ಕೋಳ್ಯೂರು ರಸ್ತೆ ದುರಸ್ತಿ ಪ್ರಧಾನ ಮಂತ್ರಿಯ ನಿದಿಯಿುಂದಲ್ಲ : ಶೋಭಾ ಸೋಮಪ್ಪ
ಮಂಜೇಶ್ವರ: ಮಜೀರ್ ಪಳ್ಳ - ಕೋಳ್ಯೂರು ರಸ್ತೆ ದುರವಸ್ಥೆಯ ಕುರಿತು ದೈಗೋಳಿ ಬಲಿಪಗುಳಿ ನಿವಾಸಿ ಜಯಪ್ರಕಾಶ್ ಎಂಬವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದು ಒಂದು ಮಹಾಸಾಧನೆ ಎಂಬಂತೆ ಬಿಂಬಿಸುವ ಯತ್ನಗಳು ನಡೆಯುತ್ತಿದ್ದು, ಜನಸಾಮಾನ್ಯರನ್ನು ಹಾದಿತಪ್ಪಿಸಲು ನಡೆಸುವ ಕೀಳು ಪ್ರಚಾರ ತಂತ್ರಗಳು ಎಂದು ಮೀಂಜ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ ಹೇಳಿದ್ದಾರೆ.
ಪ್ರಧಾನ ಮಂತ್ರಿಯವರಿಗೆ ಜಯಪ್ರಕಾಶ್ ಬರೆದ ಪತ್ರ ಹಾಗೂ ಆ ಪತ್ರವನ್ನು ಪ್ರಧಾನಮಂತ್ರಿ ಕಛೇರಿಯು ಕಾಸರಗೋಡು ಜಿಲ್ಲಾಧಿಕಾರಿಗೆ ಪರಿಶೀಲನೆಗೆ ಕಳಿಸಿದ ಘಟನೆಯು ಫಲಿತಾಂಶ ಶೂನ್ಯವಾಗಿದೆ. ಆ ಪತ್ರದ ಆಧಾರದಲ್ಲಿ ರಸ್ತೆ ದುರಸ್ತಿಗೆ ಯಾವ ಮೊತ್ತವನ್ನೂ ಮೀಸಲಿಡಲಾಗಿಲ್ಲ. ಜಯಪ್ರಕಾಶ್ ಪತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವ ಪೋಸ್ಟ್ಮ್ಯಾನ್ ಕೆಲಸವನ್ನು ಮಾತ್ರ ಪ್ರಧಾನಮಂತ್ರಿಯವರು ನಿರ್ವಹಿಸಿದ್ದಾರೆ. ಈ ರಸ್ತೆಗೆ ನಯಾ ಪೈಸೆ ಮೊತ್ತವನ್ನು ಕೂಡಾ ಪ್ರಧಾನಮಂತ್ರಿಯವರು ನೀಡಿಲ್ಲ, ಪತ್ರವನ್ನು ಜಿಲ್ಲಾಧಿಕಾರಿಗೆ ಮರಳಿಸಿ ಕೈತೊಳೆದುಕೊಂಡಿದ್ದನ್ನು ಪತ್ರಿಕಾ ಹೇಳಿಕೆ. ಬ್ಯಾನರ್ ಹಾಕುವ ಮೂಲಕ ರಾಜಕೀಯ ಮೈಲೇಜ್ ಗಿಟ್ಟಿಸುವ ಹೀನತಂತ್ರವನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದು ಶೋಭಾ ಸೋಮಪ್ಪ ತಿಳಿಸಿದ್ದಾರೆ.
ಮಂಜೇಶ್ವರ ಶಾಸಕರ ಮನವಿಯ ಮೇರೆಗೆ 2017ರ ಫೆ. 25 ರಂದು ಮಜೀರ್ಪಳ್ಳ - ಕೋಳ್ಯೂರು ರಸ್ತೆ ದುರಸ್ತಿಗೆ 15 ಲಕ್ಷ.ರೂ. ಮೀಸಲಿಟ್ಟು ಲೋಕೋಪಯೋಗಿ ಇಲಾಖೆ ಸಿ/ಆರ್&ಬಿ/ಸಿಎಫ್/ಕೆಎಸ್ಜಿಡಿ/07/2016-17 ನಂಬ್ರ ಪ್ರಕಾರ ಆಡಳಿತಾನುಮತಿ ನೀಡಿತ್ತು.ಮೇಲಿನ ಆಡಳಿತಾನುಮತಿಯ ಮೇರೆಗೆ ಸದ್ರಿ ಕಾಮಗಾರಿಗೆ ದಿನಾಂಕ 2017ರ ಮಾ.20 ರಂದು ಟಿ.ಎಸ್.ನಂಬ್ರ 3441/16-17 ರ ಪ್ರಕಾರ ತಾಂತ್ರಿಕ ಅನುಮತಿಯೂ ದೊರೆತಿತ್ತು. ಬಳಿಕ 2017ರ ಏ. 7 ರಂದು ಆ ಕಾಮಗಾರಿಯ ಟೆಂಡರ್ ನಡೆದಿದ್ದು , ದಿನಾಂಕ ಮೇ. 4 ರಂದು ಪೈವಳಿಕೆಯ ಗುತ್ತಿಗೆದಾರರಾದ ಕೆ.ಅಬ್ದುಲ್ ರಹಿಮಾನ್ ಎಂಬವರಿಗೆ 14,10,670ರೂ.ಗಳ ಕಾಮಗಾರಿ ಅನುಮತಿ ನೀಡಲಾಗಿತ್ತು.
ಆದರೆ ಜಯಪ್ರಕಾಶ್ ರವರು ಮೇಲಿನ ಎಲ್ಲಾ ಕಾರ್ಯಗಳು ಮುಕ್ತಾಯಗೊಂಡ ಬಳಿಕ 2017ರ ಏ.3 ರಂದು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದು,ಅದು ಪಿಎಂಓಪಿಜಿ/ಇ/2017/0418069/3-8-2017 ಎಂದು ನೋಂದಾವಣೆಗೊಂಡಿದೆ. ಈ ಪತ್ರವು ಮೀಂಜ ಗ್ರಾ.ಪಂ.ಗೆ ಜುಲೈ 6 ರಂದು ತಲುಪಿತ್ತು.ಈ ವೇಳೆಗಾಗಲೇ ಲೋಕೋಪಯೋಗಿ ಇಲಾಖೆ ವತಿಯಿಂದ ಭಾಗಿಕ ಕೆಲಸ ಪೂತರ್ಿಗೊಂಡಿತ್ತು. ಮಳೆಯ ಹಿನ್ನೆಲೆಯಲ್ಲಿ ಡಾಮರೀಕರಣ ನಂತರ ನಡೆದಿತ್ತು, ಇದಕ್ಕೂ ಮೊದಲೇ ಗ್ರಾ.ಪಂ.ವತಿಯಿಂದ 4 ಲಕ್ಷ.ರೂ.ಮೀಸಲಿಟ್ಟಿದ್ದು,ಕಾಮಗಾರಿ ಪೂತರ್ಿಯಾಗಿದೆ. ಇದೇ ರಸ್ತೆಗೆ ಪಿ.ಸೋಮಪ್ಪರವರು ಸದಸ್ಯರಾಗಿದ್ದಾಗ 2015-16ರ ಯೋಜನೆಯಲ್ಲಿ 4 ಲಕ್ಷ.ರೂ.ವ್ಯಯಿಸಲಾಗಿತ್ತು.
ವಿಷಯ ಹೀಗಿರುವಾಗ ಯಾರೋ ಮಾಡಿದ ಕೆಲಸದ ಹಿರಿಮೆಯನ್ನು ತಮ್ಮ ಹೆಸರಿಗೆ ವಗರ್ಾಯಿಸುವ ಕಳಪೆ ಕಾರ್ಯದಲ್ಲಿ ಕೆಲವು ಶಕ್ತಿಗಳು ನಿರತವಾಗಿದೆ. ಪ್ರಸಿದ್ಧ ಕೋಳ್ಯೂರು ಶ್ರೀ ಶಂಕರನಾರಾಯಣ ಜಾತ್ರಾ ಸಂದರ್ಭದಲ್ಲಿ ಜನತೆಯ ಹಾದಿ ತಪ್ಪಿಸಲು ಪ್ರಧಾನಮಂತ್ರಿಯವರ ಬೃಹತ್ ಫ್ಲೆಕ್ಸ್ ಹಾಕಿ ಜನತೆಯ ಭಾವನೆಗಳನ್ನು ತಮ್ಮ ಪರವಾಗಿ ಪರಿವತರ್ಿಸುವ ಅತ್ಯಂತ ಕೇಳು ಪ್ರಚಾರ ತಂತ್ರವು ಸಕಲ ಪ್ರಜಾಪ್ರಭುತ್ವ ಮಯರ್ಾದೆಗಳ ಉಲ್ಲಂಘನೆಯಾಗಿದೆ. ಬುದ್ಧಿವಂತ ಜನರು ಇವರ ವಂಚನೆಯನ್ನು ಮನಗಂಡಿದ್ದಾರೆ ಎಂದು ಶೋಭಾ ಸೋಮಪ್ಪರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.