HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಉಪ್ಪಳದಲ್ಲಿ ಕನ್ನಡ ಚಿಂತನೆ
    ಉಪ್ಪಳ: ವಿದ್ಯಾಥರ್ಿಗಳ ಪ್ರತಿಭೆಗಳನ್ನು ಬೆಳೆಸಿ ಪೋಶಿಸುವ ವಿದ್ಯಾಲಯಗಳು ಸಮಾಜದ ಬಲುದೊಡ್ಡ ಆಸ್ತಿ. ಮಾತೃ ಭಾಷೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಆಧುನಿಕ ವಿದ್ಯಾಭ್ಯಾಸ ಸವಾಲುಗಳನ್ನು ಎದುರಿಸುತ್ತಿದ್ದರೂ ನಿರಂತರ ಚಟುವಟಿಕೆಗಳ ಮೂಲಕ ಜಾಗೃತಿಯನ್ನು ಕಾಪಿಡಲು ಸಾಧ್ಯವಾಗುವುದು ಎಂದು ಉಪ್ಪಳ ಸರಕಾರಿ ಫ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಉಪ್ಪಳ ಗೇಟ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಅಪೂರ್ವ ಕಲಾವಿದರು ಸಂಸ್ಥೆ ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿರುವ " ಕನ್ನಡ ಚಿಂತನೆ" ತಿಂಗಳ ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಸಂಜೆ ಉಪ್ಪಳ ಸರಕಾರಿ ಫ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿಗಾರ್ ಮಾತನಾಡಿ, ತಂತ್ರಜ್ಞಾನ, ಉನ್ನತ ಜೀವನ ಮಟ್ಟದ ಯುಗದಲ್ಲಿ ಬದುಕುತ್ತಿರುವ ಯುವ ಸಮೂಹ ಪರಂಪರೆ ಸಾಗಿಬಂದ ಹಾದಿಯನ್ನು ಮರೆಯುತ್ತಿರುವುದು ಕಳವಳಕಾರಿ ಎಂದು ತಿಳಿಸಿದರು. ವಿಸ್ಕೃತವಾಗಿ ಜಿಲ್ಲೆಯ ದಕ್ಷಿಣದ ತುದಿಯವರೆಗೂ ವಿಸ್ತರಿಸಿದ್ದ ಗಡಿನಾಡು ಕಾಸರಗೋಡಿನ ಕನ್ನಡ ಇಂದು ಧ್ವನಿ ಕುಂಠಿತಗೊಳ್ಳುವ ಭೀತಿ ಎದುರಿಸುತ್ತಿದ್ದು, ಮಾತೃ ಭಾಷೆಯ ಬಗೆಗೆ ಗಂಭೀರವಾಗಿ ಚಿಂತಿಸುವಲ್ಲಿ ಆಲಸ್ಯ ವಹಿಸಿರುವುದು ಗಂಭೀರ ಸ್ವರೂಪದ ಗಂಡಾಂತರಗಳಿಗೆ ಕಾರಣವಾಗುವುದು. ಮೂಲ ಸಂಸ್ಕೃತಿ, ಭಾಷೆಯನ್ನು ಮರೆಯುವುದು ಭವಿಷ್ಯದಲ್ಲಿ ಅಸ್ತಿತ್ವಕ್ಕೆ ಸವಾಲಾಗಲಿದೆ ಎಂದು ತಿಳಿಸಿದರು. ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಸಂಬಂಧಿಸಿ ಮನೆಮನೆಗಳಲ್ಲಿ ಜಾಗೃತಿ ಮೂಡಿಬರಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಸಮಾರಂಭದಲ್ಲಿ ಮಕ್ಕಳ ರಂಗಭೂಮಿ ಮತ್ತು ಕಾಸರಗೋಡು ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದ ಪತ್ರಕರ್ತ ಪುರುಷೋತ್ತಮ ಭಟ್ ಕೆ ಅವರು, ರಂಗಭೂಮಿ ಆಯಾಮದ ಹಿನ್ನೆಲೆಯ ಸಾಮಾಜಿಕ ವ್ಯವಸ್ಥೆ ಸುವ್ಯವಸ್ಥಿತವಾಗಿ ಪ್ರಬುದ್ದತೆಯನ್ನು ಎತ್ತಿತೋರಿಸಿವೆ. ಮಕ್ಕಳ ಕ್ರಿಯಾತ್ಮಕತೆ, ನಿಖರ ಗುರಿ ಪ್ರಾಪ್ತಿಯಾಗುವಲ್ಲಿ ರಂಗಭೂಮಿಯ ಸಂಪರ್ಕವಿದ್ದಲ್ಲಿ ಸುಲಭಸಾಧ್ಯವಾಗಿ ಪರಿಪೂರ್ಣತೆಯೆಡೆಗೆ ದಾರಿಮಾಡಿಕೊಟ್ಟಿದೆ ಎಂದು ತಿಳಿಸಿದರು. ವೈಯುಕ್ತಿಕ ಮತ್ತು ಸಾಮಾಜಿಕದ ಅಂತರಂಗವನ್ನು ಪ್ರತಿಬಿಂಬಿಸುವ ನಾಟಕಗಳು ಪರಿವರ್ತನೆಗೆ ಕಾರಣವಾಗುತ್ತದೆ. ಮಕ್ಕಳ ಮನೋಭೂಮಿಯೊಳಗಿನ ಪ್ರಶ್ನೆ, ಕುತೂಹಲ, ಮುಗ್ದತೆ, ಮುನ್ನುಗ್ಗುವ ಮನೋಭಾವನೆಗಳಿಗೆ ಪ್ರೇರಣೆ ನೀಡುವ ಮಕ್ಕಳ ನಾಟಕಗಳು ಭವಿಷ್ಯದ ಸಂತುಷ್ಠ ಸಮಾಜ ನಿಮರ್ಾಣಕ್ಕೆ ಬುನಾದಿಯೊದಗಿಸುತ್ತದೆ ಎಂದು ತಿಳಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಮಿತಿಗೊಳಪಟ್ಟು ಬೆಳೆದುಬಂದ ಮಕ್ಕಳ ರಂಗಭೂಮಿಗೆ ಸ್ಥಳೀಯ ಶಾಲೆಗಳು, ಶಿಕ್ಷಕರು ಅವರದ್ದೇ ಕೊಡುಗೆಗಳ ಮೂಲಕ ಮನನೀಯರಾಗಿದ್ದು, ಹೊಸ ತಲೆಮಾರಿನ ಶಿಕ್ಷಣ ವ್ಯವಸ್ಥೆಯ ಗೊಂದಲದ ಮಧ್ಯೆ ಮಕ್ಕಳ ರಂಗಭೂಮಿ ಸಾಕಷ್ಟು ಕಲಿಯಬೇಕಾದುದು ಇದೆ ಎಂದು ಅಭಿಪ್ರಾಯಪಟ್ಟರು.
   ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಸುವರ್ಣ ಉಪಸ್ಥಿತರಿದ್ದರು.ಶಿಕ್ಷಕಿ ಶಶಿಕಲಾ ಕುಂಬಳೆ ಸ್ವಾಗತಿಸಿ, ಮಾಲತಿ ಟೀಚರ್ ವಂದಿಸಿದರು. ಪತ್ರಕರ್ತ ವೀಜೀ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶಾಲಾ ಮಕ್ಕಳಿಂದ ಮತ್ತು ಜಯಶ್ರೀ ಸುವರ್ಣ ರಿಂದ ಕನ್ನಡ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಿತು.
   ವಿಶೇಷತೆಗಳು::
   * ಶಾಲಾ ಕನ್ನಡ ಶಿಕ್ಷಕಿಯೊಬ್ಬರು ಸಮಾರಂಭದ ಬಳಿಕ ಅಭಿಪ್ರಾಯ ತಿಳಿಸುತ್ತ ಉಪ್ಪಳ ಶಾಲೆಯಲ್ಲಿ ಕರ್ತವ್ಯ ಆರಂಭಿಸಿ ತನ್ನ ಎಂಟು ವರ್ಷಗಳ ಇತಿಹಾಸದಲ್ಲಿ ಇದೀಗ ನಡೆದಿರುವ ಕನ್ನಡ ಚಿಂತನೆ ಸೇರಿ ಕನ್ನಡದ ಕಾರ್ಯಕ್ರಮ ಒಟ್ಟು ನಡೆದಿರುವುದು ಎರಡು ಎಂದು ನೆನಪಿಸಿದರು. ಜಿಲ್ಲೆಯ ಉತ್ತರದ ತುತ್ತ ತುದಿಯಲ್ಲಿರುವ ಮಂಗಲ್ಪಾಡಿ ಪಂಚಾಯತಿಯ ಅಚ್ಚ ಕನ್ನಡ ಪ್ರದೇಶವಾದ ಉಪ್ಪಳದ ಪ್ರಧಾನ ಶಾಲೆಯಾಗಿರುವ ಉಪ್ಪಳ ಸರಕಾರಿ ಶಾಲೆಯಲ್ಲಿ ಇಂತಹ ಪರಿಸ್ಥಿತಿ ಇರುವುದು ಆಶ್ಚರ್ಯಕ್ಕೆ ಕಾರಣವಾಯಿತು.
  *  ಕಾರ್ಯಕ್ರಮದಲ್ಲಿ ಹಾಡಿದ ಶಾಲಾ ವಿದ್ಯಾಥರ್ಿ  ಸಲ್ಮಾನ್ ಫಾಸಿಲ್ ತನ್ನ ಸ್ಪಷ್ಟ ಕನ್ನಡ, ಉಚ್ಚಾರ ಶುದ್ದಿ ಮತ್ತು ಗಾಯನ ಶೈಲಿಯ ಆಪ್ಯಾಯಮಾನತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಈ ಮೆಚ್ಚುಗೆಗಾಗಿ ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ. ಉಮೇಶ ಸಾಲ್ಯಾನ್ ರವರು ನಗದು ಪಾರಿತೋಷಕವನ್ನು ಸ್ಥಳದಲ್ಲೇ ನೀಡಿ ಪ್ರಾತ್ಸಾಹ ನೀಡಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries