HEALTH TIPS

No title

             ಅಖಿಲ ಭಾರತ ಲೋಕಕಲಾ ಮಹೋತ್ಸವ: ಭಾಗವತ ದಿನೇಶ್ ಅಮ್ಮಣ್ಣಾಯ
                ಸಹಿತ 13ಮಂದಿಗೆ 'ಲೋಕ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ'
    ಬದಿಯಡ್ಕ: ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ನೇತೃತ್ವದಲ್ಲಿ ಕನರ್ಾಟಕ ಸಾಹಸ ಕಲಾ ಅಕಾಡೆಮಿಯ ಸಹಕಾರದೊಂದಿಗೆ ಫೆ. 17ರಂದು ಎಡನೀರಿನಲ್ಲಿ ಮತ್ತು 18ರಂದು ಪಯ್ಯನ್ನೂರಿನ ಕುಞ್ಞಿಮಂಗಲಂ ನಲ್ಲಿ ನಡೆಯಲಿರುವ ದ್ವಿದಿನ ಅಖಿಲ ಭಾರತ ಲೋಕಕಲಾ ಮಹೋತ್ಸವದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಸಹಿತ ಕೇರಳದ ವೈವಿಧ್ಯ ಕಲಾ ಕ್ಷೇತ್ರದ 13ಮಂದಿ ಪ್ರತಿಭಾವಂತರಿಗೆ ಲೋಕಕಲಾ ಮಹೋತ್ಸವದಂಗವಾಗಿ ನೀಡುವ "ಲೋಕ ಕಲಾ ಶ್ರೀ ರಾಷ್ಟ್ರೀಯ ಪ್ರಶಸ್ತಿ' ಪುರಸ್ಕಾರವಾಗಲಿದೆ. 
   ಉದುಮ ಶಾಸಕ  ಕುಞ್ಞಿರಾಮನ್ (ಕೋಲಾಟ ನರ್ತನ), ಎಂ. ದಿನೇಶ ಅಮ್ಮಣ್ಣಾಯ (ಯಕ್ಷಗಾನ ಭಾಗವತಿಕೆ), ಗುರುಸದನಂ ರಾಮನ್ ಕುಟ್ಟಿ ನಾಯರ್ ತ್ರಿಶ್ಶೂರ್ (ಕಥಕಳಿ), ಶಂಕರ ಸ್ವಾಮೀಕೃಪ( ಮಾಂಕಾಳಿ ನಲಿಕೆ), ದಯಾನಂದ ಜಿ ಕತ್ತಲಸಾರ್ (ದೈವರಾಧನಾ ನರ್ತನ),  ಉಸ್ತಾದ್ ಹಸ್ಸನ್ ಭಾಯ್, ಕಾಸರಗೋಡು ( ಶೆಹನಾಯಿ), ಚಂದುಕುಟ್ಟಿ ನಂಬಿಯಾರ್( ಕೋಲ್ಕಳಿ) ರಾಜ ಬೆಳ್ಚಪ್ಪಾಡ ಮಾಡ, ಮಂಜೇಶ್ವರ( ದೈವರಾಧನಾ ನುಡಿಗಟ್ಟು), ದಿವಾಣ ಶಿವಶಂಕರ ಭಟ್ (ಯಕ್ಷಗಾನ ನಾಟ್ಯ), ಕೃಷ್ಣನ್ ಮಾಸ್ತರ್ (ತೆಯ್ಯಂ), ಆಶಾ ಗೋವಿಂದ್ ಕಣ್ಣೂರ್(ತಿರುವಾದಿರ), ಚೆರುದಾಯಂ ಚಂದ್ರನ್ ಕಣ್ಣೂರು (ಚೆಂಡೆ), ಇ.ಎ.ಕೃಷ್ಣನ್ ಕಣ್ಣೂರ್ (ಕೋಲಾಟ) ಎಂಬಿವರು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ದ್ವಿದಿನ ಲೋಕಕಲೋತ್ಸವದಲ್ಲಿ ಇವರಿಗೆ ಗಣ್ಯರಿಂದ ಪ್ರಶಸ್ತಿ ಪ್ರಧಾನವಾಗಲಿದೆ.
    ದಕ್ಷಿಣ ಭಾರತದ 6ರಾಜ್ಯಗಳಲ್ಲಿ ಲೋಕಕಲಾ ಮಹೋತ್ಸವಗಳು ನಡೆಯಲಿದ್ದು, ಪ್ರಥಮ ಕಾರ್ಯಕ್ರಮ ಫೆ. 17ರಂದು ಸಂಜೆ 5ಕ್ಕೆ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಶ್ರೀ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯವ ಸಮಾರಂಭವನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿದರ್ೇಶಕ ಟಿ.ಎಸ್.ನಾಗಾಭರಣ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನ್ ಅಧ್ಯಕ್ಷತೆ ವಹಿಸುವರು. ಕನರ್ಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಠಾಕಪ್ಪ, ಉದುಮ ಶಾಸಕ ಕುಞ್ಞಿರಾಮನ್, ಜಿ.ಪಂ ಸದಸ್ಯ ನ್ಯಾಯವಾದಿ ಶ್ರೀಕಾಂತ್, ಜಿಲ್ಲಾಧಿಕಾರಿ ಜೀವನ್ ಬಾಬು, ಅಖಿಲಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ ಅಧ್ಯಕ್ಷ ನಿರ್ಮಲ್ ವೈದ್ಯ ದೆಹಲಿ,  ಕೇಂದ್ರ ಸಂಸ್ಕೃತಿ ಇಲಾಖೆಯ ತಜ್ಞರ ಮಂಡಳಿಯ ಸದಸ್ಯ ಅಶ್ವಥ್ ಹರಿತ್ಸ್, ಉತ್ಸವ ಸಮಿತಿ ಗೌರವಾಧ್ಯಕ್ಷ ಜಯರಾಮ ಮಂಜತ್ತಾಯ ಸಹಿತ ಪ್ರಮುಖರು ಉಪಸ್ಥಿತರಿರುವರು.
ದೇಶದ ಪ್ರಾದೇಶಿಕ ಜಾನಪದ ಮತ್ತು ಬುಡಕಟ್ಟು ಕಲೆಗಳು, ಜನಪದ, ಆರಾಧನಾ ಸಂಸ್ಕೃತಿಗಳು ಆಧುನೀಕತೆಯ ನಡುವೆ ತಮ್ಮ ಅಸ್ತಿತ್ವ ಕಾಪಾಡಾಲು ಹೆಣಗಾಡುತ್ತಿವೆ. ಪ್ರತಿ ರಾಜ್ಯಗಳಲ್ಲಿ ಕಲೆ-ಕಲಾವಿದರನ್ನು ಉತ್ತೇಜಿಸುವ ಮತ್ತು ಜನಪದ-ಬುಡಕಟ್ಟು ಸಂಸ್ಕೃತಿಗಳನ್ನು ಪೋಷಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಖಿಲ ಭಾರತ ಜಾನಪದ, ಬುಡಕಟ್ಟು ಕಲಾ ಪರಿಷತ್ ಕಾರ್ಯೋನ್ಮುಖವಾಗಿದ್ದು, ಪ್ರಸ್ತುತ ಸಮಾರಂಭದೊಂದಿಗೆ ಪರಿಷತ್ತಿನ ಚಟುವಟಿಕೆ ಕಾಸರಗೋಡು ಸಹಿತ ಕೇರಳಕ್ಕೂ ವಿಸ್ತರಣೆಯಾಗಿದೆ.
             



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries