HEALTH TIPS

No title

              ಸ್ನೇಹಾಲಯದಿಂದ ಘರ್ ವಾಪಸಿ!- ಸೇವೆಗೊಂದು ಕನ್ನಡಿ: 13 ಮಂದಿ ಮರಳಿ ಸ್ವಕುಟುಂಬಕ್ಕೆ
    ಮಂಜೇಶ್ವರ: ಇಲ್ಲಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿ ಗುಣಮುಖರಾದ ನಿವಾಸಿಗಳನ್ನು ತಾಯ್ನಾಡಿಗೆ ಮರಳಿಸುವ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
   ಮಾನಸಿಕ ಸ್ಥಿಮಿತ ಕಳೆದುಕೊಂಡು ಗೊತ್ತು ಗುರಿಯಿಲ್ಲದೆ ಅಲೆದಾಡಿ ಬೀದಿ ಬದಿಯಲ್ಲಿ ಕಮರಿ ಹೋಗುತ್ತಿದ್ದ ಮಂದಿಯನ್ನು ಕರೆ ತಂದು ಪುನಶ್ಚೇತನ ಕೇಂದ್ರದಲ್ಲಿ ಆಶ್ರಯ, ಆರೈಕೆಯಿತ್ತು ಗುಣಮುಖರಾದ ಮಂದಿಯನ್ನು ಸುರಕ್ಷಿತವಾಗಿ ಅವರ ಮನೆಗೆ ಸೇರಿಸುವ ಸತ್ಕಾರ್ಯವನ್ನು ಮುಂದುವರಿಸುತ್ತಿರುವ ಸ್ನೇಹಾಲಯ ಅಭಯ ಕೇಂದ್ರದಲ್ಲಿ ಸದ್ಯ, ಗುಣಮುಖರಾದ ಒಟ್ಟು 13 ಮಂದಿಯನ್ನು ಅವರ ಹುಟ್ಟೂರಿಗೆ ಕಳುಹಿಸಲಾಯಿತು.
     ಇದರ ಅಂಗವಾಗಿ ಸ್ನೇಹಾಲಯದಲ್ಲಿ ಏರ್ಪಡಿಸಲಾದ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಕನರ್ಾಟಕ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರೋಯಿ ಕಾಸ್ಟಲಿನೋ, ಪಂ. ಸದಸ್ಯ ಮೂಸಾ, ದೈಗೋಳಿ ಸತ್ಯ ಸಾಯಿ ಆಶ್ರಮದ ಸ್ಥಾಪಕ ಡಾ. ಉದಯ ಕುಮಾರ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು. ಸ್ನೇಹಾಲಯ ಆಡಳಿತ ನಿದರ್ೇಶಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿ, ಕಾರ್ಯಕ್ರಮ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬ್ಬಂದಿ ರಾಜೇಶ್ ವಂದಿಸಿದರು. ಜೆಸಿಂತಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
    ಗುಣಮುಖರಾದ ಮಹಾರಾಷ್ಟ್ರದ ರಾಂ, ರೋಶನ್, ಶಿವಾಜಿ, ಒಡಿಶ್ಶಾದ ಸಂತೋಷ್, ದೋಯಾ, ಉತ್ತರ ಪ್ರದೇಶದ ರಾಜು, ನವೀನ್, ಪಿಂಟು ರಾವಂತ್, ಹರ್ಯಾಣಾದ ಹಾಪ್ಪಿ ಸಿಂಗ್, ಪಶ್ಚಿಮ ಬಂಗಾಲದ ಗೋವಿಂದ, ಆಂಧ್ರ ಪ್ರದೇಶದ ರಾಮಕೃಷ್ಣ, ಬಿಹಾರದ ಜಗದೀಶ, ರಝಾಕ್ ಎಂಬವರನ್ನು ಮಹಾರಾಷ್ಟ್ರದ ರಾಯ್ಘಡ್ನಲ್ಲಿರುವ ಪುನಶ್ಚೇತನ ಕೇಂದ್ರವಾದ ಶ್ರಧ್ಧಾ ರಿಹಾಬಿಲಿಟೇಶನ್ ಫೌಂಡೇಶನ್ಗೆ ತಲುಪಿಸಲಾಗಿ ಸದ್ರಿ ಕೇಂದ್ರದ ಮೂಲಕ ಅವರ ಹುಟ್ಟೂರಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಯಿತು. ರಾಯ್ಘಡ್ನಲ್ಲಿ 1988 ರಿಂದ ಕಾಯರ್ಾಚರಿಸುವ ಶ್ರದ್ಧಾ ಕೇಂದ್ರವು ರಸ್ತೆ ಬದಿಯಲ್ಲಿ ಬಿದ್ದುಕೊಂಡಿರುವ ಮಾನಸಿಕ ಅಸ್ವಸ್ಥರ ಆಶ್ರಯ ಕೇಂದ್ರವಾಗಿದ್ದು, ಈ ಪುಟ್ಟ ಅವಧಿಯಲ್ಲೇ ಈ ರೀತಿಯ 6500 ರಷ್ಟು ಮಂದಿಯನ್ನು ಸೂಕ್ತ ಆರೈಕೆ, ಶುಶ್ರೂಷೆ ಮೂಲಕ ಗುಣಪಡಿಸಿ ಮನೆಗೆ ಮರಳಿಸಿರುವುದಾಗಿ ಸ್ನೇಹಾಲಯ ಆಡಳಿತ ನಿದರ್ೇಶಕ ಜೋಸೆಫ್ ಕ್ರಾಸ್ತಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries