ಜನಮೈತ್ರಿ ಪೊಲೀಸ್ ಯೋಜನೆ ವಿಸ್ತರಣೆ
ಕಾಸರಗೋಡು: ಜನಮೈತ್ರಿ ಸುರಕ್ಷೆ ಪೊಲೀಸ್ ಯೋಜನೆಯನ್ನು ಹೊಸದಾಗಿ ಇನ್ನೂ 100 ಪೊಲೀಸ್ ಠಾಣೆಗಳಿಗೆ ವಿಸ್ತರಿಸಲು ಗೃಹ ಇಲಾಖೆ ನಿರ್ಧರಿಸಿದೆ. ಇದರ ಹೊರತಾಗಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯನ್ನು ಹೊಸದಾಗಿ ನೂರು ಶಾಲೆಗಳಿಗೆ ವಿಸ್ತರಿಸುವ ತೀಮರ್ಾನವನ್ನು ಕೈಗೊಳ್ಳಲಾಗಿದೆ. ರಾಜ್ಯದ 574 ಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಯೋಜನೆಯು ಈಗಾಗಲೇ ಜಾರಿಯಲ್ಲಿದೆ. ಇದಕ್ಕಾಗಿ ಕೇರಳ ಬಜೆಟ್ನಲ್ಲಿ 15 ಕೋಟಿ ರೂ. ಮೀಸಲಿರಿಸಿದೆ. ಇದಲ್ಲದೆ ಪೊಲೀಸ್ ಪಡೆಯನ್ನು ಆಧುನೀಕರಿಸಲು 160 ಕೋಟಿ ರೂ. ಗಳನ್ನು ತೆಗೆದಿರಿಸಲಾಗಿದೆ.