ಕೃಷಿ ಭೂಮಿ ನಾಶ-ದೂರು ದಾಖಲು
ಮುಳ್ಳೇರಿಯ: ಕೌಟುಂಬಿಕ ಸೌಹಾರ್ಧತೆಗೆ ಧಕ್ಕೆಯೊದಗಿದರೆ ಜನರು ಯಾವ ಮಟ್ಟಕ್ಕಿಳಿಯುತ್ತಾರೆ ಎಂಬುದಕ್ಕೆ ನಿದರ್ಶನವಾದ ಘಟನೆ ನಡೆದಿದೆ. ಪರಸ್ಪರ ಸಂಬಂಧಿಗಳು ದಾಯಾದಿ ಮತ್ಸರ, ವಿವಾದಗಳಿಗೆ ಬುದ್ದಿಯನ್ನು ನೀಡಿ ಬೆಳೆಸಿದ ಕೃಷಿಯನ್ನೇ ನಾಶಗೈದ ಬಗ್ಗೆ ದೂರಲಾಗಿದೆ.
ದೇಲಂಪಾಡಿ ಗ್ರಾಮ ಪಂಚಾಯತಿನ ಮಯ್ಯಾಳದಲ್ಲಿ ಪುರಂದರ ಎಂಬವರು ಬೆಳೆಸಿದ ಸುಮಾರು ಮುಕ್ಕಾಲು ಎಕ್ರೆ ಗದ್ದೆಯಲ್ಲಿ ಬೆಳೆಸಿದ ಕೃಷಿಯನ್ನು ಸಂಬಂದಿಗಳಾದ ಲಿಂಗಪ್ಪ ಪೂಜಾರಿ, ಅವರ ಪತ್ನಿ ಮೀನಾಕ್ಷಿ, ಮಕ್ಕಳಾದ ಸುರೇಶ, ರಮೇಶ, ತಂಗಿಯಂದಿರಾದ ಭಾಗೀರಥಿ ಬೆಳೇರಿ, ಪ್ರೇಮ ಕಾಯರ್ತಡ್ಕ ಹಾಗು ಗಣೇಶ್ ಕೇಪು ಎಂಬವರು ಸೇರಿ ಸಂಪೂರ್ಣ ನಾಶ ಮಾಡಿದ್ದಾರೆ ಎಂದು ಆದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೃತ್ಯದಿಂದಾಗಿ ಸುಮಾರು ಒಂದು ಲಕ್ಷ ರೂ.ಗಷ್ಟು ಕೃಷಿ ನಷ್ಟವಾಗಿದೆ ಎಂದು ದೂರಲಾಗಿದೆ.
ಈ ಸಂಬಂಧ ಪುರಂದರ ಅವರು ನೀಡಿದ ದೂರಿನನ್ವಯ ಪೋಲಿಸರು ಕೇಸು ದಾಖಲಿಸಿ, ತನಿಖೆಗೆ ತೆರಳಿದಾಗ ಆರೋಪಿಗಳು ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅನುಚಿತವಾಗಿ ವತರ್ಿಸಿದರೆಂದು ಅದೂರು ಪೋಲಿಸರಾದ ರಾಜು ಮತ್ತುಅನೀಶ್ ಅವರು ಮತ್ತೊಂದು ದೂರನ್ನು ಕೂಡ ದಾಖಲಿಸಿದ್ದಾರೆ.