ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ : ಕೃಷಿ ಸಚಿವ ರಾಧಾಮೋಹನ್ ಸಿಂಗ್
ನವದೆಹಲಿ: `ದೇಶದಲ್ಲಿನ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಅವರಿಗೆ ಸೂಕ್ತ ಪ್ರತಿಫಲವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ' ಎಂದು ಕೇಂದ್ರ ಕೃಷಿಸಚಿವ ರಾಧಾಮೋಹನ್ ಸಿಂಗ್ ಹೇಳಿದರು.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, `ದೆಹಲಿಯಿಂದ ಕೊಲ್ಕತ್ತಾದವರೆಗಿನ ಹಲವಾರು ಪ್ರದೇಶಗಳನ್ನು ನಾನು ಸುತ್ತಾಡಿದ್ದೇನೆ. ಈ ಪ್ರದೇಶದ ರೈತರು ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಅದನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ರಾಜ್ಯಗಳ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ' ಎಂದರು.
`ಗೋಧಿ ಮತ್ತು ಭತ್ತವನ್ನು ಹೊರತುಪಡಿಸಿ, ಈಗಾಗಲೇ ಉಳಿದ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದೇವೆ. ಬೆಂಬಲ ಬೆಲೆಗಿಂತಲು ಬೆಲೆಗಳು ಕೆಳಗಿಳಿದಾಗ ಸಕರ್ಾರವೇ ಧಾನ್ಯಗಳನ್ನು ಖರೀದಿಸಲಿದೆ. ಧಾನ್ಯಗಳ ಖರೀದಿಗೆ ರಾಜ್ಯಗಳಿಂದ ಪ್ರಸ್ತಾವನೆ ಬಂದರೆ, ಕೇಂದ್ರವೆ ಖರೀದಿಗೆ ಅನುದಾನ ನೀಡಲಿದೆ. ಹೀಗೆ ಖರೀದಿಸಿ 8 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚಿನ ದ್ವಿದಳ ಧಾನ್ಯ ಹಾಗೂ ಹತ್ತಿಯನ್ನು ಸಂಗ್ರಹಿಸಲಾಗಿದೆ' ಎಂದರು.
`ಯುರೋಪಿನ ರಾಷ್ಟ್ರಗಳು ನಮ್ಮ ದೇಶ ಮಾವಿನ ಆಮದಿಗೆ ತಡೆಹಿಡಿದಿದ್ದವು. ಸಕರ್ಾರ ತೆಗೆದುಕೊಂಡ ಕ್ರಮಗಳ ಬಳಿಕ ಮಾವಿನ ರಫ್ತು ಮತ್ತೆ ಆರಂಭವಾಗಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.