HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಭಕ್ತಿಭಾವದ ಕೆಲಸ ಕಾರ್ಯಗಳಿಗೆ ಯಶಸ್ಸು ಖಂಡಿತ : ಬಿ.ವಸಂತ ಪೈ
    ಮಧೂರು: ಕಾಣದ ಶಕ್ತಿಯನ್ನು ಕಂಡು ಅನುಗ್ರಹ ಪಡೆಯಲು ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಭಕ್ತಿಭಾವ ತುಂಬಿರಬೇಕು. ಅದರಿಂದ ಪೂರ್ಣ ಯಶಸ್ಸು ಸಾಧ್ಯ ಎಂದು ಪರಕ್ಕಿಲ ಶ್ರೀ ಮಹಾದೇವ ಶಾಸ್ತಾವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಹೇಳಿದರು.
   ಪರಕ್ಕಿಲ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಯಾವುದೇ ಕಾರ್ಯ ಮಾಡುವಾಗಲೂ ಧನಾತ್ಮಕ ಚಿಂತನೆ ಅಗತ್ಯ. ಎಲ್ಲರೂ ಒಂದಾಗಿ ನಮ್ಮ ಮೌಲಿಕ ಪರಂಪರೆಯನ್ನು ಉಳಿಸಬೇಕು. ಆಡಂಬರವನ್ನು ತ್ಯಜಿಸಿ ಉದ್ದೇಶಿತ ಸತ್ಕಾರ್ಯಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಧಾಮರ್ಿಕ ವಿಧಿವಿಧಾನಗಳನ್ನು ನಿಷ್ಠೆಯಿಂದ ಆಚರಿಸಿದರೆ ದೇವರ ಅನುಗ್ರಹ ಪ್ರಾಪ್ತವಾಗಿ ನಾಡಿಗೆ, ಜನತೆಗೆ ಕ್ಷೇಮವುಂಟಾಗುವುದು ಎಂದು ವಸಂತ ಪೈ ಹೇಳಿದರು.
    ಪರಕ್ಕಿಲ ಕ್ಷೇತ್ರದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಧ್ಯಕ್ಷತೆ ವಹಿಸಿದರು. ಶ್ರಮದಾನದ ಮೂಲಕ ಊರವರು ನೀಡಿದ ಸಹಕಾರವನ್ನು ಸ್ಮರಿಸಿದ ಅವರು ಆಥರ್ಿಕ ಸಂಪನ್ಮೂಲ ಸಂಗ್ರಹಕ್ಕೆ ಮಹಿಳೆಯರು, ಮಹನೀಯರು ಮಾಡುತ್ತಿರುವ ಸೇವಾ ಮನೋಭಾವ ಕಾರ್ಯವನ್ನು ಅಭಿನಂದಿಸಿದರು. ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕಾಯರ್ಾಧ್ಯಕ್ಷ ಕೆ.ಸುರೇಶ್ ಸೂಲರ್ು, ಪದಾಧಿಕಾರಿಗಳಾದ ರಾಮ್ಪ್ರಸಾದ್, ಕೆ.ಎನ್.ವೆಂಕಟ್ರಮಣ ಹೊಳ್ಳ, ಎ.ವಾಸುದೇವ ಹೊಳ್ಳ, ಬಾಲಕೃಷ್ಣ ಉಳಿಯ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ತಾರಾನಾಥ ಮಧೂರು, ವಿಠಲ ಗಟ್ಟಿ ಪರಕ್ಕಿಲ, ಚಂದ್ರಗೋಪಾಲ ಮಧೂರು, ನವೀನ್ ಕುಮಾರ್ ಪರಕ್ಕಿಲ ಸಲಹೆ ಸೂಚನೆ, ಅಭಿಪ್ರಾಯಗಳನ್ನು ಮಂಡಿಸಿದರು.
   ಕಾರ್ಯದಶರ್ಿ ಯು.ಉಮೇಶ ಗಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಕೆ.ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಉಪಾಧ್ಯಕ್ಷ ಯು.ಬಾಲಕೃಷ್ಣ  ವಂದಿಸಿದರು. ಪ್ರಧಾನ ಸಮಿತಿ, ಉಪಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries