀರು ಆರಂಭಗೊಳ್ಳುವ ಸಂದರ್ಭದಲ್ಲಿ  ತಮ್ಮ  ಪಾಲಿನ ಶುಲ್ಕವನ್ನು  ಶೇಕಡಾ 10ರಷ್ಟು  ನೀಡಿ ಹೆಸರು ನೋಂದಾಯಿಸಿರುವ ಕುಟುಂಬಗಳಿಗೆ ಇದುವರೆಗೆ ನೀರನ್ನು  ವಿತರಿಸದೇ ವಂಚಿಸಲಾಗಿದೆ. ಆದರೆ ಕುಡಿಯುವುದಕ್ಕೆ ಮಾತ್ರ ಉಪಯೋಗಿಸಬೇಕಾದ ಈ ಯೋಜನೆಯ ನೀರನ್ನು  ಕನರ್ಾಟಕದ ರಸ್ತೆ  ಕಾಂಕ್ರಿಟೀಕರಣಕ್ಕೆ ದಿನಪೂತರ್ಿ ಮೋಟಾರ್ ಮೂಲಕ ನೀರು ಒದಗಿಸಿರುವುದು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಈ ನಿಟ್ಟಿನಲ್ಲಿ  ಜಲನಿಧಿ ಯೋಜನಾ ಸಮಿತಿಯವರು ಅವ್ಯವಹಾರದಲ್ಲಿ  ಸಂಪೂರ್ಣ ಭಾಗಿಯಾಗಿದ್ದಾರೆಂದು
ಮಾಹಿತಿ ಹೇಳುತ್ತಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries