HEALTH TIPS

No title

            ಸಂಘಟನೆಗಳ ಬೆಳವಣಿಗೆುಂದ ಸಮಾಜದಲ್ಲಿ ಸುಧಾರಣೆ- ವಸಂತ ಪಂಡಿತ್

   ಕುಂಬಳೆ: ಅಖಿಲ ಕೇರಳ ಮಲೆಕುಡಿ-ಕುಡಿಯ ಸೇವಾ ಸಂಘ ಧರ್ಮತ್ತಡ್ಕದ ವಾಷರ್ಿಕ ಸಮ್ಮೇಳನ-2018 ಧರ್ಮತ್ತಡ್ಕ ಅಶ್ವಥ ಕಟ್ಟೆ ಸರೋಜ ಮಾಧವಂ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
  ಕಾರ್ಯಕ್ರಮವನ್ನು ಪುತ್ತಿಗೆ ಗ್ರಾ.ಪಂ ಸದಸ್ಯ ಚನಿಯ ಪಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಖ್ಯಾತ ಜ್ಯೋತಿಷಿ ವಸಂತ ಪಂಡಿತ್ ಗುಂಪೆ ಮಾತಾಡಿ, ಮನುಷ್ಯನಲ್ಲಿರುವ ಮಿತ ಆಕಾಂಕ್ಷೆ ಹಾಗೂ ನಿಧರ್ಿಷ್ಟ ಗುರಿ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ನೆರವಾಗುತ್ತದೆ. ನಾವು ಪಡುವ ಪರಿಶ್ರಮ ಆ ಗುರಿಯೆಡೆಗಿನ ಪ್ರಯಾಣವನ್ನು ಸುಲಭವಾಗಿಸುತ್ತದೆ.ಕಷ್ಟ ಪಡುವವರಿಗೆ ಸುಖ ಇದ್ದೇ ಇದೆ ಎಂದು ತಿಳಿಸಿದರು. ಸಂಘಟನೆಗಳನ್ನು ಬೆಳೆಸುವುದರಿಂದ ಸಮಾಜದಲ್ಲಿ ಸುಧಾರಣೆಯನ್ನು ತರುವುದು ಸುಲಭ. ಮಲೆನಾಡಿನಲ್ಲಿ ವಾಸಿಸುವ ಮಲೆ ಕುಡಿಯ ಜನರು ಸಂಘಟಿತರಾಗಿ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದು ತಮ್ಮ ಕಷ್ಟದ ಬದುಕಿನಿಂದ ಮುಕ್ತಿ ಹೊಂದಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಉದ್ಯೋಗದ ಅವಕಾಶಗಳ ಸದುಪಯೋಗ ಪಡಿಸಲು ಸಂಘಟನೆಗಳು ನೆರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಅಖಿಲ ಕೇರಳ ಮೆಲಕುಡಿ-ಕುಡಿಯ ಸೇವಾ ಸಂಘ ಧರ್ಮತ್ತಡ್ಕ ಇದರ ಅಧ್ಯಕ್ಷ ವೀರಪ್ಪ ಕುಡಿಯ ಕೊಜಪ್ಪೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಪೈವಳಿಕೆ ಗ್ರಾ.ಪಂ ಸದಸ್ಯೆ ಜಯಲಕ್ಷ್ಮಿ.ಭಟ್, ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ರಾಮಚಂದ್ರ ಭಟ್.ಎನ್, ರಾಜ್ಯ ಮಲ ಕುಡಿಯರ ಸಂಘ ಅಧ್ಯಕ್ಷ ಅಣ್ಣಪ್ಪ ಯನ್, ಕನರ್ಾಟಕ ರಾಜ್ಯ ಮಲಕುಡಿಯರ ಸಂಘ ಪ್ರಧಾನ ಕಾರ್ಯದಶರ್ಿ ಶ್ರೀಧರ ಗೌಡ ಈದು, ಕೇರಳ ರಾಜ್ಯ ಆದಿವಾಸಿ ಪೋರಂನ ಸಂಜೀವ ಪುಳ್ಕೂರು,  ಮಲಕುಡಿಯ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಸುಧಾಕರ ನಾಡ್ಪಾಲು , ಕನರ್ಾಟಕ ರಾಜ್ಯ ಮಲೆಕುಡಿಯರ ಸಂಘ ಉಪಾಧ್ಯಕ್ಷ ಬಾಬು ಕುಡಿಯ ಕೊಜಪ್ಪೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕ ಶಂಕರ ಗೌಡ ಕಟ್ಟದಕಾಡು ಸ್ವಾಗತಿಸಿ,ವಂದಿಸಿದರು. ಬಳಿಕ ಮೇಧಿನಿ ನಿಮರ್ಾಣ-ಮಹಿಷ ವಧೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.
   




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries