HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಎಂಡೋಸಲ್ಫಾನ್ ಪಟ್ಟಿ ಅಸ್ತವ್ಯಸ್ತ : ಪ್ರತಿಭಟನೆಗೆ ಸಿದ್ಧತೆ
    ಕಾಸರಗೋಡು: ಅರ್ಹತೆ ಇದ್ದರೂ ಪಟ್ಟಿಯಿಂದ ಹೊರಗುಳಿಯಲ್ಪಟ್ಟ  ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ನ್ಯಾಯಯುತ ಸವಲತ್ತು ಪಡೆಯಲು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ. 
   2017ರ ಎಪ್ರಿಲ್ನಲ್ಲಿ  ನಡೆದ ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ  3997 ಮಂದಿಯನ್ನು  ತಪಾಸಣೆಗೊಳಪಡಿಸಲಾಗಿತ್ತು. ಅದರಂತೆ ವಿವಿಧ ಪ್ರಕ್ರಿಯೆಗಳನ್ನು  ಪೂತರ್ಿಗೊಳಿಸಿ 1905 ಮಂದಿಯನ್ನು  ಆರಿಸಲಾಗಿದೆ. ಹೊಣೆ ವಹಿಸಿಕೊಂಡ ಡೆಪ್ಯುಟಿ ಕಲೆಕ್ಟರ್ ಅವರು ಸೆಲ್ನ ಅಂಗೀಕಾರಕ್ಕಾಗಿ ಈ ಪಟ್ಟಿಯನ್ನು  ಸಮಪರ್ಿಸಿದಾಗ ಯಾವುದೇ ಕಾರಣ ನೀಡದೆ 287 ಮಂದಿಯನ್ನು  ಮಾತ್ರವೇ ಆಯ್ಕೆ ಮಾಡಲಾಯಿತು ಎಂದು ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.
   ಜಿಲ್ಲೆಯ ಎಲ್ಲಾ  ಸಂತ್ರಸ್ತರಿಗೂ ವೈದ್ಯಕೀಯ ಶಿಬಿರದಲ್ಲಿ  ತಪಾಸಣೆಗೆ ಅವಕಾಶ ನೀಡಿದರೂ ಈಗಲೂ ಗಡಿಗಳನ್ನು  ನಿರ್ಣಯಿಸಿ ಸಂತ್ರಸ್ತರನ್ನು  ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ. ಆದರೆ ಅದು ಸರಿಯಲ್ಲ  ಎಂದು ಜನಪರ ಒಕ್ಕೂಟದ ಪೂರ್ವಭಾವಿ ಸಭೆ ಆಪಾದಿಸಿದೆ. ಅರ್ಹತೆ ಇರುವವರನ್ನು  ಯಾದಿಯಿಂದ ಹೊರಗಿಡಲು ಅವಕಾಶ ನೀಡಬಾರದೆಂದು ರಾಜ್ಯ ಸರಕಾರವನ್ನು  ಆಗ್ರಹಿಸಲಾಯಿತು.
   ಈ ಕುರಿತು ಕಾಸರಗೋಡಿನಲ್ಲಿ  ನಡೆದ ಪೂರ್ವಭಾವಿ ಸಭೆಯಲ್ಲಿ  ಮುನೀಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ಅಂಬಲತ್ತರ ಕುಂಞಿಕೃಷ್ಣನ್, ಕೆ.ಚಂದ್ರಾವತಿ, ಸಿ.ವಿ.ನಳಿನಿ, ಗೋವಿಂದನ್ ಕಯ್ಯೂರು, ಪ್ರೇಮಚಂದ್ರನ್, ಎಂ.ಪಿ.ಜಮೀಲಾ, ಬಿ.ಮಿಸ್ರಿಯಾ, ವಿಮಲಾ ಫ್ರಾನ್ಸಿಸ್, ಟಿ.ಅಖಿಲಕುಮಾರಿ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries