ಭತ್ತ ಕೃಷಿ ಮೂರು ಲಕ್ಷ ಹೆಕ್ಟೇರ್ಗೆ ವಿಸ್ತರಿಸುವ ಯೋಜನೆ
ಕುಂಬಳೆ: ಹದಿಮೂರನೇ ಪಂಚವಾಷರ್ಿಕ ಯೋಜನೆಯಲ್ಲಿ ಒಳಪಡಿಸಿ ಕೇರಳದಲ್ಲಿ ಭತ್ತ ಉತ್ಪಾದನೆಯನ್ನು ಹೆಚ್ಚಿಸಲು ರಾಜ್ಯ ಸರಕಾರವು ವಿಶೇಷ ಆದ್ಯತೆ ನೀಡಿದೆ. ಅದರಂತೆ ಕಾಸರಗೋಡು ಜಿಲ್ಲೆಯಲ್ಲೂ ಭತ್ತ ಕೃಷಿಗೆ ಸಂಬಂಧಿಸಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
2015-16ನೇ ವರ್ಷದಲ್ಲಿ 1.96 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿದ್ದ ಭತ್ತ ಕೃಷಿಯನ್ನು ಮೂರು ಲಕ್ಷ ಹೆಕ್ಟೇರ್ಗೇರಿಸಿ ಆ ಮೂಲಕ ಭತ್ತದ ಉತ್ಪಾದನೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕನುಗುಣವಾಗಿ ಕಾಸರಗೋಡು ಜಿಲ್ಲೆಯಲ್ಲಿ ಪಾಳುಬಿದ್ದಿರುವ ಬಯಲು ಗದ್ದೆಗಳ ಬಗ್ಗೆ ಸವರ್ೇ ನಡೆಸಲಾಗುತ್ತಿದ್ದು, ಅಂತಹ ಪ್ರದೇಶಗಳಲ್ಲೂ ಕೃಷಿ ಮಾಡಲು ಯೋಜಿಸಲಾಗಿದೆ.
ಈ ಮಧ್ಯೆ ಭತ್ತದೊಂದಿಗೆ ಮೀನು ಕೃಷಿಗೂ ಸರಕಾರ ಮಹತ್ವ ಕಲ್ಪಿಸಿದೆ. ಮೀನು ಸಾಕಣೆಗಾಗಿ ಸಹಾಯಧನ ಬಿಡುಗಡೆ ಮಾಡಲು ಚಿಂತನೆಗಳು ನಡೆಯುತ್ತಿವೆ. ಏಳು ಪ್ರತ್ಯೇಕ ಉತ್ಪಾದನಾ ವಲಯಗಳಲ್ಲಿ ಭತ್ತದ ಕೃಷಿ ನಡೆಸಲಾಗುವುದು. ಭತ್ತದ ಕೃಷಿಯನ್ನು ಬಂಜರು ಭೂಮಿಗಳಿಗೂ ವಿಸ್ತರಿಸಲಾಗುವುದು.
ಖಾಸಗಿ ಹಿತ್ತಿಲುಗಳಲ್ಲಿ ಪಾಳು ಬಿದ್ದಿರುವ ಸ್ಥಳಗಳಲ್ಲೂ ಭತ್ತ ಕೃಷಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದರ ಹೊರತಾಗಿ ರಾಗಿ ಮತ್ತು ಜೋಳ ಕೃಷಿಗೂ ಹೆಚ್ಚಿನ ಪ್ರೋತ್ಸಾಹ ನೀಡಿ ಆಹಾರ ಉತ್ಪಾದನೆಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಕೇರಳದಲ್ಲಿ ವಯನಾಡು ಹಾಗೂ ಪಾಲ್ಘಾಟ್ ಜಿಲ್ಲೆಗಳಲ್ಲಿ ಮಾತ್ರವೇ ಹೆಚ್ಚಾಗಿ ರಾಗಿ ಮತ್ತು ಜೋಳ ಬೆಳೆಯಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಎರಡು ಜಿಲ್ಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಮಾತ್ರವಲ್ಲದೆ ಗೆಡ್ಡೆಗೆಣಸುಗಳು, ತರಕಾರಿ, ಪಚ್ಚೆಹೆಸರು ಮುಂತಾದ ದ್ವಿದಳ ಧಾನ್ಯಗಳು, ಔಷಧ ಸಸ್ಯಗಳ ಕೃಷಿ, ಜೇನು ಕೃಷಿ, ಹಣ್ಣುಹಂಪಲು ಕೃಷಿಗಳಿಗೂ ಪಂಚವಾಷರ್ಿಕ ಯೋಜನೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲು ತೀಮರ್ಾನಿಸಲಾಗಿದೆ.