ಇತರರ ಹಿತಕಾಯುವ ಮನೋಭಾವ ಎತ್ತರಕ್ಕೊಯ್ಯುತ್ತದೆ-ರವೀಶ ತಂತ್ರಿ ಕುಂಟಾರು
ತಂತ್ರಿ ಅನಂತಪದ್ಮನಾಭ ಉಪಾಧ್ಯಾಯರ 14ನೇ ಸಂಸ್ಮರಣೆ ಮತ್ತು ಸನ್ಮಾನ
ಪೋಟೋ: ಉದಯ ಕಂಬಾರ್.
ಬದಿಯಡ್ಕ: ಧರ್ಮ, ಸಂಸ್ಕಾರ, ಪರಂಪರೆಯ ಬಗೆಗಿನ ಅರಿವು ಮೂಡಿಸುವಲ್ಲಿ ಹೆಮ್ಮೆಯ ಕಲೆ ಯಕ್ಷಗಾನ ತನ್ನದೇ ಪ್ರಭಾವ ಬೀರಿದೆ. ಸವಾಂಗೀಣ ಸುಂದರ ಕಲಾ ಪ್ರಕಾರವಾದ ಯಕ್ಷಗಾನಕ್ಕೆ ಗಡಿನಾಡು ಕಾಸರಗೋಡಿನ ಕೊಡುಗೆ ಪ್ರಮುಖವಾದುದಾಗಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರ ಕೊಲ್ಲಂಗಾನದ ಅಪರಿಮಿತ ಪ್ರೋತ್ಸಾಹ ಅದಕ್ಕೆ ಇನ್ನಷ್ಟು ಬಲ ನೀಡುತ್ತಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಸಮೀಪ ಕೊಲ್ಲಂಗಾನದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ತಂತ್ರವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯರ 14ನೇ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂತ್ರ ಹಾಗೂ ಆಗಮ ಕ್ಷೇತ್ರದ ಮೂಲಕ ಸತನಾತನ ನಂಬಿಕೆ, ಸಂಸ್ಕಾರಗಳಿಗೆ ದಿ. ಅನಂತಪದ್ಮನಾಭ ಉಪಾಧ್ಯಾಯರು ನೀಡಿದ ಅಪಾರ ಕೊಡುಗೆ ಅವರ ಅಪರಿಮಿತ ಶ್ರಮದ ಕಾರಣದಿಂದಾಗಿದ್ದು, ಅಂತವರ ಪ್ರೇರಣಾತ್ಮಕ ಚಿಂತನೆ ನಮ್ಮಲ್ಲೂ ಉದ್ದೀಪನಗೊಳ್ಳಬೇಕು. ಇತರರ ಹಿತಕಾಯುವ ಮನೋಭಾವ ಎತ್ತರಕ್ಕೊಯ್ಯುತ್ತದೆ ಎಂದು ಅವರು ತಿಳಿಸಿದರು. ಹಿರಿಯರ ಪರಂಪರೆಯನ್ನು ಮುಂದುವರಿಸುವ ನಮ್ಮ ಸಾಂಪ್ರದಾಯಿಕ ವಿಚಾರಗಳು ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ. ಜೊತೆಗೆ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪರಿಪೋಶಿಸುವ ಶ್ರೀಕ್ಷೇತ್ರ ಕೊಲ್ಲಂಗಾನದ ಅಹನರ್ಿಶಿ ಸೇವೆ ಜಿಲ್ಲೆಯ ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ವಿದ್ಯುತ್ ಪ್ರಸರಣ ಇಲಾಖೆಯ ಹಿರಿಯ ಅಭಿಯಂತರ ಸುರೇಂದ್ರ ಪಿ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಶ್ರೀಕ್ಷೇತ್ರ ಕೊಲ್ಲಂಗಾನ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ವಿಭಾಗದಲ್ಲಿ ಗಮನಾರ್ಹವಾಗಿ ಪ್ರವತರ್ಿಸುತ್ತಿರುವುದು ವರ್ತಮಾನ ಕಾಲದ ಸುದೈವ ಎಂದು ತಿಳಿಸಿದರು.
ಸಮಾರಂಭದಲ್ಲಿ ಉತ್ತರಕನ್ನಡ ಹೊನ್ನಾವರದ ಪಂಚವಾದ್ಯ ವಾದಕರಾದ ಮಂಜುನಾಥ ನಾರಾಯಣ ಭಂಡಾರಿಯವರಿಗೆ ಕೊಲ್ಲಂಗಾನ ಶ್ರೀಕ್ಷೇತ್ರದ ವಿಶೇಷ ಪುರಸ್ಕಾರವನ್ನು ನೀಡಿ ಈ ಸಂದರ್ಭ ಗೌರವಿಸಲಾಯಿತು. ಕೊಲ್ಲಂಗಾನ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ, ಗುರು ರವಿ ಅಲೆವೂರಾಯ ವಕರ್ಾಡಿ ಮಾತನಾಡಿದರು. ವೇಣುಗೋಪಾಲ ತತ್ವಮಸಿ ಉಪಸ್ಥಿತರಿದ್ದರು. ಶಿಕ್ಷಕ, ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರವಿಶಂಕರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಬಳಿಕ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿಗೀತೆಗಳ ಗಾಯನ, ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನದವರಿಂದ ತ್ರಿಪುರ ಮಥನ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.