HEALTH TIPS

No title

                              ನಾರಾಯಣೀಯಂ ನಲ್ಲಿ ಸಂಗೀತ ವೈಭವ ಇಂದಿನಿಂದ
   ಬದಿಯಡ್ಕ: ಕಾಸರಗೋಡಿನ ನಾರಾಯಣೀಯಮ್ ಸಂಗೀತ ಸಮುಚ್ಚಯದಲ್ಲಿರುವ ವೀಣಾವಾದಿನೀ ಸಂಗೀತ ಶಾಲೆಯ 19 ನೇ ವರ್ಾಕೋತ್ಸವದ ಅಂಗವಾಗಿ ಇಂದಿನಿಂದ(ಶುಕ್ರವಾರ) ಮೂರು ದಿನಗಳ ಕಾಲ "ವೇದ ನಾದ ತರಂಗಿಣಿ" ಎಂಬ ಹೆಸರಿನ ಸಂಗೀತೋತ್ಸವವು ನಾಡಿನ ಪ್ರಸಿದ್ಧ ಕಲಾವಿದರ ಸಂಗಮದೊಂದಿಗೆ ಜರಗಲಿದೆ.
   ಇಂದು ಬೆಳಗ್ಗೆ ಸಂಗೀತ ಕಲಾಚಾರ್ಯ ಪ್ರೊ. ಕೆ. ವೆಂಕಟರಮಣ,  ಯು. ಬಿ. ಕುಣಿಕುಳ್ಳಾಯ ಕಾನಂಗಾಡ್, ಬ್ರಹ್ಮಶ್ರೀ ಮುಳ್ಳಪಳ್ಳಿ  ಕೃಷ್ಣನ್ ನಂಬೂದಿರಿ, ಹಾಗೂ ಕನ್ಯಾಕುಮಾರಿಯ ಬ್ರಹ್ಮಶ್ರೀ  ಕೃಷ್ಣನ್ ಅವರ ಸಮಕ್ಷಮ ಉದ್ಘಾಟನೆ ನೆರವೇರಲಿದ್ದು, ಅನಂತರ ವೀಣಾವಾದಿನಿ ಬಳಗದಿಂದ ನವಾವರಣ ಕೃತಿಗಳ ಪ್ರಸ್ತುತಿ, ಮಹಾ ಶ್ರೀಚಕ್ರ ಪೂಜೆ ಜರಗಲಿದೆ.
   ಎರಡನೆಯ ದಿನವಾದ ಶನಿವಾರ ಅತ್ಯಂತ ಅಪರೂಪದ, ನಿರಂತರ ಎಂಟು ಗಂಟೆ ಕಾಲ ಡಾ. ಎಂ ಬಾಲಮುರಳಿಕೃಷ್ಣ  ಅವರು ರಚಿಸಿದ 72 ಮೇಳಕರ್ತ ಕೃತಿಗಳ ಗಾಯನ ಇರುತ್ತದೆ. ಇದೇ ಸಂದರ್ಭದಲ್ಲಿ ಪಯ್ಯನ್ನೂರಿನ ಲೀಜಾ ದಿನೂಪ್ ಅವರಿಂದ ಕೊನೆಯ 6 ಮೇಳಕರ್ತ ಹಾಡುಗಳಿಗೆ ಭರತನಾಟ್ಯ ಪ್ರಸ್ತುತಿ ಮತ್ತು ಬಾಲಮುರಳಿಯವರ ವರ್ಣಚಿತ್ರ ಬಿಡಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಬಾಲಮುರಳಿ ಸಂಸ್ಮರಣವನ್ನು ಹಮ್ಮಿಕೊಳ್ಳಲಾಗಿದೆ.
   ಮೂರನೆಯ ದಿನ ಭಾನುವಾರ ಪಂಚರತ್ನ ಕೀರ್ತನೆ, ವೀಣಾವಾದಿನೀ ವಿದ್ಯಾಥರ್ಿಗಳಿಂದ ನಾದೋಪಾಸನೆ ಮತ್ತು ಕಾಸರಗೋಡಿನ ಸಂಗೀತ ಕಲಾವಿದ ಡಾ. ಶಂಕರರಾಜ್ ಆಲಂಪಾಡಿ ಅವರಿಗೆ ವೀಣಾವಾದಿನೀ ಪುರಸ್ಕಾರ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಸಂಜೆ ಪ್ರಸಿದ್ಧ ಕಲಾವಿದರಾದ ಚೆನ್ನೈಯ ವಿಷ್ಣುದೇವ ನಂಬೂದಿರಿ ಅವರಿಂದ ಕಣರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಲಿದೆ. ಮೂರು ದಿನಗಳ ಸಂಗೀತ ವೈಭವದಲ್ಲಿ ಪ್ರಸಿದ್ಧ ಕಲಾವಿದರು ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries