ಭಾರತೀಯ ಕಿಸಾನ್ ಸಂಘದ ಸಭೆ
ಮಂಜೇಶ್ವರ: ಭಾರತೀಯ ಕಿಸಾನ್ ಸಂಘದ ಮೀಂಜ ಪಂಚಾಯತು ಮಟ್ಟದ ಸಭೆಯು ಮೀಯಪದವು ಶಾಲಾ ವಠಾರದಲ್ಲಿ ಇತ್ತೀಚೆಗೆ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಭಾರತೀಯ ಮಜ್ದೂರ ಸಭಾದ ಮಂಜೇಶ್ವರ ವಲಯ ಕಾರ್ಯದಶರ್ಿ ಕೃಷ್ಣ ಬೆಜ್ಜ ಅವರು ವಹಿಸಿದ್ದರು. ಅತಿಥಿಗಳಾಗಿ ಟೆಲಿಕಾಂ ನಿವೃತ್ತ ಎಂಜಿನಿಯರ್ ಸುಬ್ಬಣ್ಣ ಭಟ್ ಉಳುವಾನ ವಹಿಸಿದ್ದರು.
ರಾಜ್ಯಸಮಿತಿ ಸದಸ್ಯ ರಾಮ ಕಳತ್ತೂರು ಭಾರತಿಯ ಕಿಸಾನ್ ಸಂಘ ನಡೆದು ಬಂದ ರೀತಿ ಬಗ್ಗೆ ವಿವರಿಸಿ, ಮುಂದಕ್ಕೆ ರೈತರು ಒಗ್ಗಟ್ಟಾಗಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡದಿದ್ದಲ್ಲಿ ರೈತರ ಉದ್ಧಾರ ಅಸಾಧ್ಯ. ರೈತರು ಹಲವಾರು ಸಮಸ್ಯೆಗಳಿಂದ ಹೈರಾಣವಾಗಿದ್ದರು ನಮ್ಮನ್ನಾಳಿದ ಯಾವುದೇ ಸರಕಾರಗಳು ರೈತರ ಕಷ್ಟ ಪರಿಹರಿಸುವಲ್ಲಿ ತಮ್ಮ ಇಚ್ಛಾ ಶಕ್ತಿಯನ್ನು ಪ್ರದಶರ್ಿಸಲಿಲ್ಲ. ನಮ್ಮ ಸಂಘಟನೆಯು ಪಕ್ಷಾತೀತವಾಗಿದ್ದು ರೈತ ಬೆಳೆದ ಬೆಳೆಗೆ ಉತ್ಪಾದನಾ ವೆಚ್ಚ ಮತ್ತು ಶೇ.20 ಅದಕ್ಕೆ ಸೇರಿ ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತನ ಸಮಸ್ಯೆಗೆ ಸ್ಪಂದಿಸಬೇಕೆಂದು ಒತಾಯಿಸಿದರು. ಕೇಂದ್ರ ಸರಕಾರದ ಜಿ.ಎಸ್.ಟಿ. ಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಗಳು ಲಭ್ಯವಾಗಿಲ್ಲವಾದುದರಿಂದ ಮುಂದಿನ ತಿಂಗಳು ಜಿ.ಎಸ್.ಟಿ ಯ ಬಗ್ಗೆ ಮಾಹಿತಿ ಮತ್ತು ಚಚರ್ಾ ಕಾರ್ಯಕ್ರಮ ಮತ್ತು ರೈತನಿಗೆ ಸರಕಾರದಿಂದ ಸಿಗುವ ಸವಲತ್ತು, ಜೈವಿಕ ಕೃಷಿಯ ಬಗ್ಗೆ ಮಾಹಿತಿಗಳನ್ನು ನೀಡಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯಸಮಿತಿ ಸದಸ್ಯ ವಿನೋದ್ ಕೊಜಪ್ಪೆ, ಜಿಲ್ಲಾ ಕಾರ್ಯದಶರ್ಿ ಕೊಮ್ಮಂಡ ಸದಾನಂದ ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿ ಪಜಿಂಗಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಿಸಾನ್ ಸಂಘದ ಪ್ರಮುಖರಾದ ಜಯಪ್ರಕಾಶ್ ಮುನಿಪ್ಪಾಡಿ, ಮೋಹನ್ದಾಸ್ ಭಂಡಾರಿ ತಲೆಕಲ ಮತ್ತು ಶ್ರೀಧರ ರಾವ್ ಮೀಯಪದವು ಮತ್ತಿತರರು ಉಪಸ್ಥಿತರಿದ್ದರು.