HEALTH TIPS

No title

              ಬಾಕ್ರಬೈಲು ಶಾಲೆಯಲ್ಲಿ ಗಮನ ಸೆಳೆವ ಜೈವ ವೈವಿಧ್ಯ ಪಾಕರ್್ ಉದ್ಘಾಟನೆ 20 ರಂದು
     ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರ ಅನುದಾನ ಬಳಸಿ ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿಮರ್ಿಸಲಾದ ಜೈವ ವೈವಿಧ್ಯ ಪಾಕರ್್ನ ಉದ್ಘಾಟನೆ ಹಾಗೂ ಶಾಲಾ ವಾಷರ್ಿಕೋತ್ಸವ ಫೆ.20 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
  ವಕರ್ಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸುವರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ದಿನೇಶ್ ವಿ, ಕಾಸರಗೋಡು ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ನಂದಿಕೇಶನ್ ಎನ್, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸಮೂತರ್ಿ, ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದ ಯೋಜನಾಧಿಕಾರಿ ಕೆ.ವಿಜಯಕುಮಾರ್ ಹಾಗೂ ಶಾಲಾ ಪ್ರಬಂಧಕ ಪಿ.ಮೋಹನ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಕರ್ಾಡಿ ಗ್ರಾ.ಪಂ.ಸದಸ್ಯೆ ಮೈಮೂನ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಿ.ಬಿ.ಅಬ್ದುಲ್ ಖಾದರ್, ಉಪಾಧ್ಯಕ್ಷ ಶಂಕರನಾರಾಯಣ ಭಟ್, ಮಾತೃಸಂಘದ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಶಿಕಲಾ ಶುಭಾಶಂಸನೆಗೈಯ್ಯುವರು. ಬಳಿಕ ಶಾಲಾ ವಿದ್ಯಾಥರ್ಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
    ಏನಿದು ಜೈವ ವೈವಿಧ್ಯ ಪಾಕರ್್:
  ಪ್ರಾಕೃತಿಕ ಅಸಮತೋಲನ, ಏರುತ್ತಿರುವ ತಾಪಮಾನಗಳಿಂದ ಸಂಕಷ್ಟಕ್ಕೊಳಗಾಗುತ್ತಿರುವ ಜೀವಜಾಲಗಳ ಅಸ್ತಿತ್ವವನ್ನು ಕಾಯ್ದುಕೊಳ್ಳುವಿಕೆಯ ನಿಟ್ಟಿನಲ್ಲಿ ಲಭ್ಯ ಅವಕಾಶವನ್ನು ಬಳಸಿ ಶಾಲೆಗಳಲ್ಲಿ ವಿವಿಧ ಗಿಡ-ಮರ, ಔಷಧೀಯ ಸಸ್ಯವನಗಳನ್ನು ನಿಮರ್ಿಸಲಾಗುತ್ತದೆ. ಬಾಕ್ರಬೈಲು ಕಿರಿಯ ಪ್ರಾಥಮಿಕ ಶಾಲೆ ಇತರೆಡೆಗಳಿಗಿಂತ ಹೆಚ್ಚಿನ ಆಸಕ್ತಿಯಿಂದ ವಿಸ್ತಾರವಾಗಿ ಜೀವವೈವಿಧ್ಯ ಪಾಕರ್್ ನಿಮರ್ಿಸಿದೆ. ಇದರ  ನಿಮರ್ಾಣಕ್ಕೆ ಶಾಸಕರ ನಿಧಿಯಿಂದ 25 ಸಾವಿರ ರೂ ಹಾಗೂ ಶಾಲಾ ಪ್ರಬಂಧಕರು 1,80,000 ರೂ.ಗಳನ್ನು ಉದಾರವಾಗಿ ನೀಡಿ ಜೈವ ವೈವಿಧ್ಯ ಪಾಕರ್್ ನಿಮರ್ಾಣ ಪೂರ್ಣಗೊಳಿಸಲಾಗಿದೆ.
  ಈ ಪಾಕರ್್ ನಲ್ಲಿ ವಿವಿಧ ಜಾತಿಯ ಹೂಗಿಡಗಳು, ಔಷಧೀಯ ಸಸ್ಯಗಳು, ಸಾವಯವ ತರಕಾರಿ ತೋಟ, ಜೀವಿಗಳ-ಜಲಚರಗಳ ವಾಸಯೋಗ್ಯ ಕೆರೆ, ಆಕರ್ಷಕ ಜಲಪಾತ, ಕಾರಂಜಿ, ಮಕ್ಕಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮೊದಲಾದ ಹಲವು ವಿಶಿಷ್ಟತೆಯನ್ನು ಇಲ್ಲಿ ಅಳವಡಿಸಲಾಗಿದೆ. ಶಾಲೆಯ ಸೀಮಿತ ಸೌಲಭ್ಯಗಳನ್ನು ಬಳಸಿ ಇವುಗಳನ್ನು ನಿಮರ್ಿಸಲಾಗಿದ್ದು, ವಿದ್ಯಾಥರ್ಿಗಳಲ್ಲಿ ವೈಜ್ಞಾನಿಕ ಮನೋಭಾವ, ವೀಕ್ಷಣೆಯ ಮೂಲಕ ತಾಕರ್ಿಕ ಚಿಂತನೆ, ಪರಿಸರದ ಬಗೆಗಿನ ಕಾಳಜಿ ಮೂಡಿಸಲು ಸಹಾಯಕವಾಗಲಿದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries