HEALTH TIPS

No title

            ಕಾವೇರಿ: ಕನರ್ಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು; ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಲು 'ಸುಪ್ರೀಂ' ಆದೇಶ!
           ನದಿಗಳು ರಾಷ್ಟ್ರೀಯ ಸಂಪತ್ತು, ಸಂವಿಧಾನದ ಅಡಿಯಲ್ಲಿ ಚೌಕಾಸಿ ಮಾಡುವ ಹಕ್ಕು ಕನರ್ಾಟಕಕ್ಕೆ ಇದೆ-ಸುಪ್ರೀಂ
     ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀಪರ್ು ಪ್ರಕಟವಾಗಿದ್ದು, ಕನರ್ಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋಟರ್್ ಕನರ್ಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡುವ ಕುರಿತು  ಅನುಮೋದನೆ ನೀಡಿದೆ.
   ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ತೀರ್ಪನ್ನು ನೀಡಿದ್ದು, ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಕೆ ಮಾಡಿದೆ. ಆ ಮೂಲಕ ಕನರ್ಾಟಕಕ್ಕೆ ಈ ಹಿಂದೆ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡಲಾಗಿದೆ. ಅಂತೆಯೇ ನದಿ ನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋಟರ್್ ಹೇಳಿದ್ದು, 1924ರ ಒಪ್ಪಂದ ಕಾನೂನು ಬದ್ದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
   ಇದೇ ವೇಳೆ ಪುದುಚೇರಿ ಮತ್ತು ಕೇರಳಕ್ಕೆ ಮಾಡಿರುವ ನೀರು ಹಂಚಿಕೆಯನ್ನು ಎತ್ತಿ ಹಿಡಿದ ಕೋಟರ್್, ಕನರ್ಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಳು ಸಮಾನ ಹಂಚಿಕೆ ತತ್ವ ಪರಿಪಾಲಿಸಹಬೇಕು ಎಂದು ಸಲಹೆ ನೀಡಿದೆ.  ಅಂತೆಯೇ ನದಿಗಳು ರಾಷ್ಟ್ರೀಯ ಸಂಪತ್ತುಗಳಾಗಿದ್ದು, ಯಾವುದೇ ರಾಜ್ಯ ಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ಉಭಯ ರಾಜ್ಯಗಳಿಗೆ ಕಿವಿಮಾತು ಹೇಳಿದೆ.
    ಜೊತೆಗೆ ತನ್ನ ತೀಪರ್ಿನಲ್ಲಿ ಬ್ರಿಟೀಷ್ ಕಾಲದ ಒಪ್ಪಂದಗಳ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋಟರ್್, 1892, 1924ರ ಎರಡೂ ಒಪ್ಪಂದಗಳು ಸಿಂಧುವಾಗಿದ್ದು, 1924ರ ಒಪ್ಪಂದ ಕಾನೂನು ಬದ್ಧಬದ್ಧವಾಗಿದೆ ಎಂದು ಕೋಟರ್್  ಹೇಳಿದೆ. ಅಂತೆಯೇ ಈ ಒಪ್ಪಂದಗಳು 50 ವರ್ಷಗಳ ಬಳಿಕ ರದ್ದಾಗಲಿದ್ದು, 0ನ್ಯಾಯಾಧಿಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದು ಹೇಳಿದೆ. ಅಂತೆಯೇ 15 ವರ್ಷಗಳ ಬಳಿಕ ನ್ಯಾಯಾಧಿಕರಣದ ತೀರ್ಪನ್ನು  ಮರುಪರಿಶೀಲನೆ ಮಾಡಬಹುದಾಗಿದೆ.
  ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ, ನ್ಯಾಯಮೂತರ್ಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀಪರ್ು ಪ್ರಕಟಿಸಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries