HEALTH TIPS

No title

                ಇಂದು ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಾಷರ್ಿಕೋತ್ಸವ
    ಪೆರ್ಲ: ತೆಂಕುತಿಟ್ಟು ಯಕ್ಷಗಾನ ಕಲಿಕೆಯ ಏಕೈಕ ಕೇಂದ್ರವೆಂಬ ಹೆಗ್ಗಳಿಕೆಯ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 13 ನೇ ವಾಷರ್ಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಇಂದು  ನಡೆಯಲಿದೆ. 
  ಬೆಳಗ್ಗೆ 9.30 ರಿಂದ ಶ್ರೀ ಗಣಪತಿ ಹೋಮ, 10.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, 11 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆಯಲಿದೆ.
  ಅಪರಾಹ್ನ 3.30 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಪೂರ್ವರಂಗ, ಸಂಜೆ 4.30 ರಿಂದ ರಂಗಪ್ರವೇಶದ ವಿದ್ಯಾಥರ್ಿಗಳಿಂದ `ಸೀತಾ ಕಲ್ಯಾಣ' ಯಕ್ಷಗಾನ ಬಯಲಾಟ, 5.45 ಕ್ಕೆ `ಕಾಲನೇಮಿ ಕಾಳಗ', ರಾತ್ರಿ 7 ರಿಂದ ಸಭಾ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಅಧ್ಯಕ್ಷತೆ ವಹಿಸುವರು. ಖ್ಯಾತ ಯಕ್ಷಗಾನ ಕಲಾವಿದ ಎಸ್.ರಾಮ ಭಟ್ ಕೋಟೆ ಉದ್ಘಾಟಿಸುವರು. ಮುಖ್ಯ ಅಭ್ಯಾಗತರಾಗಿ ಪ್ರೊ.ಶ್ರೀಕೃಷ್ಣ ಕಾರಂತ, ಶಿವಕುಮಾರ್, ರಾಜಾರಾಮ ಪೆರ್ಲ, ಸಿ.ಎಚ್.ಸುಬ್ರಹ್ಮಣ್ಯ ಭಟ್ ಚಣಿಲ, ದಿನೇಶ ಮಾಮೇಶ್ವರ, ಡಾ.ಎಸ್.ಎನ್.ಭಟ್, ಬೈಚೋಸ್ ಚಲಂಗ ಭಾಗವಹಿಸುವರು.
   ಪ್ರಶಸ್ತಿ ಪ್ರಧಾನ: ಪಡ್ರೆಚಂದು ಸ್ಮಾರಕ ಪ್ರಶಸ್ತಿ:
   ಪ್ರಸ್ತುತ ವರ್ಷ ಪಡ್ರೆಚಂದು ಸ್ಮಾರಕ ಪ್ರಶಸ್ತಿಯನ್ನು ತೆಂಕುತಿಟ್ಟಿನ ಪ್ರಸಿದ್ದ ಹಿಮ್ಮೇಳ ಗುರು ಹರಿನಾರಾಯಣ ಬೈಪಡಿತ್ತಾಯರಿಗೆ ನೀಡಲಾಗುವುದು. ತೆಂಕುತಿಟ್ಟಿನ ಹಿಮ್ಮೇಳ ಪರಿಕರಗಳ ಅತ್ಯಪೂರ್ವ ಜ್ಞಾನ ದೀವಿಗೆಯವರಾದ ಬೈಪಡಿತ್ತಾಯರು ಹಿಮ್ಮೇಳ ಸಾಮ್ರಾಜ್ಯದ ಆಚಾರ್ಯರೆಂದರೂ ತಪ್ಪಲ್ಲ. ಚೆಂಡೆ ಮಾಂತ್ರಿಕ ದಿ.ಕುದ್ರೆಕ್ಕೋಡ್ಲು ರಾಮ ಭಟ್ ರಿಂದ ಪ್ರಭಾವಿತರಾದ ಬೈಪಡಿತ್ತಾಯರು ದಿ.ಕಡಬ ಪುರುಷಯ್ಯ ಆಚಾರ್ಯರಿಂದ ಪ್ರಾಥಮಿಕ ಮಪಾಠಗಳನ್ನು ಕಲಿತು ಬಳಿಕ ದಿ. ಕಾಂಚನ ಕೆ.ವಿ.ಮೂತರ್ಿಯವರಿಂದ ಮೃದಂಗ ಅಭ್ಯಸಿಸಿದರು. ಕುಂಡಾಪು ಮೇಳದಲ್ಲಿ ಹಲವು ವರ್ಷ ಹಿಮ್ಮೇಳ ಕಲಾವಿದರಾಗಿ ದುಡಿದ ಬೈಪಡಿತ್ತಾಯರು ಹಿರಿಯರಿಂದ ನೋಡಿ ಕಲಿತದ್ದೇ ಅಧಿಕ. ಮೃದಂಗ ಸಾಹಿತ್ಯದಲ್ಲಿ ಅಪ್ರತಿಮ ಜ್ಞಾನ ಭಂಡಾರದವರಾದ ಬೈಪಡಿತ್ತಾಯರಿಗೆ ಸಹಜವಾಗಿ ಈ ಪ್ರಶಸ್ತಿ ಅರಸಿಬಂದಿದೆ.
   ಅಡ್ಕಸ್ಥಳ ಪ್ರಶಸ್ತಿ:
   ಪ್ರಸ್ತುತ ಸಾಲಿನ ಅಡ್ಕಸ್ಥಳ ಪ್ರಶಸ್ತಿ ಹರಿನಾರಾಯಣ ಬೈಪಡಿತ್ತಾಯರ ಪತ್ನಿ, ತೆಂಕುತಿಟ್ಟಿನ ಏಕೈಕ ವೃತ್ತಿಪರ ಮಹಿಳಾ ಭಾಗವತರೆಂಬ ಖ್ಯಾತಿಯ ಲೀಲಾವತಿ ಬೈಪಡಿತ್ತಾಯರಿಗೆ ಪ್ರಧಾನಗೈಯ್ಯಲಾಗುವುದು. ಮೂಲತಃ ಕಾಸರಗೊಡಿನವರಾದ ಲೀಲಾವತಿ ಬೈಪಡಿತ್ತಾಯರು ಎಳವೆಯಲ್ಲೇ ಯಕ್ಷಗಾನದ ಸ್ವರ ಝೇಂಕಾರದ ಮದ್ಯೆ ಬೆಳೆದವರು. ವಿವಾಹದ ಬಳಿಕ ಪತಿ ಹರಿನಾರಾಯಣ ಬೈಪಡಿತ್ತಾಯರಿಂದ ಭಾಗವತಿ ಕಲಿತ ಇವರು ಬಳಿಕ ತನ್ನನ್ನು ತಾನು ಯಕ್ಷಗಾನಕ್ಕೆ ಅಪರ್ಿಸಿಕೊಂಡ ಸಾಧನೆ ಅಪ್ರತಿಮ. ಡೇರೆ ಮೇಳಗಳಿಂದ ತೊಡಗಿ ಹವ್ಯಾಸಿ ಕಲಾವಿದರ ಬಯಲಾಟದ ವರೆಗೆ ನೂರಾರು ಪ್ರದರ್ಶನಗಳಲ್ಲಿ ಶ್ರೀಮತಿ ಬೈಪಡಿತ್ತಾಯರು ನೀಡಿರುವ ಕಲಾಸೇವೆ ವಿಶಿಷ್ಟವಾದುದು.
   ವಿಶೇಷ ಪ್ರಶಸ್ತಿ:
   ವಾಷರ್ಿಕೋತ್ಸವದ ಸಂದರ್ಭ ಪ್ರಧಾನಗೈಯ್ಯುವ ಈ ಬಾರಿಯ ವಿಶೇಷ ಪ್ರಶಸ್ತಿಗೆ ಭಾಜನರಾದವರು ಯಕ್ಷಗಾನದ ದ್ರೋಣಾಚಾರ್ಯರೆಂಬ ಹೆಗ್ಗಳಿಕೆಗೊಳಗಾಗಿರುವ, ಸರಳ ಸಜ್ಜನಿಕೆಯ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು. ತೆಂಕಬೈಲು ಶೈಲಿಯನ್ನೇ ಹುಟ್ಟುಹಾಕಿದ ಶಾಸ್ತ್ರಿಗಳ, ಶುದ್ದ ಸಾವೇರಿ, ಮಧ್ಯಮಾವತಿ, ಮೋಹನ, ಆರಭಿ, ಹಿಂದೋಳ, ಅಗರಿ ಶೈಲಿಯ ಅಭೇರಿ  ರಾಗಗಳನ್ನು ಮರೆಯುವ ಕಲಾಭಿಮಾನಿಗಳೇ ಇಲ್ಲ. ವಿವಿಧ ಮೇಳಗಳಲ್ಲಿ ಒಂದಷ್ಟು ವರ್ಷ ದುಡಿದಿದ್ದರೂ, ಬಳಿಕ ಹವ್ಯಾಸಿ ತಮಡಗಳನ್ನು ಮುನ್ನಡೆಸುವಲ್ಲಿ ಹೆಚ್ಚು ಕಾಣಿಸಿಕೊಂಡವರು ಶಾಸ್ತ್ರಿಗಳು. ಯಕ್ಷಗಾನ ಗುರುವಾಗಿ ಸೇವೆಸಲ್ಲಿಸುತ್ತಿರುವ ಶಾಸ್ತ್ರಿಗಳು ಕರಾವಳಿಯಾದ್ಯಂತ ಮಂಗಳೂರು, ಸುಳ್ಯ, ಧರ್ಮಸ್ಥಳ, ಉಕ್ಕುಡ, ಮಾನ್ಯ ಮೊದಲಾದೆಡೆ ತರಗತಿ ನಡೆಸಿ ಕಲಾವಿದರ ಸೃಷ್ಟಿಗೆ ಕಾರಣಕರ್ತರಾದವರು. ಪ್ರಸ್ತುತ ಪಡ್ರೆಚಂದು ಕೇಂದ್ರದಲ್ಲಿ ಯಕ್ಷಗಾನದ ಗುರುವಾಗಿ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
    ಸಭಾ ಕಾರ್ಯಕ್ರ, ಪ್ರಶಸ್ತಿ ಪ್ರಧಾನಗಳ ಬಳಿಕ  ರಾತ್ರಿ 8.30 ರಿಂದ ಕೇರಳ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಬದಿಯಡ್ಕ ನವಜೀವನ ಶಾಲಾ ವಿದ್ಯಾಥರ್ಿಗಳಿಂದ ಬಭ್ರುವಾಹನ ಕಾಳಗ ಯಕ್ಷಗಾನ ಬಯಲಾಟ ಜರಗಲಿದೆ. ರಾತ್ರಿ 9.30 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲಾಮೃತ ಚಕ್ರವ್ಯೂಹ' ಯಕ್ಷಗಾನ ಬಯಲಾಟ ಜರಗುವುದು.
 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries