ಡೊಕ್ಲಾಮ್ ನಂತರ, ಮತ್ತೆ ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಸೇನೆ ಮುಖಾಮುಖಿ?
ಅರುಣಾಚಲ ಪ್ರದೇಶದ ಬಿಶಿಂಗ್ ಸಮೀಪ ಎರಡೂ ದೇಶಗಳ ಸೇನೆ ನಿಲುಗಡೆಯಾಗಿರುವ ಮಾಹಿತಿ
ಗುವಾಹಟಿ/ನವದೆಹಲಿ: ಡೊಕ್ಲಾಮ್ ವಿವಾದದ ನಂತರ ಭಾರತ ಮತ್ತು ಚೀನಾ ದೇಶದ ಭದ್ರತಾಪಡೆ ಕಳೆದೊಂದು ವಾರದಿಂದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಿಶಿಂಗ್ ಸಮೀಪ ಮುಖಾಮುಖಿ ಯುದ್ಧಕ್ಕೆ ಸಜ್ಜಾಗಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಬುಲ್ಡೊಝರ್ ಸಹಾಯದಿಂದ ಚೀನಾದ ರಸ್ತೆ ನಿಮರ್ಾಣ ತಂಡ ಭಾರತದೊಳಗೆ ಪ್ರವೇಶಿಸಿದೆ ಎಂದು ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಗಡಿಯಲ್ಲಿ ನಿಯೋಜನೆಗೊಂಡು ಸಂಘರ್ಷಕ್ಕೆ ಸಜ್ಜಾಗಿವೆ.
ಟ್ಯೂಟಿಂಗ್ ನಿಂದ ಮುಂದೆ ಸ್ಥಳವೊಂದರಲ್ಲಿ ನನ್ನ ಸ್ನೇಹಿತರು ವಾಹನ ಚಲಾಯಿಸುತ್ತಿದ್ದರು. ಅಲ್ಲಿ ಅವರನ್ನು ಸೇನಾಪಡೆ ತಡೆದು, ಚೀನಾ ಮತ್ತು ಭಾರತದ ಸೇನಾಪಡೆ ಅಲ್ಲಿ ನಿಲುಗಡೆಯಾಗಿದ್ದು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲಿನ ಸ್ಥಳೀಯರು ಕೂಡ ನನ್ನ ಸ್ನೇಹಿತನಿಗೆ ಈ ವಿಷಯ ದೃಢಪಡಿಸಿದ್ದಾರೆ ಎಂದು ಅರುಣಾಚಲ ಮೂಲದ ವಕೀಲ ಹಾಗೂ ಕಾರ್ಯಕರ್ತ ಹೇಳಿದ್ದಾರೆ.
ಕನಿಷ್ಠ ಮೂರು ಸ್ವತಂತ್ರ ಮೂಲಗಳು ಈ ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ದೃಢಪಡಿಸಿದ್ದು ಸುಮಾರು 24 ಮಂದಿಯನ್ನು ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಮುನ್ನ ಸೈನಿಕರು ನಿಲುಗಡೆಯಾಗಿದ್ದು ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.