HEALTH TIPS

No title

            ಎಣ್ಮಕಜೆಯಲ್ಲಿ ಮಂಚಗಳ ವಿತರಣೆ
      ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು 2017-18 ರ ಆಥರ್ಿಕ ವರ್ಷದ ಅನುದಾನಲ್ಲಿ ಒಳಪಡಿಸಿ ಜಾರಿಗೊಂಡ ಪರಿಶಿಷ್ಟ ವಿಭಾಗದ ವಯೋ ವೃದ್ಧರಿಗೆ ಮಂಚ ವಿತರಣೆ ಇತ್ತೀಚೆಗೆ ಗ್ರಾಮ ಪಂಚಾಯತು ಪರಿಸರದಲ್ಲಿ ಜರಗಿತು.
  ಸುಮಾರು ನೂರೈವತ್ತರಷ್ಟು ಫಲಾನುಭವಿಗಳಿಗೆ ಮಂಚ ವಿತರಣೆ ಯೋಜನೆ ಇದಾಗಿದ್ದು ಟಿ.ಎಸ್.ಪಿ. ಅನುದಾನ ಮಾತ್ರವಲ್ಲದೆ ಜನರಲ್ ಫಂಡ್ ನಿಂದಲೂ ಅನುದಾನ ಮೀಸಲಿರಿಸಿ ಈ ಯೋಜನೆ ಜಾರಿಗೊಳಿಸಿದ್ದು ಹೆಚ್ಚಿನ ಜನರಿಗೆ ಅನುಕೂಲ ಪಡೆಯಲು ಸಾದ್ಯವಾಗಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು ಹೇಳಿದರು. ಮರಾಠಿ ಸಮುದಾಯದ  ಅಗತ್ಯಗಳಿಗೆ ಅನುಸಾರವಾಗಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪಂಚಾಯತು ಆಡಳಿತ ಸದಾ ಮುಂಚೂಣಿಯಲ್ಲಿದ್ದು ಎಲ್ಲರ ಅಪೇಕ್ಷೆಯಂತೆ ಸರಕಾರಕ್ಕೆ ವಿಷಯ ತಲಪಿಸಿ ನಿರಂತರ ಪ್ರಯತ್ನದಿಂದಾಗಿ 2018-19 ರ ಅವಧಿಯಲ್ಲಿ ಸುಮಾರು ಒಂದೂವರೆ ಕೋಟಿ ರೂ.ಗಳಿಗೂ ಮಿಕ್ಕಿದ ಅನುದಾನ ತರುವಲ್ಲಿ ನಾವು ಸಫಲರಾಗಿದ್ದೇವೆ ಎಂದು ಅಧ್ಯಕ್ಷರು ನುಡಿದರು.
   ಕ್ಷೇಮ ಕಾರ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಉದಯ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸದಸ್ಯರುಗಳಾದ ಮಮತಾ ರೈ, ಶಶಿಕಲ, ಸತೀಶ್ ಕುಲಾಲ್, ಹನೀಫ್ ನಡುಬೈಲು, ಪಂಚಾಯತಿ ಕಾರ್ಯದಶರ್ಿ ರೆಜಿಮೋನ್ ಮೊದಲಾದವರು ಉಪಸ್ಥಿತರಿದ್ದರು. ಸಹಕಾರ್ಯದಶರ್ಿ ಅಶ್ರಫ್ ಸ್ವಾಗತಿಸಿ, ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries